ಮನೆಮನೆಗೆ ತೆರಳಿ ಬಿಜೆಪಿ‌ ಕಾರ್ಯಕರ್ತರಿಂದ ಪ್ರಚಾರ

KannadaprabhaNewsNetwork |  
Published : Apr 25, 2024, 01:05 AM IST
ನಗರದಲ್ಲಿ ಬಿಜೆಪಿ‌ ಕಾರ್ಯಕರ್ತರಿಂದ ಮನೆಮನೆ ಪ್ರಚಾರ ಕಾರ್ಯ. | Kannada Prabha

ಸಾರಾಂಶ

ಲೋಕಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಮಹಾಸಂಪರ್ಕ ಅಭಿಯಾನ ಅಂಗವಾಗಿ ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯ 31 ಮತ್ತು 33ನೇ ವಾರ್ಡ್ಗಳಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿ ಮನೆಮನೆಗೆ ತೆರಳಿ ಬಿಜೆಪಿ ಅಭ್ಯರ್ಥಿ, ಸಂಸದ ರಮೇಶ ಜಿಗಜಿಣಗಿ ಅವರ ಪರ ಭರ್ಜರಿ ಪ್ರಚಾರ ನಡೆಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಲೋಕಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಮಹಾಸಂಪರ್ಕ ಅಭಿಯಾನ ಅಂಗವಾಗಿ ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯ 31 ಮತ್ತು 33ನೇ ವಾರ್ಡ್‌ಗಳಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿ ಮನೆಮನೆಗೆ ತೆರಳಿ ಬಿಜೆಪಿ ಅಭ್ಯರ್ಥಿ, ಸಂಸದ ರಮೇಶ ಜಿಗಜಿಣಗಿ ಅವರ ಪರ ಭರ್ಜರಿ ಪ್ರಚಾರ ನಡೆಸಿದರು.

ನಗರದ ವಾರ್ಡ್ ನಂ. 31 ರಲ್ಲಿರುವ ರಾಘವೇಂದ್ರ ಚಾಳ, ಅಜರೇಕರ ಚಾಳ ಬಡಾವಣೆಗಳಲ್ಲಿ ಮತ್ತು 33 ನೇ ವಾರ್ಡಿನ ಶಾಸ್ತ್ರಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿ ಮನೆ ಮನೆಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಕಳೆದ ಹತ್ತು ವರ್ಷಗಳ ಸಾಧನೆಗಳು, ಜನಪರ ಯೋಜನೆಗಳು, ದೇಶದಲ್ಲಾದ ಸಕಾರಾತ್ಮಕ ಬದಲಾವಣೆಗಳ ಜೊತೆಗೆ ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಅವರ ಮತಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಮನವರಿಕೆ ಮಾಡಿಕೊಟ್ಟು ಮತಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿಗಳಾದ ಕೃಷ್ಣಾ ಗುನ್ಹಾಳಕರ, ರಾಜೇಶ ತವಸೆ, ಮಾಧ್ಯಮ ಸಂಚಾಲಕ ವಿಜಯ ಜೋಶಿ, ಬಿಜೆಪಿ ಎಸ್ ಸಿ ಮೋರ್ಚಾ ಉಪಾಧ್ಯಕ್ಷ ವಿಠ್ಠಲ ನಡುವಿನಕೇರಿ, ಬಿಜೆಪಿ ಮುಖಂಡರಾದ ರೋಹನ ಆಪ್ಟೆ, ಆದಿತ್ಯ ತಾವರಗೇರಿ, ಆನಂದ ಮುಚ್ಚಂಡಿ, ಅನಿಲ ಉಪ್ಪಾರ, ನಿಖಿಲ್ ಮ್ಯಾಗೇರಿ, ಕೃಷ್ಣ ಮ್ಯಾಗೇರಿ, ಜಗದೀಶ ಮುಚ್ಚಂಡಿ, ಅಭಯ ಹದನೂರ, ಕಿರಣ ಸೌದಿ, ವಿಕಾಸ್ ಕಿಟ್ಟ, ಶಿವರಾಜ್ ಮಡಿವಾಳ, ಪ್ರತೀಕ ಮುಪ್ಪೈನಮಠ, ದಯಾನಂದ ಅಫ್ಜಲಪುರ, ಸತೀಶ ಮಂಟೂರ, ರೋಹನ್ ದಾಶಾಳ, ಪ್ರಮೋದ್ ಐನಾಪುರ, ವಿನಾಯಕ ದಹಿಂದೆ, ಗಣೇಶ ಶಿಂದೆ, ವಿನೋದ ಪತ್ತಾರ ಸೇರಿದಂತೆ ವಾರ್ಡಿನ ಪ್ರಮುಖರು ಹಾಗೂ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!