ಕನ್ನಡ ಪ್ರಭ ವಾರ್ತೆ ಚಿತ್ತಾಪುರ
ಪಟ್ಟಣದ ವಾರ್ಡ ನಂ ೩ ರಲ್ಲಿ ಬೂತ್ ನಂ ೭೧ ರಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದ ನಂತರ ಅವರು ಮಾತನಾಡಿ ರಾಧಾಕೃಷ್ಣ ದೊಡ್ಮನಿ ಅವರು ಅಭಿವೃದ್ದಿಯ ಚಿಂತಕರಾಗಿದ್ದು ಅವರು ಆಯ್ಕೆಯಾದಲ್ಲಿ ಜಿಲ್ಲೆಯ ಅಭಿವೃದ್ದಿಗೆ ಹೆಚ್ಚಿನ ಬಲ ಬಂದಾಂತಾಗುತ್ತದೆ. ಅಲ್ಲದೇ ಮಹಾಲಕ್ಷ್ಮೀ ಯೊಜನೆಯಡಿಯಲ್ಲಿ ವರ್ಷಕ್ಕೆ ೧ ಲಕ್ಷ ರೂಪಾಯಿ, ಆರೊಗ್ಯದ ಹಕ್ಕಿನಲ್ಲಿ ೨೫ ಲಕ್ಷ ಆರೊಗ್ಯ ವಿಮೆ, ಶ್ರಮಿಕ ನ್ಯಾಯದಡಿಯಲ್ಲಿ ನರೇಗಾ ಕೂಲಿ ಕಾರ್ಮಿಕರಿಗೆ ದಿನಕ್ಕೆ ೪೦೦ ವೇತನ ಹಾಗೂ ಇತರ ಯೊಜನೆಗಳನ್ನು ತನ್ನ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷವು ಹೊಸ ಗ್ಯಾರಂಟಿಗಳನ್ನು ನೀಡಿದೆ. ಅದಕ್ಕಾಗಿ ನಮ್ಮ ಪಕ್ಷದ ಅಭ್ಯರ್ಥಿಗೆ ತಮ್ಮ ಅಮೂಲ್ಯವಾದ ಮತವನ್ನು ನೀಡಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಮುಡಬೂಳಕರ್, ನಾಗರಾಜ ರೆಡ್ಡಿ, ಶಾಂತಾ ಭಜಂತ್ರಿ, ಬಸವರಾಜ ತಳವಾರ, ರಾಘವೇಂದ್ರ ಬುರ್ಲಿ, ಅಭಯ ಮುಡಬೂಳಕರ್, ವಿಜಯೇಂದ್ರ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.