ಸೂಲಿಬೆಲೆಯಲ್ಲಿ ಜೋಡಿ ಕೊಲೆ

KannadaprabhaNewsNetwork | Published : Dec 12, 2023 12:45 AM

ಸಾರಾಂಶ

ಸೂಲಿಬೆಲೆ: ಹೋಬಳಿಯ ವಾಲ್ಮೀಕಿನಗರದಲ್ಲಿ ಶನಿವಾರ ರಾತ್ರಿ ಜೋಡಿ ಕೊಲೆಯಾಗಿದ್ದು ಭಾನುವಾರ ಮಧ್ಯಾಹ್ನ ಬೆಳಕಿಗೆ ಬಂದಿದೆ. ಮೃತರ ಪುತ್ರಿ ನೀಡಿರುವ ದೂರಿನ ಮೇರಿಗೆ ಕೊಲೆಗೀಡಾಗಿರುವ ದಂಪತಿಯ ಮಗ ಮತ್ತು ಸೊಸೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸೂಲಿಬೆಲೆ: ಹೋಬಳಿಯ ವಾಲ್ಮೀಕಿನಗರದಲ್ಲಿ ಶನಿವಾರ ರಾತ್ರಿ ಜೋಡಿ ಕೊಲೆಯಾಗಿದ್ದು ಭಾನುವಾರ ಮಧ್ಯಾಹ್ನ ಬೆಳಕಿಗೆ ಬಂದಿದೆ. ಮೃತರ ಪುತ್ರಿ ನೀಡಿರುವ ದೂರಿನ ಮೇರಿಗೆ ಕೊಲೆಗೀಡಾಗಿರುವ ದಂಪತಿಯ ಮಗ ಮತ್ತು ಸೊಸೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸೂಲಿಬೆಲೆ ಗ್ರಾಮದ ಸಪಾರಿ ರಾಮಕೃಷ್ಣಪ್ಪ(70), ಪತ್ನಿ ಮುನಿರಾಮಕ್ಕ (65) ದಂಪತಿ ಕೊಲೆಗೀಡಾಗಿರುವ ದುರ್ದೈವಿಗಳು.

ಶನಿವಾರ ರಾತ್ರಿ ಬಳಿಕ ಪೋನ್ ಸಂಪರ್ಕಕ್ಕೆ ಸಿಗಲಿಲ್ಲವೆದು ಮೃತ ರಾಮಕೃಷ್ಣಪ್ಪನ 3ನೇ ಪುತ್ರಿ ಶಕುಂತಲಾ ಮನೆಗೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಆಸ್ತಿ ವಿಚಾರದಲ್ಲಿ ಅವರ ಮಗ ಮತ್ತು ಸೊಸೆಯೇ ಕೊಲೆ ಮಾಡಿದ್ದಾರೆಂದು ಮಗಳು ಶಕುಂತಲಾ ಪೊಲೀಸರಿಗೆ ದೂರು ನೀಡಿದ್ದಾರೆ. ಮಗ ಮತ್ತು ಸೊಸೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.

ಘಟನೆ ಏನು?:

ರಾಮಕೃಷ್ಣ ಮತ್ತು ಮುನಿರಾಮಕ್ಕ ಅವರ ಮೃತದೇಹಗಳಿದ್ದ ಸ್ಥಳ ಪರಿಶೀಲನೆಯಲ್ಲಿ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಲಾಗಿದೆ ಎಂಬುದು ಮೆಲ್ನೋಟಕ್ಕೆ ಕಂಡು ಬಂದಿದೆ. ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಹಾಗೂ ಸೂಲಿಬೆಲೆ ಠಾಣಾ ಇನ್ಸ್‌ಪೆಕ್ಟರ್ ರವಿ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಬೆರಳಚ್ಚು ತಜ್ಞರು ಮಾದರಿ ಪಡೆದುಕೊಂಡಿದ್ದಾರೆ. ಶ್ವಾನ ತಪಾಸನಾ ತಂಡವೂ ಪರಿಶೀಲಿಸಿದೆ. ಮೃತರ ದೇಹಗಳನ್ನು ಹೊಸಕೋಟೆ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಿ ವಾರಸುದಾರರಿಗೆ ನೀಡಲಾಗಿದೆ. ತಂದೆ ತಾಯಿಯನ್ನು ಕಳೆದುಕೊಂಡ 4 ಹೆಣ್ಣು ಮಕ್ಕಳು ಹಾಗೂ ಮೊಮ್ಮಕ್ಕಳ ಆಕ್ರಂದನ ಮುಗಿಲು ಮುಟ್ಟಿತ್ತು. (ಮಗ್‌ಶಾಟ್‌ ಪೋಟೋಸ್‌ ಮಾತ್ರ ಬಳಸಿ)

ಚಿತ್ರ; ೧೧ ಸೂಲಿಬೆಲೆ ೩ ಜೆಪಜೆ ನಲ್ಲಿದೆ

ಚಿತ್ರ; ೧೧ ಸೂಲಿಬೆಲೆ ೪ ಜೆಪಿಜೆ ನಲ್ಲಿದೆ

ಚಿತ್ರ; ೧೧ ಸೂಲಿಬೆಲೆ ೫ ಜೆಪಿಜೆ ನಲ್ಲಿದೆ

Share this article