ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಜಿಪಂ ಅಬ್ದುಲ್ ನಜೀರ್ ಸಭಾಂಗಣದಲ್ಲಿ ಮಂಗಳವಾರ ನಡೆದ ಸುರಕ್ಷಿತ ಅಂತರ್ಜಾಲ ದಿನ ಕಾರ್ಯಕ್ರಮದಲ್ಲಿ ಅವರು, ಇಂಟರ್ನೆಟ್ ದಿನ ಸ್ಮಾರ್ಟ್ ತಂತ್ರಜ್ಞಾನ, ಸುರಕ್ಷಿತ ಆಯ್ಕೆಗಳು, ಎಐನ ಸುರಕ್ಷಿತ ಮತ್ತು ಜವಾಬ್ದಾರಿಯುತ ಬಳಕೆಯನ್ನು ಅನ್ವೇಷಿಸುವುದರ ಕುರಿತು ಮಾತನಾಡಿದರು.
ಇನ್ಸ್ಟಾಗ್ರಾಮ್, ಫೇಸ್ ಬುಕ್ ಅಂತಹ ಸೋಶಿಯಲ್ ಮೀಡಿಯಾಗಳಲ್ಲಿ ಕೂಡ ಅತಿ ಹೆಚ್ಚು ಜನರು ಮೋಸ ಹೋಗುತ್ತಿದ್ದಾರೆ. ಹೀಗಾಗಿ, ಜನರಿಗೆ ವಿವಿಧ ಕಾರ್ಯಕ್ರಮಗಳ ಮೂಲಕ ಸೈಬರ್ ಕ್ರೈಂ ಬಗ್ಗೆ ಶಾಲಾ ಮಟ್ಟದಿಂದಲೂ ಸೋಷಿಯಲ್ ಮೀಡಿಯಾ ಎಐನ ಬಗ್ಗೆ ಮಾಹಿತಿ ತಿಳಿಸಬೇಕು ಎಂದರು.ಸೋಷಿಯಲ್ ಮೀಡಿಯಾಗಳಲ್ಲಿ ಪರ್ಸನಲ್ ವಿಷಯಗಳನ್ನು ಹಂಚಿಕೊಳ್ಳಬಾರದು. ಎಐನಿಂದ ಇನ್ಸ್ಟಾಗ್ರಾಮ್ ನಲ್ಲಿ ಬರುವ ರೀಲ್ಸ್ ಗಳ ಮೂಲಕ ಲಿಂಕ್ ಗಳನ್ನು ಅತಿ ಹೆಚ್ಚು ಫಾರ್ ವರ್ಡ್ ಮಾಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ಜಾಸ್ತಿ ಆಗುತ್ತಿದೆ ಎಂದರು.
ಮೈಸೂರು ನಗರದಲ್ಲಿ ಇತ್ತೀಚಿನ ದಿನಗಳಲ್ಲಿ 48 ಕೋಟಿ ವಂಚನೆಯಾಗಿದೆ. ಹೀಗಾಗಿ, ಯಾವುದೇ ಒಟಿಪಿ ಅಥವಾ ರಹಸ್ಯ ಮಾಹಿತಿಯನ್ನು ಎಂದಿಗೂ ಹಂಚಿಕೊಳ್ಳಬಾರದು. ಆನ್ ಲೈನ್ ನಲ್ಲಿ ಅತಿಯಾದ ಹಂಚಿಕೆಯನ್ನು ತಪ್ಪಿಸುವುದು, ಆ್ಯಪ್ ಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಗೌಪ್ಯತಾ ಸೆಟ್ಟಿಂಗ್ ಗಳನ್ನು ಬಳಸಬೇಕು ಎಂದು ಸಲಹೆ ನೀಡಿದರು.
ಜಿಪಂ ಉಪ ಕಾರ್ಯದರ್ಶಿಗಳಾದ ಬಿ.ಎಂ. ಸವಿತಾ, ಭೀಮಪ್ಪ, ಮುಖ್ಯ ಯೋಜನಾಧಿಕಾರಿ ಕೆ.ಬಿ. ಪ್ರಭುಸ್ವಾಮಿ, ಮುಖ್ಯ ಲೆಕ್ಕಧಿಕಾರಿ ಸಿದ್ದಗಂಗಮ್ಮ, ಸೈಬರ್ ಕ್ರೈಂ ಇನ್ಸ್ ಪೆಕ್ಟರ್ ಮಹೇಶ್ ಕುಮಾರ್ ಮೊದಲಾದವರು ಇದ್ದರು.