
ರಾಮನಗರ: ಏಳು ಮಲೆ ಬೆಟ್ಟದ ಒಡೆಯ ಶ್ರೀ ಮಲೈಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಆರಂಭವಾಗಿದ್ದು, ಎಲ್ಲಿ ನೋಡಿದರು ಭಕ್ತಾದಿಗಳ ದಂಡೇ ಕಾಣಿಸುತ್ತಿದೆ.
ಮಂಗಳವಾರ ಆರಂಭವಾದ ಕಾಲ್ನಡಿಗೆಯಲ್ಲಿ ಮಕ್ಕಳು, ಹಿರಿಯರು, ಕಿರಿಯರು ಎಂಬ ಬೇದಭಾವವಿಲ್ಲದೆ ಎಲ್ಲರೂ ಅರೆಕೆ ಹೊತ್ತು ಕಾಲ್ನಡಿಗೆಯಲ್ಲಿ ಸಾಗುತ್ತಿದ್ದಾರೆ. ಏಳಗಳ್ಳಿ ಗ್ರಾಮದ ಪುರದರಸಿ ಮುದ್ದಮ್ಮ, ಮಾರಮ್ಮ ಮತ್ತು ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ, ಈಡುಗಾಯಿ ಒಡೆದು ಪಾದಯಾತ್ರೆ ಆರಂಭಿಸುತ್ತಾರೆ. ಮುಂದೆ ಕಾವೇರಿ ನದಿ ದಾಟುವ ಮುಖೇನ ಸಂಗಮ ವನ್ಯ ಜೀವಿ ಪ್ರದೇಶದ ಕಾನನದ ಮಣ್ಣು ರಸ್ತೆಯಲ್ಲಿ ತೆರಳಿ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲ್ಲಯ್ಯನಪುರ, ಕೌದಳ್ಳಿ, ವಡಕೆಹಳ್ಳ, ತಾಳು ಬೆಟ್ಟದ ಮೂಲಕ ಬೆಟ್ಟದ ಬಸವದಾರಿಯಲ್ಲಿ ಬೆಟ್ಟ ಹತ್ತಿ ಪ್ರಸಿದ್ಧ ಮಾದಯ್ಯನಗಿರಿಗೆ ತಲುಪುತ್ತಾರೆ.
ಹರಕೆ ಹೊತ್ತ ಭಕ್ತರು ಕಾಲ್ನಡಿಗೆ ಸಾಗುವ ರಸ್ತೆಯ ಇಕ್ಕೆಲಗಳಲ್ಲಿ ಸಂಘ ಸಂಸ್ಥೆಗಳು ಬೃಹತ್ ಪೆಂಡಾಲ್‌ಗಳನ್ನು ಹಾಕಿದ್ದು ಬೆಟ್ಟಕ್ಕೆ ತೆರಳುವ ಭಕ್ತರಿಗೆ ಕುಡಿಯುವ ನೀರು, ಕಲ್ಲಂಗಡಿ ಹಣ್ಣು, ಬಿಸ್ಕೆಟ್, ಟೀ, ಪಾನಕ, ಮಜ್ಜಿಗೆ, ಕಡಲೆಕಾಯಿ, ಬಜ್ಜಿ ಬೋಂಡಾ, ಹೋಳಿಗೆ ಊಟ, ವಿವಿಧ ತಂಪು ಪಾನಿಯಗಳು, ಶೌಚಾಲಯಗಳು, ತಾತ್ಕಾಲಿಕ ಆಸ್ಪತ್ರೆಗಳು, ತಂಗಲು ವ್ಯವಸ್ಥೆಗಳನ್ನು ಮಾಡಿದ್ದಾರೆ. ಇನ್ನು ದಾರಿಯುದ್ದಕ್ಕೂ ತಮಟೆ, ಕಂಸಾಳೆ ಸದ್ದುಗಳು ಭಕ್ತರಿಗೆ ಸ್ಫೂರ್ತಿ ತುಂಬುತ್ತಿದ್ದರೆ, ಭಕ್ತರು ಪಠಿಸುತ್ತಿರುವ ಮಹದೇಶ್ವರ ಸ್ವಾಮಿಯ ಭಕ್ತಿಗೀತೆಗಳಿಗೆ ಪಾರವೇ ಇಲ್ಲದಂತಾಗಿದೆ.ಪಾದಯಾತ್ರೆ ಸಮಯದಲ್ಲಿ ಯಾವುದೇ ಅವಘಡಗಳು ನಡೆಯದಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದ ಬೆನ್ನಲ್ಲೆ ಜಿಲ್ಲಾಡಳಿತ ಎಚ್ಚೆತ್ತು ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೖಗೊಂಡಿದೆ. ಪಾದಯಾತ್ರಿಗಳ ಕಾವೇರಿ ನದಿ ದಾಟಲು ಅನುಕೂಲವಾಗುವಂತೆ ನದಿಯಲ್ಲಿ ನೀರಿನ ಹರಿವು ಕಡಿಮೆ ಮಾಡಿದ್ದು, ಹಗ್ಗ ಹಿಡಿದು ನದಿ ದಾಟಲು ಎನ್‌ಡಿಆರ್‌ಎಫ್ ತಂಡ ನೆರವಿಗೆ ನಿಂತಿದೆ.
ಕೋಟ್...............
-ಎಂ.ಬಿ.ಪರಮೇಶ್, ಕಾರ್ಯದರ್ಶಿ, ರೋಟರಿ ಸಿಲ್ಕ್ ಸಿಟಿ
ಶ್ರೀ ಮಲೈಮಹದೇಶ್ವರ ಬೆಟ್ಟಕ್ಕೆ ಏಳಗಳ್ಳಿಯಿಂದ ಕಾಲ್ನಡಿಗೆಯಲ್ಲಿ ತೆರಳುವ ಭಕ್ತರಿಗೆ ತಾಳು ಬೆಟ್ಟದಲ್ಲಿ ಬಮೂಲ್ ನಂದಿನಿ ಗ್ರೂಪ್ ಮತ್ತು ಎಂಪಿಸಿಎಸ್‌ಗಳ ಸಹಕಾರದಲ್ಲಿ 16ನೇ ವರ್ಷದ ದಾಸೋಹ ಸೇವೆ ಮತ್ತು ಭಕ್ತರಿಗೆ ಅಗತ್ಯ ಸೌಲಭ್ಯಗಳನ್ನು ನೀಡುತ್ತಿದ್ದೇವೆ, ಮಾದಪ್ಪನ ಸೇವೆ ಮಾಡಲು ಸಿಕ್ಕಿರುವ ಅವಕಾಶ ಪುಣ್ಯದ ಕೆಲಸವಾಗಿದೆ.
(ಸಂಘ್ರಹ ಚಿತ್ರ)