ಕನ್ನಡಪ್ರಭ ವಾರ್ತೆ ಮೈಸೂರು
ನಂತರ ಅವರು ಮಾತನಾಡಿ, ಇಲ್ಲಿ ನೀವು ಕೇವಲ ಶಿಕ್ಷಣವನ್ನಷ್ಟೇ ಅಲ್ಲ, ಜೀವನದ ಮೌಲ್ಯಗಳನ್ನು ಕಲಿಯುತ್ತೀರಿ. ಈ ಕ್ಯಾಂಪಸ್ ನಿಮ್ಮ ಕನಸುಗಳನ್ನು ನನಸಾಗಿಸುವ, ಸ್ನೇಹ ಬೆಳೆಸುವ ಮತ್ತು ನಿಮ್ಮ ವ್ಯಕ್ತಿತ್ವವನ್ನು ರೂಪಿಸುವ ಸ್ಥಳವಾಗಿದೆ. ಕಠಿಣ ಪರಿಶ್ರಮ ಮತ್ತು ಸಕಾರಾತ್ಮಕ ದೃಷ್ಟಿಕೋನದಿಂದ ಹೊಸ ಸವಾಲುಗಳನ್ನು ಎದುರಿಸಿ, ನಿಮ್ಮ ಕಾಲೇಜು ಜೀವನವನ್ನು ಅರ್ಥಪೂರ್ಣವಾಗಿ ಆನಂದಿಸಿ ಎಂದು ಶುಭ ಹಾರೈಸಿದರು.
ಬೇಕಾಗುವ ಕೌಶಲ, ಸಾಮಾರ್ಥ್ಯಗಳನ್ನು ಹಾಗೂ ಪ್ರಸ್ತುತ ಸನ್ನಿವೇಶಗಳಿಗೆ, ಆಧುನಿಕ ತಂತ್ರಜ್ಞಾನದ ಯುಗದಲ್ಲಿ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟವನ್ನು ಹೆಚ್ಚಿಸಲು ಪ್ರಶಿಕ್ಷಣಾರ್ಥಿಗಳಾದ ನೀವು ಸದಾ ಸಿದ್ದರಿರಬೇಕು ಎಂದರು.ಆಡಳಿತ ಮಂಡಳಿಯ ಅಧ್ಯಕ್ಷ ಎಂ. ಪುಟ್ಟಸ್ವಾಮಿ ಮಾತನಾಡಿ, ಕಾಲೇಜು ಎಂದರೆ ಕೇವಲ ಪುಸ್ತಕದ ಜ್ಞಾನವಲ್ಲ; ಇದು ಹೊಸ ಸ್ನೇಹಿತರನ್ನು ಮಾಡಿಕೊಳ್ಳುವ, ಹೊಸ ವಿಷಯಗಳನ್ನು ಅನ್ವೇಷಿಸುವ ಮತ್ತು ನಿಮ್ಮ ಸುಪ್ತ ಪ್ರತಿಭೆಗಳನ್ನು ಗುರುತಿಸಿಕೊಳ್ಳುವ ಸ್ಥಳವಾಗಿದೆ. ನೀವು ಇಲ್ಲಿಯವರೆಗೆ ಮಾಡಿದ ಕಠಿಣ ಪರಿಶ್ರಮಕ್ಕೆ ಇಂದು ಫಲ ಸಿಕ್ಕಿದೆ. ಈ ಸುಂದರ ಕ್ಯಾಂಪಸ್ ನಲ್ಲಿ ಕಳೆಯುವ ದಿನಗಳು ನಿಮ್ಮ ಜೀವನದ ಅತ್ಯುತ್ತಮ ನೆನಪುಗಳಾಗಲಿವೆ. ನಿಮ್ಮ ಮುಂದಿನ ಭವಿಷ್ಯವನ್ನು ರೂಪಿಸುತ್ತವೆ. ಸಮಯದ ಮಹತ್ವವನ್ನು ಅರಿತು, ಶ್ರದ್ಧೆಯಿಂದ ಅಧ್ಯಯನ ಮಾಡಿ. ನೀವು ಈ ಸಂಸ್ಥೆಯ ಭಾಗವಾಗಿರುವುದಕ್ಕೆ ನಮಗೆ ಹೆಮ್ಮೆ ಇದೆ, ಉತ್ತಮ ಕೌಶಲ್ಯಗಳನ್ನು, ಸಾಮಾರ್ಥ್ಯಗಳನ್ನು ಗಳಿಸುವುದರೊಂದಿಗೆ ಉತ್ತಮ ಪ್ರಜ್ಞಾವಂತನಾಗರೀಕ ಶಿಕ್ಷಕರಾಗಿ ಹೊರಹೊಮ್ಮಿ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲೆ ಡಾ.ಆರ್.ಜಿ. ಉಷಾ ಮಾತನಾಡಿ, ಕಾಲೇಜು ಹಾಗೂ ಆಡಳಿತ ಮಂಡಳಿಯವರನ್ನು ಪರಿಚಯಿಸುವುದರ ಮೂಲಕ, ಕಾಲೇಜಿನ ಸಮಸ್ತ ಕುಟುಂಬದ ಪರವಾಗಿ, ನೂತನ ವಿದ್ಯಾರ್ಥಿಗಳನ್ನು ಸ್ವಾಗತದಿಂದ ಬರಮಾಡಿಕೊಂಡರು. ಪ್ರಶಿಕ್ಷಣಾರ್ಥಿಗಳಾದ ನೀವುಗಳು ಜೀವನದ ಒಂದು ಪ್ರಮುಖ ಹಂತವನ್ನು ದಾಟಿ, ಅತ್ಯಂತ ರೋಮಾಂಚನಕಾರಿ ಮತ್ತು ಮಹತ್ವದ ಜೀವನಕ್ಕೆ ಕಾಲಿಟ್ಟಿದ್ದೀರಿ. ಕಾಲೇಜಿನ ಶಿಕ್ಷಣದ ಜೊತೆಗೆ ಸಾಂಸ್ಕೃತಿಕ, ಕ್ರೀಡಾ ಮತ್ತು ಇತರ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಎಂದರು.