ನವಲಗುಂದ:
ಪ್ರಿಯಾಂಕಾ ಕಮಲಾಕರ (29) ಹತ್ಯೆಯಾದ ಮಹಿಳೆ. ಜೂ.29 ರ ರಾತ್ರಿ ಈ ಘಟನೆ ನಡೆದಿದೆ.
ನನ್ನ ಮಗನಿಗಿಂತ ನೀನು ದಪ್ಪವಾಗಿದ್ದೀಯ. ಮದುವೆಯಾಗಿ ಎರಡು ವರ್ಷ ಕಳೆದರೂ ಮಕ್ಕಳಾಗಿಲ್ಲ. ತವರಿನಿಂದ ನೀನು ಆಭರಣ ತಂದಿಲ್ಲವೆಂದು ಹಿಂಸೆ ನೀಡಿ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಮೃತಳ ತಾಯಿ ದೂರು ನೀಡಿದ್ದಾಳೆಆರೋಪಿಗಳಾದ ಬಸವರಾಜ ವಡ್ಡರ ಹಾಗೂ ರೇಣವ್ವ ವಡ್ಡರ, ಸುಭಾಸ ವಡ್ಡರ ಹಾಗೂ ಸಿದ್ದರಾಮೇಶ ವಡ್ಡರ ಬಂಧಿಸಿ ವಿಚಾರಣೆಗೊಳಪಡಿಸಿದಾಗ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮದುವೆಯಾದ ಒಂದು ತಿಂಗಳಿನ ನಂತರ ಪತಿ ಹಾಗೂ ಅವರ ಮನೆಯವರು ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು. ಜನವರಿಯಲ್ಲಿ ನನ್ನ ಮಗಳು ತವರು ಮನೆಗೆ ಬಂದಾಗ ದೂರವಾಣಿ ಕರೆ ಮಾಡಿ ಕಿರುಕುಳ ನೀಡಿದ್ದರು. ಪದೇ ಪದೇ ನನ್ನ ಮಗನಿಗಿಂತಲೂ ದಪ್ಪವಾಗಿದ್ದೀಯಾ, ನಿನಗೆ ಮಕ್ಕಳಾಗುತ್ತಿಲ್ಲ, ತವರು ಮನೆಯಿಂದ ಆಭರಣ ತರುವಂತೆ ಕಿರುಕುಳ ನೀಡುತ್ತಿದ್ದರು. ಅದನ್ನು ನನ್ನ ಮಗಳು ಸಹಿಸಿಕೊಂಡಿದ್ದಳು. ಆದರೆ, ಜೂ. 29ರ ರಾತ್ರಿ ಪ್ರಿಯಾಂಕಾಳ ಕತ್ತು ಹಿಚುಕಿ ಕೊಲೆ ಮಾಡಿದ್ದಾರೆ ಎಂದು ಮೃತಳ ತಾಯಿ ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.