ಗುಂಡ್ಲುಪೇಟೆ: ತಾಲೂಕಿನ ಶಿವಪುರ ಸುತ್ತ ಮುತ್ತ ಬುಧವಾರ ಸಂಜೆ ಬೀಸಿದ ಬಿರುಗಾಳಿ ಸಹಿತ ಮಳೆಗೆ ರೈತರ ಹತ್ತಾರು ಎಕರೆ ಬಾಳೆ ಬೆಳೆ ನೆಲಸಮಗೊಂಡಿದೆ. ತಾಲೂಕಿನ ಶಿವಪುರ ಗ್ರಾಮದ ರೈತರಾದ ಅಶೋಕ, ಧನಂಜಯ್, ಲೋಕೇಶ್, ನಾಗರಾಜು, ಶಿವಪ್ಪ, ಸುರೇಶ್ ಹಾಗೂ ಚೌಡಹಳ್ಳಿ ಗ್ರಾಮದ ಶಿವಕುಮಾರ್ ಗೆ ಸೇರಿದ ಬಾಳೆ ಬೆಳೆ ನಾಶಗೊಂಡಿದೆ. ಶಿವಪುರ, ಹುಲ್ಲೇಪುರ, ಚೌಡಹಳ್ಳಿ ಸುತ್ತ ಮುತ್ತಲಿನ ಇನ್ನೂ ಕೆಲವು ರೈತರ ಬಾಳೆ ಬೆಳೆಗೆ ಬಿರುಗಾಳಿ ಸಹಿತ ಮಳೆ ಮಾರಕವಾಗಿ ಪರಿಣಮಿಸಿದೆ ಎಂದು ರೈತಸಂಘದ ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ ಹೇಳಿದ್ದಾರೆ. ಕೂಡಲೇ ತಾಲೂಕು ಆಡಳಿತ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿದ್ದಾರೆ.