ಬ್ಯಾಡಗಿ: ಅಂಗವಿಕಲರು ದೈಹಿಕ ಇತಿಮಿತಿ ಹೊಂದಿದ್ದು, ತಮ್ಮ ದೈನಂದಿನ ಬದುಕಿನ ಅಗತ್ಯತೆ ಮತ್ತು ಉದ್ಯೋಗ ನಿರ್ವಹಣೆ ಮಾಡಲು ಬೇರೋಬ್ಬರನ್ನು ಅವಲಂಬಿಸುವುದು ಬೇಡ ಎಂಬ ಸದುದ್ದೇಶದಿಂದ ಸರ್ಕಾರ ಹಲವಾರು ಯೋಜನೆಹನ್ನು ಜಾರಿಗೆ ತಂದು ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.ಪಟ್ಟಣದ ಸಿದ್ದೇಶ್ವರ ಕಲ್ಯಾಣಮಂಟಪದಲ್ಲಿ ಸೋಮವಾರ ಆಯೋಜಿದ್ದ(ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ) ಅಂಗವಿಕಲರಿಗೆ ಸ್ವಯಂಚಾಲಿತ ಬೈಕ್ ವಿತರಣಾ ಕಾರ‍್ಯಕ್ರಮದಲ್ಲಿ ಬೈಕ್ ವಿತರಿಸಿ ಮಾತನಾಡಿ, ದೈಹಿಕವಾಗಿ ಅಸಮರ್ಥರಿಗೆ ಸಹಾಯ ಮತ್ತು ಸಹಕಾರ ಸಲ್ಲಿಸುವುದರಿಂದ ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ ಎಂದರು.
ಮಾಜಿ ಶಾಸಕ ಸುರೇಶಗೌಡ ಪಾಟೀಲ ಮಾತನಾಡಿ, ಅಂಗವಿಕಲರ ಮಹತ್ವಾಕಾಂಕ್ಷೆಗಳು ಸಹಜ ಮಾನವರಂತೆಯೇ ಇರುತ್ತದೆ. ಕರುಣೆ ಮತ್ತು ಸಹಾನುಭೂತಿ ನೋಟವು ಅವರ ಬದುಕಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದರು.ವಿಶೇಷಚೇತನರ ಸಂಘದ ತಾಲೂಕಾಧ್ಯಕ್ಷ ಪಾಂಡುರಂಗ ಸುತಾರ, ದಾನಪ್ಪ ಚೂರಿ, ಬೀರಪ್ಪ ಬಣಕಾರ, ನಾಗರಾಜ ಆನ್ವೇರಿ, ಚೆನ್ನಬಸಪ್ಪ ಹುಲ್ಲತ್ತಿ, ಶಂಭನಗೌಡ ಪಾಟೀಲ, ಅಬ್ದುಲ್ ಮುನಾಫ್ ಏರೇಶಿಮಿ, ದುರ್ಗೆಶ ಗೋಣೆಮ್ಮನವರ, ಚಿಕ್ಕಣ್ಣ ಹಾದಿಮನಿ, ಮಾರುತಿ ಅಚ್ಚಿಗೇರಿ, ಖಾದರಸಾಬ ದೊಡ್ಡಮನಿ, ವಿ.ವಿ. ಹಿರೇಮಠ, ಸುರೇಶಗೌಡ ಪಾಟೀಲ, ಡಿ.ಎಚ್. ಬುಡ್ಡನಗೌಡ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಪಂಚವಟಿ ವನ ಅಭಿಯಾನಕ್ಕೆ ಇಂದು ಚಾಲನೆ
ಹಾನಗಲ್ಲ: ಹುಬ್ಬಳ್ಳಿಯ ವರದಶ್ರೀ ಫೌಂಡೇಶನ್ ವತಿಯಿಂದ ಪಟ್ಟಣದ ಕುಮಾರೇಶ್ವರ ವಿರಕ್ತ ಮಠದ ಆವರಣದಲ್ಲಿ ಬುಧವಾರ ಬೆಳಗ್ಗೆ 10 ಗಂಟೆಗೆ ಪಂಚವಟಿ ವನ(ಆಕ್ಸಿಜನ್ ಟವರ್) ನಿರ್ಮಿಸುವ ಅಭಿಯಾನಕ್ಕೆ ಮೂರುಸಾವಿರ ಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮಿಗಳು ಚಾಲನೆ ನೀಡಲಿದ್ದಾರೆ ಎಂದು ಸಂಸ್ಥಾಪಕ ಮಲ್ಲಿಕಾರ್ಜುನ ರಡ್ಡೇರ ತಿಳಿಸಿದರು.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಸಂಸ್ಥೆ ಈಗಾಗಲೇ 5 ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ತೀರ್ಥ ಕ್ಷೇತ್ರಗಳಲ್ಲಿ ಜಲಮೂಲಗಳ ರಕ್ಷಣೆ ಕೈಗೊಳ್ಳಲಾಗುತ್ತಿದೆ. ಕಳೆದ ವರ್ಷ 1008 ಕಡೆಲ್ಲಿ ಪಂಚವಟಿ ವನಗಳನ್ನು ನಿರ್ಮಿಸಲಾಗಿದ್ದು, ಶೇ. 90ರಷ್ಟು ಯಶಸ್ವಿಯಾಗಿವೆ.ತಾಲೂಕಿನಲ್ಲಿ ಒಟ್ಟು 1008 ಪಂಚವಟಿ ವನಗಳನ್ನು ನಿರ್ಮಿಸುವ ಯೋಜನೆ ರೂಪಿಸಲಾಗಿದ್ದು, ವಿರಕ್ತಮಠದ ಆವರಣದಲ್ಲಿ ಮೊದಲ ಪಂಚವಟಿ ವನ ನಿರ್ಮಾಣ ಕಾರ್ಯ ಜರುಗಲಿದೆ. ಮಠ- ಮಂದಿರಗಳ ಆವರಣ, ರೈತರ ಹೊಲ, ತೋಟಗಳು, ಶಾಲಾ- ಕಾಲೇಜು ಆವರಣ, ಸಾರ್ವಜನಿಕ ಸ್ಥಳಗಳಲ್ಲಿ ಪಂಚವಟಿ ವನ ನಿರ್ಮಿಸಲಾಗುತ್ತದೆ. ಇದಕ್ಕೆ ಧಾರ್ಮಿಕ ಹಿನ್ನೆಲೆಯಿದ್ದು, ಬಿಲ್ವಪತ್ರಿ, ಬನ್ನಿ, ಬೇವು, ಅರಳಿ, ಅತ್ತಿಗಿಡಗಳನ್ನು ನೆಡುವ ಮೂಲಕ ಪರಿಸರ ಕಾಪಾಡುವ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಫೌಂಡೇಶನ್‌ನ ಕಾರ್ಯದರ್ಶಿ ಸಿದ್ದು ಶಿರಸಂಗಿ, ಸಂಘಟಕರಾದ ಜಗದೀಶ ಕೊಂಡೋಜಿ, ಕುಮಾರ ಹತ್ತಿಕಾಳ, ಅಶೋಕ ಕಮಾಟಿ, ರಮೇಶ ಹಳೇಕೋಟಿ, ವಿಜಯ ಕುಬಸದ, ಅರುಣ ನಾಗಜ್ಜನವರ, ವಿರುಪಾಕ್ಷಪ್ಪ ಕಡಬಗೇರಿ, ರವಿ ಲಕ್ಷ್ಮೇಶ್ವರ ಉಪಸ್ಥಿತರಿದ್ದರು.