ಕಲಾಪ್ರೇಮಿಗಳು ಕ್ಷೀಣಿಸಿದರೆ ನಾಟಕ ಕಲೆ ಕ್ಷೀಣ

KannadaprabhaNewsNetwork |  
Published : Jul 02, 2025, 12:20 AM IST
ನಾಟಕ | Kannada Prabha

ಸಾರಾಂಶ

ಕನ್ನಡಪ್ರಭವಾರ್ತೆ, ಬಸವನಬಾಗೇವಾಡಿ ಇಂದಿನ ತಂತ್ರಜ್ಞಾನ ಯುಗದಲ್ಲಿ ರಂಗಭೂಮಿ ನಾಟಕಗಳನ್ನು ನೋಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಕಲಾಪ್ರೇಮಿಗಳು ಕ್ಷೀಣಿಸಿದರೆ ನಾಟಕ ಪ್ರದರ್ಶನ ನಶಿಸಿ ಹೋಗುತ್ತದೆ. ನಾಟಕ ಪ್ರದರ್ಶನ ನಶಿಸಿ ಹೋಗದಂತೆ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಹೇಳಿದರು.

ಕನ್ನಡಪ್ರಭವಾರ್ತೆ, ಬಸವನಬಾಗೇವಾಡಿ

ಇಂದಿನ ತಂತ್ರಜ್ಞಾನ ಯುಗದಲ್ಲಿ ರಂಗಭೂಮಿ ನಾಟಕಗಳನ್ನು ನೋಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಕಲಾಪ್ರೇಮಿಗಳು ಕ್ಷೀಣಿಸಿದರೆ ನಾಟಕ ಪ್ರದರ್ಶನ ನಶಿಸಿ ಹೋಗುತ್ತದೆ. ನಾಟಕ ಪ್ರದರ್ಶನ ನಶಿಸಿ ಹೋಗದಂತೆ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಹೇಳಿದರು.

ಪಟ್ಟಣದ ವಿರಕ್ತಮಠದ ಶಿವಾನುಭವ ಮಂಟಪದಲ್ಲಿ ಸವಣೂರ ತಾಲೂಕಿನ ಮಾವೂರಿನ ಬಾಲಲೀಲಾ ಸಂಗಮೇಶ್ವರ ನಾಟ್ಯ ಸಂಘದ ಹಿರಿಯ ಕಲಾವಿದ ಶಿವಲಿಂಗಯ್ಯ ಹಿರೇಮಠ ಅವರ ಮಗನ ಶಿಕ್ಷಣದ ಸಹಾಯರ್ಥ ಪ್ರದರ್ಶನಗೊಂಡ ಬಂಜೆ ತೊಟ್ಟಿಲು ನಾಟಕ ಚಾಲನೆ ವೇಳೆ ಮಾತನಾಡಿದರು.

ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ ಮಾತನಾಡಿ, ಪ್ರತಿಯೊಬ್ಬರೂ ಕಲೆಯನ್ನು ಪ್ರೋತ್ಸಾಹಿಸಬೇಕು. ಇದರಿಂದ ಕಲಾವಿದರನ್ನು ಪೋಷಿಸಿದಂತಾಗುತ್ತದೆ. ಬಸವನಬಾಗೇವಾಡಿ ಪಟ್ಟಣದಲ್ಲಿ ಸದಾ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ ಎಂದರು.

ನ್ಯಾಯವಾದಿ ಬಿ.ಕೆ.ಕಲ್ಲೂರ ಮಾತನಾಡಿ, ಇಂದು ಟಿವ್ಹಿ ಧಾರಾವಾಹಿ ಹಾವಳಿದಿಂದಾಗಿ ಕಲಾವಿದರ ಬದುಕು ದುಸ್ತರವಾಗುತ್ತಿದೆ. ಕಲಾವಿದರ ಬದುಕು ಸಾಗಿಸಲು ಎಲ್ಲರೂ ಸಹಕಾರ ನೀಡಬೇಕೆಂದರು.

ನ್ಯಾಯವಾದಿ ರವಿ ರಾಠೋಡ, ಶಿಕ್ಷಕ ಬಸವರಾಜ ಬಿದರಕುಂದಿ, ಅನಿಲ ಅಗರವಾಲ, ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಬಸವರಾಜ ಗೊಳಸಂಗಿ, ಬಸವೇಶ್ವರ ಸೇವಾ ಸಮಿತಿ ಸದಸ್ಯ ಎಂ.ಜಿ.ಆದಿಗೊಂಡ, ಬಸವರಾಜ ಹಾರಿವಾಳ, ಸಾಹಿತಿ ವಿವೇಕಾನಂದ ಕಲ್ಯಾಣಶೆಟ್ಟಿ, ನಿವೃತ್ತ ಸೈನಿಕ ರುದ್ರಗೌಡ ಬಿರಾದಾರ, ಮುಖಂಡರಾದ ಸಂಕನಗೌಡ ಪಾಟೀಲ, ಪ್ರಕಾಶ ಕುಲಕರ್ಣಿ ಇತರರು ಇದ್ದರು. ಅರುಣ ಬಸಾಪುರ ಪ್ರಾರ್ಥಿಸಿದರು. ಕೊಟ್ರೇಶ ಹೆಗ್ಡಾಳ ಸ್ವಾಗತಿಸಿದರು. ಮಹಾಂತೇಶ ಸಂಗಮ ನಿರೂಪಿಸಿದರು. ಶಿವಲಿಂಗಯ್ಯ ಹಿರೇಮಠ ವಂದಿಸಿದರು.

ಕಲಾವಿದರಾದ ಅನಿತ ಹುಬ್ಬಳ್ಳಿ, ಶಶಿಕುಮಾರ ಜೀವಾಪುರ, ಮಂಜು ಹುಬ್ಬಳ್ಳಿ, ಶಿವಲಿಂಗಸ್ವಾಮಿ ಮಾವೂರು, ಚನ್ನವೀರಯ್ಯ, ಈರಣ್ಣ ಮೈಂದರಗಿ, ಸಾವಿತ್ರಮ್ಮ ದಾವಣಗೆರೆ, ಮಹಾದೇವಿ ದಾವಣಗೆರೆ, ಪ್ರೇಮಾಬಾಯಿ ತಾಳಿಕೋಟಿ, ಮಂಜುಳಾ ಹಾವೇರಿ ಅಭಿನಯಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಖಾಸಗಿ ಶಾಲೆಗಿಂತ ಅಂಗನವಾಡಿಯಲ್ಲಿ ಉತ್ತಮ ಶಿಕ್ಷಣ
ಲಕ್ಷ್ಮೇಶ್ವರದಲ್ಲಿ ಸಂಭ್ರಮದ ಅಗಸ್ತ್ಯ ತೀರ್ಥ ಜಾತ್ರಾ ಮಹೋತ್ಸವ