ಡಾ.ಅಂಬೇಡ್ಕ‌ರ್‌ರ ಚಿಂತನೆ ಇಂದಿನ ಸಮಾಜಕ್ಕೆ ಅತ್ಯಗತ್ಯ

KannadaprabhaNewsNetwork |  
Published : Dec 07, 2024, 12:33 AM IST
ಗದಗ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಭಾ ಭವನದಲ್ಲಿ ಡಾ. ಬಿ.ಆರ್.ಅಂಬೇಡ್ಕರ ಅವರ 68ನೇ ಮಹಾ ಪರಿನಿರ್ವಾಹಣ ದಿನ ಆಚರಿಸಲಾಯಿತು. | Kannada Prabha

ಸಾರಾಂಶ

ಹಣ ಆಸ್ತಿ ಕಳೆದು ಹೋಗಬಹುದು ಪಡೆದ ವಿದ್ಯೆ ಅಳಿದು ಹೋಗುವುದಿಲ್ಲ. ಶಿಕ್ಷಣದ ಮೂಲಕ ಸಮಾನತೆ ನೀಡುವಲ್ಲಿ ಅಂಬೇಡ್ಕರ್ ಪಾತ್ರ ಮಹತ್ತರದಾಗಿದೆ

ಗದಗ: ಡಾ. ಅಂಬೇಡ್ಕ‌ರ್ ಚಿಂತನೆಗಳು ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿದ್ದು, ಅವರು ಒಬ್ಬ ಆಧುನಿಕ ಭಾರತದ ಸಂವಿಧಾನದ ಪಿತಾಮಹ ಎಂದು ಡಾ. ಪ್ರಕಾಶ ದೇಶಪಾಂಡೆ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಭಾಭವನದಲ್ಲಿ ಡಾ.ಬಿ.ಆರ್. ಅಂಬೇಡ್ಕರ್‌ 68ನೇ ಮಹಾ ಮಹಾಪರಿನಿರ್ವಾಣ ದಿನ ನಿಮಿತ್ತ ಡಾ.ಬಿ.ಆರ್. ಅಂಬೇಡ್ಕರ್‌ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ಹಣ ಆಸ್ತಿ ಕಳೆದು ಹೋಗಬಹುದು ಪಡೆದ ವಿದ್ಯೆ ಅಳಿದು ಹೋಗುವುದಿಲ್ಲ. ಶಿಕ್ಷಣದ ಮೂಲಕ ಸಮಾನತೆ ನೀಡುವಲ್ಲಿ ಅಂಬೇಡ್ಕರ್ ಪಾತ್ರ ಮಹತ್ತರದಾಗಿದೆ. ಮಹಿಳೆಯರಿಗೆ ಈಗ ಸ್ಥಾನಮಾನ ಸಿಗುತ್ತಿದೆ ಎಂದರೆ ಅದಕ್ಕೆ ಸಂವಿಧಾನ ಕಾರಣ. ಅಂಬೇಡ್ಕರ್ ತತ್ವಾದರ್ಶ ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಪ್ರೊ.ಸತ್ತಾರ ಬಡೇಖಾನ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಸಂವಿಧಾನ ಬರೆದ ಜಗತ್ತಿನ ಶ್ರೇಷ್ಠ ವ್ಯಕ್ತಿ. ಇಂದು ಪರಿನಿರ್ವಾಣ ಸಂದರ್ಭದಲ್ಲಿ ನಾವೆಲ್ಲರೂ ಅವರಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.

ಪ್ರೊ. ಸಿದ್ಧಲಿಂಗೇಶ ಸಜ್ಜನಶೆಟ್ಟರ ಮಾತನಾಡಿ, ಅಂಬೇಡ್ಕರ್ ಚಿಂತನೆಗಳನ್ನು ಇಂದಿನ ಯುವ ಸಮುದಾಯ ತಿಳಿದುಕೊಳ್ಳಬೇಕಾಗಿದೆ. ಸಾಮಾಜಿಕ ನ್ಯಾಯ, ಮಹಿಳಾ ಸಬಲೀಕರಣ ಅರ್ಥಶಾಸ್ತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಂಬೇಡ್ಕರ್ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.

ಡಾ.ಸುಜಾತಾ ಬರದೂರ ಮಾತನಾಡಿ, ಶೂನ್ಯದಿಂದ ಎತ್ತರಕ್ಕೆ ಏರಿದವರಲ್ಲಿ ಅಂಬೇಡ್ಕರ್ ಒಬ್ಬರು ಮಾತ್ರ. ಎಲ್ಲರನ್ನು ಒಳಗೊಳ್ಳುವ ಸಾಮಾಜಿಕ ನ್ಯಾಯ ನೀಡುವಲ್ಲಿ ಭಾರತಕ್ಕೆ ಸಂವಿಧಾನ ನೀಡುವ ಮೂಲಕ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.

ಈ ವೇಳೆ ವಿದ್ಯಾರ್ಥಿನಿ ಅನುಪ್ರೀಯ ಭಾಪುರೆ ಮಾತನಾಡಿದರು.

ವ್ಯವಸ್ಥಾಪಕ ಎಫ್.ಎಸ್. ಕರಬುಡ್ಡಿ, ಪ್ರೊ. ಪ್ರಕಾಶ ಕರಿಗಾರ, ಪ್ರೊ. ಮಹಬೂಬ ಆರೀಫ ಸದರ ಸೋಪವಾಲೆ, ಪ್ರೊ. ತೇಜಸ್ವಿನಿ, ಪ್ರೊ. ಸತೀಶ ಸರ್ವಿ, ಪ್ರೊ. ಶ್ರೀದೇವಿ ದಾಸರ, ಪ್ರೊ. ರಿಯಾಜಅಹ್ಮದ ದೊಡ್ಡಮನಿ, ಪ್ರೊ. ಪ್ರತಿಭಾ ಚವ್ಹಾಣ, ಬಸವರಾಜ ದಾಣಿ, ಲಕ್ಷ್ಮೀ ನಾಗರಾಳ, ಶ್ರೀದೇವಿ ಸೇರಿದಂತೆ ವಿದ್ಯಾರ್ಥಿನಿಯರು ಇದ್ದರು. ಪ್ರೊ. ಸಜ್ಜನ ಶೆಟ್ಟರ ನಿರೂಪಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!