ಡಾ. ಅಪ್ಪಾಜಿ ಪುಣ್ಯಸ್ಮರಣೆ: ಭಾವಪೂರ್ಣ ನುಡಿನಮನ

KannadaprabhaNewsNetwork |  
Published : Sep 03, 2026, 01:15 AM IST
ಫೋಟೋ- ಅಪ್ಪಾಜಿ 1 ಮತ್ತು 3 ಮತ್ತು ಪೂಜ್ಯ 4ಕಲಬುರಗಿಯಲ್ಲಿಂದು ನಡೆದ ಲಿಂ. ಡಾ. ಶರಣಬಸವಪ್ಪ ಅಪ್ಪಾಜಿ ಪ್ರಥಮ ಪುಣ್ಯಸ್ಮರಣೋತ್ಸವ ನೋಟಗಳು | Kannada Prabha

ಸಾರಾಂಶ

ಕಲಬುರಗಿಯ ದಾಸೋಹ ಮಂದಿರದ ಅನುಭವ ಮಂಟಪದಲ್ಲಿ ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿ ಲಿಂ. ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಅವರ ಪ್ರಥಮ ಪುಣ್ಯಸ್ಮರಣೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ವಿದ್ಯಾ ಭಂಡಾರಿಗೆ ಭಾವಪೂರ್ಣ ನುಡಿನಮನ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಬುರಗಿಯ ದಾಸೋಹ ಮಂದಿರದ ಅನುಭವ ಮಂಟಪದಲ್ಲಿ ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿ ಲಿಂ. ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಅವರ ಪ್ರಥಮ ಪುಣ್ಯಸ್ಮರಣೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ವಿದ್ಯಾ ಭಂಡಾರಿಗೆ ಭಾವಪೂರ್ಣ ನುಡಿನಮನ ಸಲ್ಲಿಸಿದರು.

ನಗರದ ಶರಣಬಸವೇಶ್ವರ ದೇವಸ್ಥಾನ ಸಂಕೀರ್ಣದಲ್ಲಿರುವ ಅನುಭವ ಮಂಟಪವನ್ನು ಅಲಂಕರಿಸಲಾಗಿತ್ತು. ರಾಜಕೀಯ ಪಕ್ಷಗಳ ಮುಖಂಡರು, ಶಿಕ್ಷಣ, ಸಾಮಾಜಿಕ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಜನರು ಸಮಾರಂಭದಲ್ಲಿ ಪಾಲ್ಗೊಂಡು ಅಪ್ಪಾಜಿಯವರಿಗೆ ಗೌರವ ನಮನ ಸಲ್ಲಿಸಿದರು.

ದಾವಣಗೆರೆ ಲೋಕಸಭಾ ಸದಸ್ಯೆ ಡಾ. ಪ್ರಭಾ ಶಾಮನೂರು ಅವರು, ಡಾ. ನೀಲಾಂಬಿಕಾ ಪೊಲೀಸ್ ಪಾಟೀಲ ರಚಿಸಿರುವ ‘ಮಹಾಮಾನವ’ ಭಾಗ-1 ಕೃತಿ, ಡಾ. ಎನ್.ಎಸ್. ಪಾಟೀಲ ಅವರು ರಚಿಸಿರುವ ಡಾ. ಅಪ್ಪಾಜಿಯವರ ಜೀವನ ಚರಿತ್ರೆ ‘ದಾಸೋಹಮೂರ್ತಿ ವಿದ್ಯಾಭಂಡಾರಿ’ ಕೃತಿ ಹಾಗೂ ಇಂಗ್ಲೀಷ್‌ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರಕಾಶ ನೆಲ್ಲಗಿಯವರು ಸಿದ್ಧಪಡಿಸಿರುವ ಡಾ. ಅಪ್ಪಾಜಿ ಪ್ರತಿಪಾದಿಸಿದ 16 ದಾಸೋಹ ಸೂತ್ರಗಳನ್ನು ವಿವರಿಸುವ ವಿಡಿಯೋ ಕ್ಯಾಸೆಟ್‍ಗಳನ್ನು ಬಿಡುಗಡೆ ಮಾಡಿದರು.

ಸಂಸದೆ ಡಾ. ಪ್ರಭಾ ಮಾತನಾಡಿ, ಡಾ. ಶರಣಬಸವಪ್ಪ ಅಪ್ಪಾಜಿಯವರು ಶಿಕ್ಷಣ ಹಾಗೂ ಮಹಿಳಾ ಸಬಲೀಕರಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ, ಉ- ಕ ಪ್ರಥಮ ಖಾಸಗಿ ವಿವಿಯನ್ನು ಸ್ಥಾಪಿಸಿದವರು ಅಪ್ಪಾಜಿಯವರೆಂದು ಕೊಂಡಾಡಿದರು.

85 ಶಿಕ್ಷಣ ಸಂಸ್ಥೆಗಳ ಸರಣಿಯನ್ನು ಹಾಗೂ ಒಂದು ಖಾಸಗಿ ವಿವಿಯನ್ನು ಮುನ್ನಡೆಸುತ್ತಾ ವಿವಿಧ ಕೋರ್ಸ್‍ಗಳಲ್ಲಿ ಸುಮಾರು 40,000 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದು ಮತ್ತು ಸಂಘ ಹಾಗೂ ಶರಣಬಸವ ವಿವಿ ಶಿಕ್ಷಣ ಸಂಸ್ಥೆಗಳಲ್ಲಿ 5,000ಕ್ಕೂ ಅಧಿಕ ಶಿಕ್ಷಕರು ಹಾಗೂ ಸಿಬ್ಬಂದಿಗೆ ಜೀವನೋಪಾಯ ಕಲ್ಪಿಸಿರುವುದು, ಸಂಸತ್‌ನಲ್ಲಿ ಬಸವೇಶ್ವರರ ಪ್ರತಿಮೆ ಸ್ಥಾಪಿಸಿರೋದು ಅಮೋಘ ಸಾಧನೆ ಎಂದರು.ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ ಮಾತನಾಡಿ, ಡಾ. ಅಪ್ಪಾಜಿಯವರ ಪ್ರಥಮ ಪುಣ್ಯಸ್ಮರಣೋತ್ಸವದಲ್ಲಿ ಸಮಾಜದ ಎಲ್ಲ ವರ್ಗಗಳ ಜನರು ಪಾಲ್ಗೊಂಡಿರುವುದು ಅವರ ಮೇಲಿನ ಜನರ ಅಪಾರ ಪ್ರೀತಿ ಮತ್ತು ಅಭಿಮಾನಕ್ಕೆ ಸಾಕ್ಷಿ ಎಂದರು.ಲಿಂ. ಡಾ. ಶರಣಬಸವಪ್ಪ ಅಪ್ಪಾ ಅವರ ಪ್ರಥಮ ಪುಣ್ಯಸ್ಮರಣೋತ್ಸವದ ಸಂದರ್ಭದಲ್ಲಿ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ ಅವರು, ಅಪ್ಪಾಜಿಯವರ ಸ್ಮರಣಾರ್ಥ ವಚನ ಟಿವಿ ವತಿಯಿಂದ ನೀಡಲಾಗುವ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಈ ವರ್ಷ ಡಾ. ಪ್ರಭಾ ಮಲ್ಲಿಕಾರ್ಜುನ ಶಾಮನೂರು ಅವರಿಗೆ ನೀಡಲಾಗುವುದು ಎಂದು ಘೋಷಿಸಿದರು.ಹಾರಕೂಡ ಸಂಸ್ಥಾನ ಮಠದ ಪೂಜ್ಯ ಡಾ. ಚೆನ್ನವೀರ ಶಿವಾಚಾರ್ಯರು, 9ನೇ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪ ಅವರು ಕೇವಲ 6ನೇ ವಯಸ್ಸಿನಲ್ಲಿಯೇ ಸಂಸ್ಥಾನದ ಪೀಠಾಧಿಪತಿಗಳಾಗಿ ಪಟ್ಟಾಭಿಷಿಕ್ತರಾಗಿದ್ದರು ಎಂದು ಅವರು ಸ್ಮರಿಸಿದರು.ಆಂಧ್ರಪ್ರದೇಶದ ಶ್ರೀಶೈಲಂ ಸಾರಂಗ ಮಠದ ಜಗದ್ಗುರು ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ, ಕಲಬುರಗಿ ಲೋಕಸಭಾ ಸದಸ್ಯ ಡಾ. ರಾಧಾಕೃಷ್ಣ ದೊಡ್ಡಮನಿ, ಮುತ್ತ್ಯಾನ ಬಬಲಾದ ಮಠದ ಪೀಠಾಧಿಪತಿ ಡಾ. ಗುರುಪಾದಲಿಂಗ ಮಹಾಶಿವಯೋಗಿಗಳು ಉಪಸ್ಥಿತರಿದ್ದರು.ಡಾ. ಅಪ್ಪಾಜಿಯವರ ಪುತ್ರಿಯರಾದ ಭವಾನಿ, ಶಿವಾನಿ, ಮಹೇಶ್ವರಿ, ಡಾ. ಗಂಗಾಂಬಿಕಾ ನಿಷ್ಠಿ, ಉಮಾ ಕಾಡಾದಿ, ಡಾ. ಶಾಂತಲಾ ನಿಷ್ಠಿ, ಶ್ರೀಮತಿ ಗೋದಾವರಿ ಭೀಮಳ್ಳಿ, ಮತ್ತು ಡಾ. ವೀರನಾಥ ಮಹಾರಾಜ, ಔಸಾ, ಆದಿನಾಥ ಮಹಾರಾಜ, ಡಾ. ಅಲ್ಲಮಪ್ರಭು ದೇಶಮುಖ, ವಿಜಯಲಕ್ಷ್ಮೀ ಮುದಗಲ್, ಚಂದ್ರಶೇಖರ ನರಕೆ, ಪರಿವಾರದ ಸದಸ್ಯರನ್ನು ಸನ್ಮಾನಿಸಲಾಯಿತು.ಶಾಸಕರಾದ ಅಲ್ಲಮಪ್ರಭು ಪಾಟೀಲ, ಎಂ.ವೈ. ಪಾಟೀಲ, ಬಿ.ಆರ್. ಪಾಟೀಲ, ಬಸವರಾಜ ಮತ್ತಿಮೂಡ, ತಿಪ್ಪಣ್ಣಪ್ಪ ಕಮಕನೂರ, ಬಿ.ಜಿ. ಪಾಟೀಲ, ಶಶೀಲ ನಮೋಶಿ, ಜಗದೇವ ಗುತ್ತೇದಾರ, ಮಾಜಿ ಶಾಸಕರಾದ ಮಾಲಿಕಯ್ಯ ಗುತ್ತೇದಾರ, ದತ್ತಾತ್ರೇಯ ಪಾಟೀಲ ರೇವೂರ, ದೊಡ್ಡಪ್ಪಗೌಡ ನರಿಬೋಳ, ಮಾಜಿ ಸಂಸದ ಉಮೇಶ ಜಾಧವ್ ಇದ್ದರು.

ತಂದೆ ಸೇವೆ ನೆನೆದು ಚಿ. ದೊಡ್ಡಪ್ಪ ಅಪ್ಪ ಭಾವುಕ: ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ಚಿ. ದೊಡ್ಡಪ್ಪ ಅಪ್ಪ ಮಾತನಾಡಿ, ತಮ್ಮ ತಂದೆ ಡಾ. ಅಪ್ಪಾಜಿಯವರೊಂದಿಗೆ ಹೊಂದಿದ್ದ ಆತ್ಮೀಯ ಬಾಂಧವ್ಯ ಹಾಗೂ ಪ್ರತಿದಿನ ಹಂಚಿಕೊಂಡ ಪ್ರೀತಿ ಮತ್ತು ಸಂತೋಷದ ಕ್ಷಣಗಳನ್ನು ಸ್ಮರಿಸಿದರು. ನನ್ನ ತಂದೆಯ ಸೇವೆ ಮಾಡುವುದನ್ನು ನಾನು ಬಹಳ ಪ್ರೀತಿಸುತ್ತಿದ್ದೆ. ಪ್ರತಿದಿನವೂ ಅವರ ಪಾದಗಳನ್ನು ಒತ್ತುತ್ತಿದ್ದೆ ಹಾಗೂ ಅವರೊಂದಿಗೆ ಸಮಯ ಕಳೆಯುತ್ತಾ ಆಟವಾಡುತ್ತಿದ್ದೆ ಎಂದು ಭಾವುಕರಾದರು.

ಮನೆಯಲ್ಲಿ ಹಾಗೂ ದೇವಸ್ಥಾನದಲ್ಲಿ ಪ್ರತಿನಿತ್ಯ ನಡೆಯುವ ತ್ರಿಕಾಲ ಪೂಜೆಗಳನ್ನು ಹೇಗೆ ನೆರವೇರಿಸಬೇಕು ಎಂಬುದನ್ನು ತಂದೆ ಕಲಿಸಿದ್ದರು. ಇಷ್ಟಲಿಂಗ ಪೂಜೆ, ಪಾದಪೂಜೆಯ ಮಾರ್ಗದರ್ಶನ ನೀಡಿದ್ದರು. ಡಾ. ಅಪ್ಪಾಜಿಯವರ ಹೆಜ್ಜೆಗಳನ್ನು ಅನುಸರಿಸುವುದರೊಂದಿಗೆ ಸಂಸ್ಥಾನದ ಎಲ್ಲ ಪರಂಪರೆ ಹಾಗೂ ಸಂಪ್ರದಾಯಗಳನ್ನು ಮುಂದುವರಿಸಿಕೊಂಡು ಹೋಗುವುದಾಗಿ ದೊಡ್ಡಪ್ಪ ಅಪ್ಪ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಲಬುರಗಿ ಬರಪೀಡಿತ ಘೋಷಣೆಗೆ ಆಗ್ರಹಿಸಿ ಪ್ರತಿಭಟನೆ
ವಿದೇಶಿಯರಿಗೂ ಅಚ್ಚುಮೆಚ್ಚು ಅರುಜೀವ ಆಯುರ್ವೇದ ಆಸ್ಪತ್ರೆ!