ಡಾ. ದಂಡಿನ ಅವರ ಬದುಕು ಕೇವಲ ಒಬ್ಬ ವ್ಯಕ್ತಿಯ ಜೀವನ ಚರಿತ್ರೆಯಲ್ಲ. ಅದು ಸೇವೆ, ತ್ಯಾಗ, ಪರಿಶ್ರಮ, ಮಾನವೀಯತೆ ಮತ್ತು ಶಿಕ್ಷಣ ಕ್ರಾಂತ್ರಿಯ ಜೀವಂತ. ಇತಿಹಾಸ ವಿದ್ಯಯೇ ಜೀವನವನ್ನು ಬದಲಾಯಿಸುವ ಶಕ್ತಿ ಎಂಬ ನಂಬಿಕೆಯನ್ನು ಅವರು ಎಂದಿಗೂ ಕೈಬಿಡಲಿಲ್ಲ ಎಂದು ಡಾ. ಶಾಂತಣ್ಣ ಕಡಿವಾಲ ಹೇಳಿದರು.
ಹುಬ್ಬಳ್ಳಿ:
ಡಾ. ಬಿ.ಎಫ್. ದಂಡಿನ ಅವರು ಶೈಕ್ಷಣಿಕ ಕ್ರಾಂತಿಯ ಹರಿಕಾರರಾಗುವ ಮೂಲಕ ಈ ಭಾಗದಲ್ಲಿ ಹಲವು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣದ ಬೆಳಕು ಚಲ್ಲಿದವರು ಎಂದು ಕನಕದಾಸ ಶಿಕ್ಷಣ ಸಮಿತಿಯ ಉಪಾಧ್ಯಕ್ಷ ಡಾ. ಶಾಂತಣ್ಣ ಕಡಿವಾಲ ಹೇಳಿದರು.
ಅವರು ಇಲ್ಲಿನ ವಿದ್ಯಾನಗರದಲ್ಲಿರುವ ಕನಕದಾಸ ಶಿಕ್ಷಣ ಸಮಿತಿಯ ಸಮೂಹ ಮಹಾವಿದ್ಯಾಲಯಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ. ಬಿ.ಎಫ್. ದಂಡಿನ ಅವರ “ಅಮರ ನೆನಪು” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಡಾ. ದಂಡಿನ ಅವರ ಬದುಕು ಕೇವಲ ಒಬ್ಬ ವ್ಯಕ್ತಿಯ ಜೀವನ ಚರಿತ್ರೆಯಲ್ಲ. ಅದು ಸೇವೆ, ತ್ಯಾಗ, ಪರಿಶ್ರಮ, ಮಾನವೀಯತೆ ಮತ್ತು ಶಿಕ್ಷಣ ಕ್ರಾಂತ್ರಿಯ ಜೀವಂತ. ಇತಿಹಾಸ ವಿದ್ಯಯೇ ಜೀವನವನ್ನು ಬದಲಾಯಿಸುವ ಶಕ್ತಿ ಎಂಬ ನಂಬಿಕೆಯನ್ನು ಅವರು ಎಂದಿಗೂ ಕೈಬಿಡಲಿಲ್ಲ. ಕಠಿಣ ಪರಿಶ್ರಮದಿಂದ ಕನಕದಾಸ ಶಿಕ್ಷಣ ಸಮಿತಿಯನ್ನು ಹುಟ್ಟು ಹಾಕಿ ಸಾವಿರಾರು ಮಕ್ಕಳಿಗೆ ಶಿಕ್ಷಣ ಬೆಳಕು ಚಲ್ಲಿದ್ದಾರೆ.
ಶಿಕ್ಷಣ, ಸಮಾಜಸೇವೆ ಹಾಗೂ ಸಾರ್ವಜನಿಕ ಬದುಕಿನಲ್ಲಿ ತಮ್ಮದೇ ಆದ ಸೇವಾ ಮನೋಭಾವದಿಂದ ಅಪಾರ ಗೌರವಕ್ಕೆ ಪಾತ್ರರಾಗಿದ್ದ ಕರ್ನಾಟಕ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಡಾ ದಂಡಿನ ಅವರ ಅಗಲಿಕೆ ಶಿಕ್ಷಣ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.
ಈ ವೇಳೆ ಕನಕದಾಸ ಶಿಕ್ಷಣ ಸಂಸ್ಥಯ ಯುವ ಮುಖಂಡ ಸಂಕೇತ ರವೀಂದ್ರನಾಥ ದಂಡಿನ, ಡಾ. ಬಸವರಾಜ ಮಡ್ಲಿ, ಡಾ. ಎಚ್.ವಿ. ಬೆಳಗಲಿ, ಡಾ. ಶರಣು ಅಣ್ಣಿಗೇರಿ, ಬಸವರಾಜ ದಳವಾಯಿ, ಬಿರೇಶ ತಿರಕಣ್ಣವರ, ಮಹೇಶ ಗೌಡರ, ಪಂಪಾಪತಿ ಹೆಗಡೆ, ನಜೀರಅಹ್ಮದ ಕೋಲಕಾರ, ಕವಿತಾ ಬೇಲೇರಿ, ನಾಗವೀಣಿ ಹಾದಿಮನಿ, ಅಶೋಕ ಚಂಚಿ, ಅಶೋಕ ಗಡಾದ, ರವಿ ಕೊನ್ನೂರ ಸೇರಿ ಹಲವರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.