ಹಾನಗಲ್ಲ: ಶಾಸಕ ಶ್ರೀನಿವಾಸ ಮಾನೆ ಅವರ ಇಲ್ಲಿನ ಜನಸಂಪರ್ಕ ಕಚೇರಿಯಲ್ಲಿ ಶನಿವಾರ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನರಾಂ ಜಯಂತಿ ಆಚರಿಸಲಾಯಿತು.ಬಾಬೂಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಗೌರವಾರ್ಪಿಸಿದ ಮುಖಂಡರು, ಬಾಬೂಜಿ ಕೇವಲ ನಾಯಕರಾಗಿ ಅಷ್ಟೇ ಅಲ್ಲದೇ ಸಾಮಾಜಿಕ ನ್ಯಾಯದ ಹರಿಕಾರರಾಗಿ, ಶ್ರೇಷ್ಠ ಸಂಸದೀಯ ಪಟುವಾಗಿ ಜನಮಾನಸದಲ್ಲಿ ನೆಲೆಯೂರಿದ್ದಾರೆ. ಅಪ್ಪಟ ಪ್ರಜಾಪ್ರಭುತ್ವವಾದಿಯಾಗಿದ್ದ ಅವರ ವಿಚಾರಧಾರೆಗಳನ್ನು ಅಳವಡಿಸಿಕೊಂಡು ಮುನ್ನಡೆಯುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ. ದೇಶದ ಪ್ರಗತಿಯಲ್ಲಿ ನಮ್ಮ ಪ್ರಗತಿಯಿದೆ. ಅದರ ಉದ್ಧಾರದಲ್ಲಿ ನಮ್ಮ ಉದ್ಧಾರವಿದೆ. ಅದರ ವಿಮೋಚನೆಯಲ್ಲಿ ನಮ್ಮ ವಿಮೋಚನೆಯಿದೆ ಎಂದು ಬಾಬೂಜಿ ಸದಾ ಹೇಳುತ್ತಿದ್ದರು ಎಂದು ನೆನಪಿಸಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹನುಮಂತಪ್ಪ ಮರಗಡಿ, ಮಂಜು ಗೊರಣ್ಣನವರ, ಪುರಸಭೆ ಅಧ್ಯಕ್ಷ ಪರಶುರಾಮ ಖಂಡೂನವರ, ಜಿಪಂ ಕೆಡಿಪಿ ಸದಸ್ಯ ಕೊಟ್ರಪ್ಪ ಕುದರಿಸಿದ್ದನವರ, ತಾಪಂ ಕೆಡಿಪಿ ಸದಸ್ಯ ಹನೀಫ್ ಬಂಕಾಪೂರ, ಉಮೇಶ ಮಾಳಗಿ, ಶಿವು ಭದ್ರಾವತಿ, ಉಮೇಶ ದೊಡ್ಡಮನಿ, ರಾಮಚಂದ್ರ ಕಲ್ಲೇರ, ಸುರೇಶ ನಾಗಣ್ಣನವರ, ಮೇಕಾಜಿ ಕಲಾಲ, ಬಿ.ಜಿ. ದೊಡ್ಡಮನಿ, ವಿರುಪಾಕ್ಷಪ್ಪ ದಾಳೇರ, ರಾಜೂ ಗಾಡಗೇರ, ನಿಜಗುಣಿ ಮಳೆಣ್ಣನವರ, ಚಂದ್ರಗೌಡ ಪಾಟೀಲ, ಅಣ್ಣಪ್ಪ ಗೆಜ್ಜಿಹಳ್ಳಿ, ಪ್ರಕಾಶ ನಾಯಕ, ಎಂ.ಎಂ. ಮುಲ್ಲಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಬಾಬು ಜಗಜೀವನರಾಂ ಜಯಂತಿ ಆಚರಣೆ
ರಾಣಿಬೆನ್ನೂರು: ಮಾಜಿ ಉಪ ಪ್ರಧಾನಿ ಬಾಬು ಜಗಜೀವನರಾಂ 118ನೇ ಜಯಂತ್ಯುತ್ಸವವನ್ನು ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಗರದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಶನಿವಾರ ಸಾಂಕೇತಿಕವಾಗಿ ಆಚರಿಸಲಾಯಿತು.ಶಾಸಕ ಪ್ರಕಾಶ ಕೋಳಿವಾಡ, ಗ್ರೇಡ್- 2 ತಹಸೀಲ್ದಾರ್ ಅರುಣ ಕಾರಗಿ, ನಗರಸಭೆ ಆಯುಕ್ತ ಎಫ್.ಐ. ಇಂಗಳಗಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಾಲತೇಶ ಸಿ.ಬಿ., ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ರಾಜು ಶಿರೂರ, ಸಿಡಿಪಿಒ ಪಾರ್ವತಿ, ಸಹಾಯಕ ಕೃಷಿ ನಿರ್ದೇಶಕಿ ಶಾಂತಮಣಿ ಜಿ., ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ನೀಲಕಂಠ ಅಂಗಡಿ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ನೂರ ಅಹ್ಮದ್ ಹಲಗೇರಿ, ನಗರ ಯೋಜನಾ ಪ್ರಾಧಿಕಾರ ಕಾರ್ಯದರ್ಶಿ ರವಿಕಿರಣ, ಎಂಜಿನಿಯರ್ ರಾಕೇಶ ರೆಡ್ಡಿ, ಚಂದ್ರಣ್ಣ ಬೇಡರ, ಸಣ್ಣತಮ್ಮಪ್ಪ ಬಾರ್ಕಿ,ಮೈಲಪ್ಪ ದಾಸಪ್ಪನವರ, ಮೈಲಪ್ಪ ಗೋಣಿಬಸಮ್ಮನವರ, ಪ್ರಕಾಶ ಪೂಜಾರ, ಪುಟ್ಟಪ್ಪ ಮರಿಯಮ್ಮನವರ, ಹನುಮಂತಪ್ಪ ಕಬ್ಬಾರ, ಮಲ್ಲೇಶಪ್ಪ ಮದ್ಲೇರ, ಶ್ರೀಧರ ಚಲವಾದಿ, ಭರತರೆಡ್ಡಿ ಮತ್ತಿತರರಿದ್ದರು.