ಡಾ. ಬಿ.ಆರ್. ಅಂಬೇಡ್ಕರ್ ಶೋಷಿತರ ಧ್ವನಿ: ಅಮರೇಶ್ ಜಿ.ಕೆ.

KannadaprabhaNewsNetwork | Published : Dec 7, 2024 12:31 AM

ಸಾರಾಂಶ

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರು ಸಮಾಜ ಸುಧಾರಕರಾಗಿ ಮಹಿಳೆಯರು, ದಲಿತರು, ಅಲ್ಪಸಂಖ್ಯಾತರು ಸೇರಿ ಶೋಷಿತರ ಧ್ವನಿಯಾಗಿದ್ದರು ಎಂದು ತಹಸೀಲ್ದಾರ್ ಅಮರೇಶ್ ಜಿ.ಕೆ. ಹೇಳಿದರು.

ಕೊಟ್ಟೂರು: ಮಹಾನ್ ಸಂವಿಧಾನ ತಜ್ಞ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರು ಸಮಾಜ ಸುಧಾರಕರಾಗಿ ಮಹಿಳೆಯರು, ದಲಿತರು, ಅಲ್ಪಸಂಖ್ಯಾತರು ಸೇರಿ ಶೋಷಿತರ ಧ್ವನಿಯಾಗಿದ್ದರು. ಇಂತಹ ಮಹಾತ್ಮರು ಡಿ. 6ರಂದು ದೇಹ ತ್ಯಾಗ ಮಾಡಿದರು. ಈ ದಿನವನ್ನು ಪ್ರತಿ ವರ್ಷ ಅಂಬೇಡ್ಕರ್‌ ಅವರ ಮಹಾಪರಿನಿರ್ವಾಣ ಎಂದು ಆಚರಿಸಲಾಗುತ್ತಿದೆ ಎಂದು ತಹಸೀಲ್ದಾರ್ ಅಮರೇಶ್ ಜಿ.ಕೆ. ಹೇಳಿದರು.

ಕೊಟ್ಟೂರು ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಶುಕ್ರವಾರ ಹಮ್ಮಿಕೊಂಡಿದ ಡಾ. ಬಿ.ಆರ್. ಅಂಬೇಡ್ಕ ಅವರ 68ನೇ ಪುಣ್ಯ ತಿಥಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚಾನೆ ಮಾಡಿ ಮಾತನಾಡಿದರು.ಪ್ರತಿಯೊಬ್ಬರಲ್ಲೂ ಹೋರಾಟದ ಮನೋಭಾವ ಹುಟ್ಟುಹಾಕಿದ ಅಂಬೇಡ್ಕ ಅವರು ವಿಶ್ವಕಂಡ ಮಹಾನ್ ಬುದ್ಧಿ ಜೀವಿಯಾಗಿದ್ದರು ಎಂದು ಹೇಳಿದರು.

ಪಪಂ ಮುಖ್ಯಾಧಿಕಾರಿ ನಸುರುಲ್ಲಾ ಪಪಂ ಎಂಜಿನಿಯರ್, ಪ್ರಭು ಬಿರಾದರ್, ವೈದ್ಯಾಧಿಕಾರಿ ಡಾ. ಬಧ್ಯಾ ನಾಯ್ಕ್, ಮುಖಂಡರಾದ ಬಿ. ಮರಿಸ್ವಾಮಿ, ತೆಗ್ಗೆನಕೆರೆ ಕೊಟ್ರೇಶ್, ಹನುಮಂತಪ್ಪ ಪರುಶುರಾಮ್, ಕೋಲಾರಪ್ಪ ವೀರಭದ್ರಪ್ಪ ಎ.ಎಸ್.ಐ. ಚಂದ್ರಶೇಖರ್ ವೀರೇಶ, ಉಪ ತಹಸೀಲ್ದಾರ್ ಅನ್ನದಾನೇಶ್ ವಿ. ಪತ್ತಾರ್ ಇತರರು ಇದ್ದರು.ಡಾ. ಬಿ.ಆರ್‌.ಅಂಬೇಡ್ಕರ್‌ ಪರಿ ನಿರ್ಮಾಣ ದಿನಾಚರಣೆ

ಹೂವಿನಹಡಗಲಿ: ಇಲ್ಲಿನ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತದಿಂದ, ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ, ಪರಿ ನಿರ್ವಾಣ ದಿನಾಚರಣೆ ಅಂಗವಾಗಿ ಡಾ. ಬಿ.ಆರ್‌. ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ತಹಸೀಲ್ದಾರ್‌ ಜಿ. ಸಂತೋಷಕುಮಾರ್‌ ಸೇರಿದಂತೆ ಇಲಾಖೆ ಸಿಬ್ಬಂದಿ ಮತ್ತು ವಿವಿಧ ಮುಖಂಡರು ಉಪಸ್ಥಿತರಿದ್ದರು. ಪಟ್ಟಣದಲ್ಲಿರುವ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಪುತ್ಥಳಿಗೆ ದಲಿತ ಮುಖಂಡರು, ಅಖಂಡ ರಾಜ್ಯ ರೈತ ಸಂಘದ ಸದಸ್ಯರು ಸೇರಿ ಹೂವು ಮಾಲೆ ಅರ್ಪಿಸಿ, ಪೂಜೆ ಸಲ್ಲಿಸಿದರು.

Share this article