ದ. ಕ ಮೊಗವೀರ ಮಹಾಜನ ಸಂಘ, ಮೊಗವೀರ ಯುವ ಸಂಘಟನೆ, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ಗಳ ಸಹಭಾಗಿತ್ವದಲ್ಲಿ ನಾಡೋಜ ಡಾ. ಜಿ.ಶಂಕರ್ ಜನ್ಮದಿನಾಚರಣೆ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರವು ಭಾನುವಾರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ಸಭಾಭವನದಲ್ಲಿ ಜರುಗಿತು. ಈ ಶಿಬಿರದಲ್ಲಿ 257 ಮಂದಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು.
ಉಚ್ಚಿಲ ; ದ. ಕ ಮೊಗವೀರ ಮಹಾಜನ ಸಂಘ, ಮೊಗವೀರ ಯುವ ಸಂಘಟನೆ, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ಗಳ ಸಹಭಾಗಿತ್ವದಲ್ಲಿ ನಾಡೋಜ ಡಾ. ಜಿ.ಶಂಕರ್ ಜನ್ಮದಿನಾಚರಣೆ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರವು ಭಾನುವಾರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ಸಭಾಭವನದಲ್ಲಿ ಜರುಗಿತು. ಈ ಶಿಬಿರದಲ್ಲಿ 257 ಮಂದಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು.
ಶಿಬಿರ ಉದ್ಘಾಟಿಸಿದ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರಾದ ನಾಡೋಜ ಡಾ. ಜಿ. ಶಂಕರ್, ನನಗೆ ಜೀವನದಲ್ಲಿ ಸಮಾಜ ಸೇವೆ, ಜನರ ಪ್ರೀತಿ ಮುಖ್ಯವಾಗಿದೆ. ಟೀಕೆಗಳಿಗೆ ಹೆದರದೇ ಕೆಲಸ ಮಾಡಬೇಕು, ನಾವು ಮಾಡಿದ ಒಳ್ಳೆಯ ಕೆಲಸಗಳು ನಮ್ಮನ್ನು ಶಾಶ್ವತವನ್ನಾಗಿ ಮಾಡುತ್ತವೆ ಎಂದು ನಂಬಿದವ ನಾನು ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ರಕ್ತವನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಪಡೆಯಬಹುದು. ರಕ್ತದಾನ ಕಾರ್ಯಕ್ರಮ ಅರ್ಥಪೂರ್ಣ ಕಾರ್ಯವಾಗಿದೆ. ಅವರ ಸೇವೆಗೆ ಭಗವಂತನ ಆಶೀರ್ವಾದವಿರಲಿ ಎಂದು ಹಾರೈಸಿದರು.ಕೆ.ಎಂ.ಸಿ ರಕ್ತನಿಧಿಯ ಡಾ. ಶಮೀ ಶಾಸ್ತ್ರಿ, ಬಗ್ವಾಡಿ ಹೋಬಳಿಯ ಅಧ್ಯಕ್ಷ ಉದಯ್ ಕುಮಾರ್ ಹಟ್ಟಿಯಂಗಡಿ, ಬಾರ್ಕೂರು ಸಂಯುಕ್ತ ಸಭಾದ ಅಧ್ಯಕ್ಷ ಸತೀಶ್ ಅಮೀನ್ ಬಾರ್ಕೂರು, ದ. ಕ. ಮೊಗವೀರ ಮಹಾಜನ ಸಂಘದ ಉಪಾಧ್ಯಕ್ಷ ಮೋಹನ್ ಬೆಂಗ್ರೆ, ಕೋಶಾಧಿಕಾರಿ ರತ್ನಾಕರ ಸಾಲ್ಯಾನ್ ಮಲ್ಪೆ, ಮೊಗವೀರ ಯುವ ಸಂಘಟನೆಯ ನಿಕಟಪೂರ್ವ ಅಧ್ಯಕ್ಷ ಜಯಂತ್ ಅಮೀನ್ ಕೋಡಿ, ದ. ಕ. ಮೊಗವೀರ ಮಹಾಜನ ಮಹಿಳಾ ಸಂಘದ ಅಧ್ಯಕ್ಷೆ ಕವಿತಾ ಶರತ್, ಕಾಪು ನಾಲ್ಕುಪಟ್ಣ ಮೊಗವೀರ ಸಭಾದ ಅಧ್ಯಕ್ಷ ಮನೋಜ್ ಕಾಂಚನ್, ಮಹಿಳಾ ಒಕ್ಕೂಟದ ಅಧ್ಯಕ್ಷೆ ಸುಗುಣಾ ಎಸ್. ಕರ್ಕೇರ, ಕರಾವಳಿ ಯುವಕ-ಯುವತಿ ವೃಂದದ ಅಧ್ಯಕ್ಷ ಎಸ್. ದಿವಾಕರ ಹೆಜಮಾಡಿ, ಹೆಜಮಾಡಿ ಕರಾವಳಿ ಯುವತಿ ವೃಂದದ ಅಧ್ಯಕ್ಷೆ ರೂಪಾ ಹೇಮಾನಂದ್ ಪುತ್ರನ್, ಕರಾವಳಿ ಫ್ರೆಂಡ್ಸ್ ಉಚ್ಚಿಲ ಅಧ್ಯಕ್ಷ ರಿತೇಶ್ ಸುವರ್ಣ, ಟೀಂ ಮಾರುತಿ ಅಧ್ಯಕ್ಷ ಪ್ರಹಾರ್ ಮೂಳೂರು, ಜಿಲ್ಲಾಸ್ಪತ್ರೆಯ ರಕ್ತನಿಧಿ ನಿರ್ದೇಶಕಿ ಡಾ. ವೀಣಾ ಕುಮಾರಿ ಹಾಜರಿದ್ದರು.
ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ರವೀಶ್ ಎಸ್. ಕೊರವಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಹಾಜನ ಸಂಘದ ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು ಸ್ವಾಗತಿಸಿದರು. ಮೊಗವೀರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಶೇಖರ್ ತೋಳಾರ್ ವಂದಿಸಿದರು. ಶಿಕ್ಷಕ ಅಶೋಕ್ ತೆಕ್ಕಟ್ಟೆ ನಿರೂಪಿಸಿದರು.ಇದುವರೆಗೆ 1.24 ಲಕ್ಷ ಯೂನಿಟ್ ರಕ್ತದಾನ ! ಮೊಗವೀರ ಸಂಘಟನೆಗಳ ಪ್ರೇರಣಾ ಶಕ್ತಿ ನಾಡೋಜ ಡಾ. ಜಿ.ಶಂಕರ್. ಅವರ ನೇತೃತ್ವದಲ್ಲಿ 17 ವರ್ಷಗಳಿಂದ ರಕ್ತದಾನ ಶಿಬಿರಗಳನ್ನು ನಡೆಸಿ, ಇದುವರೆಗೆ 1, 24, 650 ಯುನಿಟ್ ರಕ್ತ ಸಂಗ್ರಹಿಸಿ ಆಸ್ಪತ್ರೆಗಳಿಗೆ ನೀಡಲಾಗಿದೆ. ಅಲ್ಲದೇ ಜಿ. ಶಂಕರ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಉಡುಪಿ - ದಕ ಜಿಲ್ಲೆಗಳ 430ಕ್ಕೂ ಅಧಿಕ ಕ್ಯಾನ್ಸರ್ ರೋಗಿಗಳಿಗೆ 1.5 ಕೋಟಿ ರು.ಗೂ ಅಧಿಕ ಧನಸಹಾಯ ನೀಡಲಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.