ಡಾ.ಜೆ.ಎನ್.ರಾಮಕೃಷ್ಣೇಗೌಡರಿಗೆ ಸಂತ ಸೇವಾರತ್ನಾ ಪ್ರಶಸ್ತಿ ಪ್ರದಾನ

KannadaprabhaNewsNetwork | Published : Mar 21, 2025 12:37 AM

ಸಾರಾಂಶ

ಪಾಂಡವಪುರ ತಾಲೂಕಿನ ಶ್ಯಾದನಹಳ್ಳಿ ಗ್ರಾಮದ ಹೊರವಲಯದಲ್ಲಿ ಬುಧವಾರ ರಾತ್ರಿ ತಾಲೂಕು ನಾಗರೀಕ ಅಭಿನಂದನಾ ಸಮಿತಿ ಹಾಗೂ ಡಾ.ಆರ್‌ಕೆಜಿ ಅಭಿಮಾನಿ ಬಳಗದಿಂದ ನಡೆದ ಸಮಾರಂಭಕ್ಕೆ ಆಗಮಿಸಿದ ಡಾ.ಜೆ.ಎನ್.ರಾಮಕೃಷ್ಣೇಗೌಡ ಅವರನ್ನು ಅಭಿಮಾನಿಗಳ ತೆರೆದ ವಾಹನದಲ್ಲಿ ವೇದಿಕೆಗೆ ಕರೆತಂದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಆದಿಚುಂಚನಗಿರಿ ಶ್ರೀಕ್ಷೇತ್ರದಲ್ಲಿ ಸುದೀರ್ಘ 50 ವರ್ಷಗಳ ಕಾಲ ಸೇವೆ ಮಾಡುತ್ತಿರುವ ಹೇಮಗಿರಿ ಶಾಖಾಮಠದ ಕಾರ್‍ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಅವರಿಗೆ ಸಂತ ಸೇವಾರತ್ನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ತಾಲೂಕಿನ ಶ್ಯಾದನಹಳ್ಳಿ ಗ್ರಾಮದ ಹೊರವಲಯದಲ್ಲಿ ಬುಧವಾರ ರಾತ್ರಿ ತಾಲೂಕು ನಾಗರೀಕ ಅಭಿನಂದನಾ ಸಮಿತಿ ಹಾಗೂ ಡಾ.ಆರ್‌ಕೆಜಿ ಅಭಿಮಾನಿ ಬಳಗದಿಂದ ನಡೆದ ಸಮಾರಂಭಕ್ಕೆ ಆಗಮಿಸಿದ ಡಾ.ಜೆ.ಎನ್.ರಾಮಕೃಷ್ಣೇಗೌಡ ಅವರನ್ನು ಅಭಿಮಾನಿಗಳ ತೆರೆದ ವಾಹನದಲ್ಲಿ ವೇದಿಕೆಗೆ ಕರೆತಂದರು.

ಬಳಿಕ ನಡೆದ ವೇದಿಕೆ ಸಮಾರಂಭದಲ್ಲಿ ಶ್ರೀಕ್ಷೇತ್ರ ಆದಿಚುಂಚನಗಿರಿ ಕ್ಷೇತ್ರದಲ್ಲಿ ಸುದೀರ್ಘ 50 ವರ್ಷಗಳ ಕಾಲ ಸಂತರ ಸೇವೆಗಾಗಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಮತ್ತು ದಂಪತಿಗೆ ಅಭಿಮಾನಿಗಳು ಸಂತ ಸೇವಾರತ್ನಾ ಪ್ರಶಸ್ತಿ ನೀಡಿ ಅಭಿನಂದಿಸಿದರು.

ಸಮಾರಂಭದಲ್ಲಿ ಡಾ.ಜೆ.ಎನ್.ರಾಮಕೃಷ್ಣೇಗೌಡರೊಂದಿಗೆ ಸಂವಾದ ನಡೆಸಿ ಮಠದ ಬೆಳವಣಿಗೆ ಹಾಗೂ ಎದುರಾದ ಸಂಕಷ್ಟಗಳ ಬಗ್ಗೆ ಸ್ವತಃ ರಾಮಕೃಷ್ಣೇಗೌಡ ಅವರ ಮಾತುಗಳ ಮೂಲಕವೇ ವಿಚಾರ ವಿನಿಮಯ ಮಾಡಲಾಯಿತು.

ಈ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಚಲನಚಿತ್ರ ಸಾಹಿತ್ಯ ವಿ.ನಾಗೇಂದ್ರಪ್ರಸಾದ್, ಅಂತಾರಾಷ್ಟ್ರೀಯ ಕ್ರೀಡಾಪಟು ಖುಷಿ, ಜನಸ್ನೇಹಿ ಯೋಗೇಶ್, ನಿವೃತ್ತ ಐಪಿಎಸ್ ಅಧಿಕಾರಿ ಅಮರ್‌ಕುಮಾರ್‌ಪಾಂಡೆ, ಡಾ.ಎಂ.ಮಾಯಿಗೌಡ, ವಿ.ಟಿ.ರಾಮಚಂದ್ರ, ಕೃಷಿಕ ನವೀನ್‌ ಸಂಗಾಪುರ, ಇಸ್ರೋ ವಿಜ್ಞಾನಿ ರವಿ.ಟಿ.ಗೌಡ ಅವರನ್ನು ಗುರುತಿಸಿ ಗೌರವಿಸಲಾಯಿತು.ಡಾ.ಜೆ.ಎನ್.ರಾಮಕೃಷ್ಣೇಗೌಡ ಮಾತನಾಡಿ, ಗುರುಗಳಾದ ಶ್ರೀಬಾಲಗಂಗಾಧರನಾಥಮಹಾಸ್ವಾಮೀಜಿಗಳು ಸಾಕಷ್ಟು ಸವಾಲು, ಸನ್ನಿವೇಶಗಳನ್ನು ಎದುರಿಸಿ ಶ್ರೀಕ್ಷೇತ್ರ ಆದಿಚುಂಚನಗಿರಿ ಕ್ಷೇತ್ರವನ್ನು ಕಟ್ಟಿಬೆಳೆಸಿದ್ದಾರೆ. ಗುರುಗಳ ಆಶೀರ್ವಾದದಿಂದ ಮಠವು ಶಿಕ್ಷಣ, ದಾಸೋಹ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮವಾಗಿ ಕೆಲಸ ಮಾಡಲು ಸಹಕಾರಿಯಾಗುತ್ತಿದೆ ಎಂದು ತಿಳಿಸಿದರು.

ಸಾಹಿತಿ ವಿ.ನಾಗೇಂದ್ರ ಪ್ರಸಾದ್ ಮಾತನಾಡಿ, ಚುಂಚನಗಿರಿ ಕ್ಷೇತ್ರದಲ್ಲಿ ಬೆಳವಣಿಗೆಯಲ್ಲಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ಎಲ್ಲಾ ಕೆಲಸ ಕಾರ್‍ಯಗಳಲ್ಲಿ ಡಾ.ಜೆ.ಎನ್.ರಾಮಕೃಷ್ಣೇಗೌಡರ ಶ್ರಮ ಇಂದಿಗೂ ಕಾಣಬಹುದು. ತಮ್ಮ ಸರಳ, ಮೃದು ಮನಸ್ಸಿನ ವ್ಯಕ್ತಿತ್ವದ ರಾಮಕೃಷ್ಣೇಗೌಡರ ವ್ಯಕ್ತಿತ್ವ, ಶಿಕ್ಷಣ, ಸಾಮಾಜಿಕ ಕ್ಷೇತ್ರದಲ್ಲಿ ಬಹಳಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಇಂತಹ ವ್ಯಕ್ತಿಗಳ ಇನ್ನೂ ರಾಜ್ಯ, ರಾಷ್ಟ್ರಮಟ್ಟದ ಹಲವಾರು ಪುರಸ್ಕಾರ, ಗೌರವಗಳು ಸಲ್ಲಬೇಕು ಎಂದರು.

ಸಮಾರಂಭದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಚಿತ್ರನಟಿ ಪ್ರೇಮ, ಪಂಚಮುಖಿ ಆಂಜನೇಯ ದೇವಸ್ಥಾನದ ಮುಖ್ಯಸ್ಥರು ಧನಂಜಯ್‌ ಗುರೂಜಿ, ಹಾಸ್ಯ ಕಲಾವಿಧರಾದ ವಿನೋದ್ ಗೊಬ್ಬರಗಾಲ, ಚಂದ್ರಪ್ರಭ, ಕೆಪಿಸಿಸಿ ಪ್ರಧಾನ ಕಾರ್‍ಯದರ್ಶಿ ಎಚ್.ತ್ಯಾಗರಾಜು, ಸಮಾಜಸೇವಕ ಆರ್‌ಟಿಒ ಮಲ್ಲಿಕಾರ್ಜುನ್, ಕಸಾಪ ಅಧ್ಯಕ್ಷ ಮೇನಾಗರ ಪ್ರಕಾಶ್, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ವಿಜೇಂದ್ರಮೂರ್ತಿ, ಜೆಡಿಎಸ್ ಅಧ್ಯಕ್ಷ ಎಸ್.ಎ.ಮಲ್ಲೇಶ್, ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೊಗೌಡ, ಎಲ್.ಸಿ.ಮಂಜುನಾಥ್, ಪುರಸಭೆ ಉಪಾಧ್ಯಕ್ಷ ಅಶೋಕ್, ಬಿಜಿಎಸ್ ಶಿಕ್ಷಕ ವೃಂದವರು, ಮುಖಂಡರು ಇದ್ದರು.

Share this article