ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ರಾಜಕಾರಣಕ್ಕೆ ಸಂಸದ ಡಾ.ಕೆ. ಸುಧಾಕರ್ ಬರಲಿ. ಅವರು ಬರುವುದರಿಂದ ಅಭಿವೃದ್ಧಿಯಲ್ಲಿ 15 ವರ್ಷಗಳ ಹಿಂದೆ ಹೋಗಿರುವ ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರ ಮತ್ತೆ ಮುನ್ನಲೆಗೆ ಬರಲಿದೆ. ಯಲಹಂಕ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್.ಆರ್.ವಿಶ್ವನಾಥ್ ಚಿಕ್ಕಬಳ್ಳಾಪುರ ಕ್ಷೇತ್ರದ ವಿಷಯಕ್ಕೆ ಬಾರದಿರಲಿ. ಅವರು ಅವರ ಯಲಹಂಕ ನೋಡಿಕೊಳ್ಳಲಿ ಎಂದು ಮನವಿ ಮಾಡಿದರಲ್ಲದೇ, ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ಮಾಡಿದ ಆರೋಪಕ್ಕೆ ಟಾಂಗ್ ನೀಡಿದರು
2028ರ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಯಲಹಂಕ ಶಾಸಕ ವಿಶ್ವನಾಥ್ ಡಾ.ಕೆ.ಸುಧಾಕರ್ ಸಂಸದರಾಗಿದ್ದಾರೆ, ಅವರು ಕೇಂದ್ರ ಮಂತ್ರಿಯಾಗಲಿ ಮುಂದಿನ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಯುವಕರಿಗೆ ಅವಕಾಶ ನೀಡಬೇಕು ಎಂದು ಹೇಳಿರುವುದು ಸರಿಯಲ್ಲ. ವಿಶ್ವನಾಥ್ ಅಣ್ಣಾ ಅವರ ಮೇಲೆ ನಮಗೆ ಅಪಾರ ಗೌರವವಿದೆ. ಆದರೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಡಾ.ಕೆ.ಸುಧಾಕರ್ ಅವರೇ ಸೂಕ್ತ ಎಂದರು.ಪಕ್ಷದ ಅಭ್ಯರ್ಥಿ ಎಂಬುದು ನನ್ನ ಮತ್ತು ಬೆಂಬಲಿಗರೆಲ್ಲರ ಅಭಿಪ್ರಾಯ. ಆದರೆ ಈ ಕ್ಷೇತ್ರಕ್ಕೆ ಸಂಬಂಧಿಸಿ ಬೇರೆ ಅಭ್ಯರ್ಥಿಗಳ ಹೆಸರನ್ನು ಮುಂದಿಟ್ಟು ಗೊಂದಲ ಸೃಷ್ಟಿಸಬಾರದು ಎಂದು ಪರೋಕ್ಷವಾಗಿ ಸಂದೀಪರೆಡ್ಡಿ ಬಗ್ಗೆ ಮಾತನಾಡಿದ ಅವರು ಡಾ.ಕೆ. ಸುಧಾಕರ್ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರು ಇಂದಿಗೂ ಮಾತನಾಡುತ್ತಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಅವರು ಅನಿವಾರ್ಯರಾಗಿದ್ದು, ಮುಂದಿನ ಚುನಾವಣೆಯಲ್ಲಿ ಪಕ್ಷವು ಅವರಿಗೆ ಅವಕಾಶ ಕಲ್ಪಿಸಲಿದೆ ಎಂಬ ಭರವಸೆ ನಮಗಿದೆ ಎಂದರು.
ಡಾ. ಕೆ. ಸುಧಾಕರ್ ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಬಿಜೆಪಿ ಸಂಘಟನೆಯನ್ನು ಬಲಪಡಿಸಲು ಸಾಕಷ್ಟು ಶ್ರಮಿಸಿದ್ದಾರೆ. ಅವರಿಂದ ಪಕ್ಷಕ್ಕೆ ಮತ್ತಷ್ಟು ಶಕ್ತಿ ಬಂದಿದೆ. ಈ ಸುದ್ದಿಗೋಷ್ಠಿಯ ಮೂಲಕ ನಾವು ಸಂಸದ ಡಾ.ಕೆ.ಸುಧಾಕರ್ ಅವರ ಬಗ್ಗೆ ಮಾಹಿತಿ ನೀಡುತ್ತಿದ್ದೇವೆಯೇ ಹೊರತು, ಯಾರ ವಿರುದ್ಧವೂ ಮಾತನಾಡುತ್ತಿಲ್ಲ ಎಂದು ಎ.ಗಜೇಂದ್ರ ಸ್ಪಷ್ಟಪಡಿಸಿದರು.ಡಾ. ಕೆ. ಸುಧಾಕರ್ ಅವರು ತಮ್ಮ ಅವಧಿಯಲ್ಲಿ ಸರ್ವಜನಾಂಗದ ಅಭಿವೃದ್ಧಿಗೆ ಶ್ರಮಿಸಿದ್ದು, ಬಡವರಿಗೆ ಉಚಿತ ನಿವೇಶನ ಕಲ್ಪಿಸಲು ವಿಶೇಷ ಕಾಳಜಿ ವಹಿಸಿದ್ದರು. ನೀರಿನ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಚಿಕ್ಕಬಳ್ಳಾಪುರಕ್ಕೆ ಕೃಷ್ಣ ನದಿ ನೀರು ತರಲು ಮುಂದಾಗಿದ್ದಾರೆ. ಆದ್ದರಿಂದ ಈ ಕ್ಷೇತ್ರಕ್ಕೆ ಅವರು ಅನಿವಾರ್ಯ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷೆ ಲೀಲಾವತಿ ಶ್ರೀನಿವಾಸ್, ಮಾಜಿ ಸದಸ್ಯರಾದ ಮೊಬೈಲ್ ಬಾಬು, ಅರುಣ್, ಯತೀಶ್, ಮಂಜುನಾಥಚಾರಿ, ಮುಖಂಡರಾದ ಅನು ಆನಂದ್, ಮುನಿರಾಜು, ಪಾಪು, ರಾಮಣ್ಣ ಮತ್ತಿತರರು ಇದ್ದರು.
ಸಿಕೆಬಿ-8 ಸುದ್ದಿಗೋಷ್ಟಿಯಲ್ಲಿ ಮಾಜಿ ನಗರಸಭಾ ಅಧ್ಯಕ್ಷ ಎ.ಗಜೇಂದ್ರ ಮಾತನಾಡಿದರು