ಹಾನಗಲ್ಲ: ಸ್ವಾಸ್ಥ್ಯಪೂರ್ಣ ಸಮಾಜದ ಕನಸು ಕಂಡ ಡಾ. ಮಹಾಂತ ಶಿವಯೋಗಿಗಳು ನಾಡು ಕಂಡ ಅಪ್ರತಿಮ ಸಂತ ಎಂದು ತಾಲೂಕು ಶಿರಸ್ತೇದಾರ ಟಿ.ಕೆ. ಕಾಂಬಳೆ ತಿಳಿಸಿದರು.ಶುಕ್ರವಾರ ಇಲ್ಲಿನ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಡಾ. ಮಹಾಂತ ಶಿವಯೋಗಗಳ ಸ್ಮರಣೆಯ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದಲ್ಲಿ ಸ್ವಸ್ಥ ಬದುಕಿನ ಎಲ್ಲ ಸಂದೇಶಗಳು ಪ್ರತಿ ಮನೆ ಮನಕ್ಕೆ ತಲುಪಬೇಕಾಗಿದೆ. ಮನುಷ್ಯನಿಗೆ ದುರಭ್ಯಾಸಗಳು ಭವಿಷ್ಯದ ಬದುಕನ್ನೇ ನಾಶ ಮಾಡುತ್ತಿರುವ ಈ ಸಂದರ್ಭದಲ್ಲಿ ಸ್ವಸ್ಥ ಸಮಾಜದ ಸಂದೇಶಗಳು ತಲುಪಿ ಉತ್ತಮ ಸಮಾಜ ನಿರ್ಮಾಣ ಅತ್ಯಗತ್ಯವಾಗಿದೆ. ಪ್ರತಿ ವ್ಯಕ್ತಿ ಈ ನಿಟ್ಟಿನಲ್ಲಿ ಶ್ರಮಿಸಿದರೆ ಮಾತ್ರ ಸ್ವಸ್ಥ ಸಮಾಜದ ಕನಸ ನನಸಾಗಬಲ್ಲದು ಎಂದರು.ಸಾಹಿತಿ ಪ್ರೊ. ಮಾರುತಿ ಶಿಡ್ಲಾಪೂರ ಮಾತನಾಡಿ, ಇತ್ತೀಚಿನ ದಶಕಗಳಲ್ಲಿ ಮಠಗಳು ವ್ಯಸನಮುಕ್ತ ಸಮಾಜದ ನಿರ್ಮಾಣಕ್ಕಾಗಿ ಹರಸಾಹಸಕ್ಕೆ ಮುಂದಾಗಿವೆ. ವ್ಯಸನಮುಕ್ತ ಸಮಾಜದ ಕನಸು ಕಂಡ ಡಾ. ಮಹಾಂತ ಶಿವಯೋಗಿಗಳ ಕನಸು ನನಸಾಗಲು ಇಂತಹ ಜಾಗೃತಿ ಅತ್ಯವಶ್ಯವಾಗಿದೆ ಎಂದರು.ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳಾದ ಮಹೇಶ ತ್ರಿಕಾಣಿ, ರಚನಾ ಗೋವೆಕರ, ಮೀನಾಕ್ಷಿ ಲಕ್ಕುಂಡಿ, ಸುನಿತಾ ಸುಳದೋಳಕರ, ಸಿ.ಸಿ. ಕದಂ, ಮಾಲತೇಶ ಉಳವಣ್ಣನವರ, ಧರ್ಮಪ್ಪ ನೇಗಿನಹಾಳ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಪ್ರತಿ ಗ್ರಾಮದಲ್ಲೂ ಹಾಲು ಉತ್ಪಾದಕರ ಸಂಘ ಸ್ಥಾಪನೆಗೆ ಯತ್ನ
ಸಭೆಯ ಅಧ್ಯಕ್ಷತೆಯನ್ನ ಹಾವೇರಿ ಒಕ್ಕೂಟದ ಅಧ್ಯಕ್ಷ ಮಂಜನಗೌಡ ಪಾಟೀಲ ವಹಿಸಿದ್ದರು. ಹಾವೆಮುಲ್ ನಾಮನಿರ್ದೇಶಕ ಶಂಕರಗೌಡ ಪಾಟೀಲ, ನಿರ್ದೇಶಕ ಶಶಿಧರ ಯಲಿಗಾರ, ವ್ಯವಸ್ಥಾಪಕ ನಿರ್ದೇಶಕ ಪ್ರದೀಪ ಎಸ್.ಎಂ., ಪುರಸಭೆ ಅಧ್ಯಕ್ಷ ಸಿದ್ದಾರ್ಥಗೌಡ ಪಾಟೀಲ, ಗ್ಯಾರಂಟಿ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಗುಡ್ಡಪ್ಪ ಜಲದಿ, ಗ್ಯಾರಂಟಿ ಸಮಿತಿಯ ತಾಲೂಕಾದ್ಯಕ್ಷ ಎಸ್.ಎಫ್. ಮಣಕಟ್ಟಿ, ಮುಖಂಡರಾದ ಶಿವಾನಂದ ಬಿಳೆಕುದರಿ, ಮಾಲತೇಶ ಸಾಲಿ ಇತರರು ಇದ್ದರು.