ತರೀಕೆರೆ: ಬೀದರ್ ಕರ್ನಾಟಕ ಪಶುವೈದ್ಯಕೀಯ ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದಿಂದ ಬೀದರ್ ನಂದಿ ನಗರದಲ್ಲಿ ಏರ್ಪಡಿಸಿದ್ದ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವದಲ್ಲಿ ಪಟ್ಟಣದ ಡಾ.ಬಿ.ಎಸ್.ಮಮತ ಅವರು ಬ್ಯಾಚುಲರ್ ಅಫ್ ವೆಟರ್ನರಿ ಸೈನ್ಸ್ ಮತ್ತು ಅನಿಮಲ್ ಹಸ್ಬೆಂಡರಿ ಪದವಿಯಲ್ಲಿ ಎರಡು ಚಿನ್ನದ ಪದಕ ಪಡೆದಿದ್ದು, ರಾಜ್ಯಪಾಲ ತಾವರ್ ಚಂದ್ ಗೆಹಲೋಟ್ ಅವರು ಡಾ.ಬಿ.ಎಸ್.ಮಮತಗೆ ಎರಡು ಚಿನ್ನದ ಪದಕ ಮತ್ತು ಪ್ರಶಸ್ತಿ ಪತ್ರ ವಿತರಿಸಿ ಗೌರವಿಸಿದರು. ಡಾ.ಬಿ.ಎಸ್.ಮಮತ ಅವರು ಪಟ್ಟಣದ ಎಎಸ್ಐ. ಬಿ.ವಿ.ಶೇಖರಪ್ಪ ಮತ್ತು ಎಚ್.ಎಸ್.ಚಂದ್ರಕಲಾ ಅವರ ಪುತ್ರಿ. 4ಕೆಟಿಆರ್.ಕೆ.8ಃ ಡಾ.ಬಿ.ಎಸ್.ಮಮತ ಅವರಿಗೆ ಎರಡು ಚಿನ್ನದ ಪದಕ ಮತ್ತು ಪ್ರಶಸ್ತಿ ವಿತರಿಸಿ ಗೌರವಿಸಲಾಯಿತು.