ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ಪ್ರಚಂಡ ಗೆಲುವು ಸಾಧಿಸಿರುವ ಡಾ.ಸಿ.ಎನ್. ಮಂಜುನಾಥ್ ಈಗ ಕ್ಷೇತ್ರದಲ್ಲಿ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದವರ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ.
ಈ ಕ್ಷೇತ್ರದಿಂದ ಸಂಸದರಾಗಿದ್ದ ಸಿ.ಕೆ.ಜಾಫರ್ ಷರೀಫ್, ಎಂ.ವಿ.ಚಂದ್ರಶೇಖರ್ ಮೂರ್ತಿ, ಎಚ್.ಡಿ.ಕುಮಾರಸ್ವಾಮಿ, ರಾಜಶೇಖರನ್, ಡಿ.ಕೆ.ಸುರೇಶ್ ಅಧಿಕ ಮತಗಳಿಂದ ಗೆಲುವು ಸಾಧಿಸಿದವರಾಗಿದ್ದರು. ಇವರ ಜೊತೆಗೆ ಡಾ.ಮಂಜುನಾಥ್ ಹೆಸರು ಕೂಡ ಸೇರ್ಪಡೆಯಾಗಿದೆ.
2024ರ ಚುನಾವಣೆಯಲ್ಲಿ ಅಂಚೆ ಮತಗಳು ಸೇರಿ ಒಟ್ಟು 19,20,679 ಮತಗಳು ಚಲಾವಣೆಯಾಗಿದ್ದವು. ಇದರಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್ (10,79,002) ಪ್ರತಿಸ್ಪರ್ಧಿ ಕಾಂಗ್ರೆಸ್ ನ ಡಿ.ಕೆ.ಸುರೇಶ್ (8,09,355) ವಿರುದ್ಧ ಶೇಕಡ 14.05ರಷ್ಟು (2,69,647) ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.ದಾಖಲೆಯಾಗಿಯೇ ಉಳಿದ ಗೆಲುವು :
1971ರಲ್ಲಿ ನಡೆದ ಎರಡನೇ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸಿ.ಕೆ.ಜಾಫರ್ ಷರೀಫ್ ಚಲಾವಣೆಯಾದ ಒಟ್ಟು ಮತಗಳಲ್ಲಿ ಮಾನ್ಯವಾದ ಮತಗಳ ಪೈಕಿ ಶೇ.61.14 ಮತಗಳ ಭಾರೀ ಅಂತರದಿಂದ ಪ್ರಚಂಡ ಗೆಲುವು ಸಾಧಿಸಿ ಹೊಸ ದಾಖಲೆ ಬರೆದಿದ್ದರು.
ಕ್ಷೇತ್ರದಲ್ಲಿ ಒಟ್ಟು 4,84,298 ಮತದಾರರಲ್ಲಿ 3,13,659 ಮಂದಿ (ಶೇ.64.77) ಮತ ಚಲಾಯಿಸಿದ್ದರು. ಇದರಲ್ಲಿ 3,05,086 ಮತಗಳು ಮಾತ್ರ ಮಾನ್ಯಗೊಂಡಿದ್ದವು. ಇದರಲ್ಲಿ ಸಿ.ಕೆ.ಜಾಫರ್ ಷರೀಫ್ - 2,43,987 (ಶೇ.79.97), ಎಂ.ವಿ.ರಾಜಶೇಖರನ್ - 57,468 (ಶೇ.18.84) ಹಾಗೆಯೇ ಅಬ್ದುಲ್ ರಷೀದ್ - 3631 (ಶೇ.1.19) ಮತಗಳು ಲಭಿಸಿದ್ದವು.
6 ಬಾರಿ ಗೆದ್ದ ಚಂದ್ರಶೇಖರಮೂರ್ತಿಗೆ 2ನೇ ಸ್ಥಾನ :
1989 ರ ಚುನಾವಣೆಯಲ್ಲಿ ಕಾಂಗ್ರೆಸ್ ನ ಎಂ.ವಿ.ಚಂದ್ರಶೇಖರ ಮೂರ್ತಿ 4,72,265 ಮತಗಳನ್ನು ಪಡೆದು ಪ್ರತಿಸ್ಪರ್ಧಿ ಜನತಾ ದಳದ ಸಿ.ನಾರಾಯಣಸ್ವಾಮಿ (2,17,044) ವಿರುದ್ಧ 2,55,221 (ಶೇ.28.64) ಮತಗಳ ಹೆಚ್ಚಿನ ಅಂತರದಿಂದ ಗೆಲುವು ಸಾಸಿದ ಎರಡನೇ ಅಭ್ಯರ್ಥಿಯಾಗಿದ್ದಾರೆ. ಈ ಚುನಾವಣೆಯಲ್ಲಿ ಒಟ್ಟು 13,55,284ಮತದಾರರ ಪೈಕಿ 9,23,505 ಮತಗಳು ಚಲಾವಣೆಯಾಗಿ 8,91,182 ಮತಗಳು ಮಾನ್ಯಗೊಂಡಿದ್ದವು.
ಕನಕಪುರ ಲೋಕಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದಾಗ 1967ರಲ್ಲಿ ನಡೆದು ಚುನಾವಣೆಯಲ್ಲಿ ಮೊದಲ ಬಾರಿಗೆ ಸಂಸದರಾಗಿ ಕಾಂಗ್ರೆಸ್‌ನ ಎಂ.ವಿ.ರಾಜಶೇಖರನ್ ಆಯ್ಕೆಯಾಗಿದ್ದರು. ಅಧಿಕ ಮತ ಗಳಿಸಿದವರ ಪಟ್ಟಿಯಲ್ಲಿ ಇವರ ಹೆಸರು 4ನೇ ಸ್ಥಾನದಲ್ಲಿದೆ.
ಇನ್ನು ಹ್ಯಾಟ್ರಿಕ್ ಸಂಸದರಾಗಿದ್ದ ಡಿ.ಕೆ.ಸುರೇಶ್ 2014ರ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ವಿರುದ್ಧ ಶೇಕಡ 16.02ರಷ್ಟು ಅಧಿಕ ಮತ ಗಳಿಸಿ 5ನೇ ಸ್ಥಾನದಲ್ಲಿದ್ದಾರೆ. ಆ ಚುನಾವಣೆಯಲ್ಲಿ ಚಲಾವಣೆಯಾದ 21,90,398 ಮತಗಳಲ್ಲಿ ಡಿ.ಕೆ.ಸುರೇಶ್ 6,52,723 ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿ ಮುನಿರಾಜುಗೌಡ (4,21,243) ಅವರನ್ನು 2,31,480 ಮತಗಳ ಅಂತರದಿಂದ ಪರಾಭವಗೊಳಿಸಿದ್ದರು.
ಬಾಕ್ಸ್............
ಗೆದ್ದವರ ಶೇಕಡಾವಾರು ಮತಗಳ ಅಂತರವರ್.ಗೆದ್ದ ಅಭ್ಯರ್ಥ.
ಚಲಾವಣೆಯಾದ ಮ.ಲಭಿಸಿದ ಮ.
ಗೆಲುವಿನ ಅಂತ.ಶೇಕಡವಾರು196.
ಎಂ.ವಿ. ರಾಜಶೇಖರನ್(ಕಾಂಗ್ರೆಸ್.2,66,38.
1,21,39.18.09%
197.ಸಿ.ಕೆ. ಜಾಫರ್ ಷರೀಫ್(ಕಾಂಗ್ರೆಸ್.
3,05,08.2,43,98.
61.13%197.
ಎಂ.ವಿ.ಚಂದ್ರಶೇಖರ ಮೂರ್ತಿ(ಕಾಂಗ್ರೆಸ್.4,07,45.
1,92,11.1.14%
198.ಎಂ.ವಿ.ಚಂದ್ರಶೇಖರ ಮೂರ್ತಿ(ಕಾಂಗ್ರೆಸ್.
4,72,34.2,52,38.
27.21%198.
ಎಂ.ವಿ.ಚಂದ್ರಶೇಖರ ಮೂರ್ತಿ(ಕಾಂಗ್ರೆಸ್.6,38,72.
3,05,21.1.10%
198.ಎಂ.ವಿ.ಚಂದ್ರಶೇಖರ ಮೂರ್ತಿ(ಕಾಂಗ್ರೆಸ್.
8,91,18.4,72,26.
28.64%199.
ಎಂ.ವಿ.ಚಂದ್ರಶೇಖರ ಮೂರ್ತಿ(ಕಾಂಗ್ರೆಸ್.7,92,83.
3,01,45.4.22%
199.ಎಚ್.ಡಿ. ಕುಮಾರಸ್ವಾಮಿ(ಜೆಡಿಎಸ್.
10,45,91.4,40,44.
10.27%199.
ಎಂ.ಶ್ರೀನಿವಾಸ್(ಬಿಜೆಪಿ.12,06,04.
4,70,38.1.36%
199.ಎಂ.ವಿ.ಚಂದ್ರಶೇಖರ ಮೂರ್ತಿ(ಕಾಂಗ್ರೆಸ್.
2,33,82.5,32,910 2.76%
200.ತೇಜಸ್ವಿನಿ ರಮೇಶ್(ಕಾಂಗ್ರೆಸ್.
15,52,41.5,83,92.
7.51%200.
ಎಚ್.ಡಿ.ಕುಮಾರಸ್ವಾಮಿ(ಜೆಡಿಎಸ್.19,04,13.
4,93,30.27.25%
201.ಡಿ.ಕೆ. ಸುರೇಶ್(ಕಾಂಗ್ರೆಸ್.
21,90,39.6,52,72.
16.02 %201.
ಡಿ.ಕೆ. ಸುರೇಶ್(ಕಾಂಗ್ರೆಸ್.16,21,90.
8,78,25.12.75%
202.ಡಾ.ಸಿ.ಎನ್.ಮಂಜುನಾಥ್(ಬಿಜೆಪಿ.
19,20,67.10,79,00.
14.05%6ಕೆಆರ್ ಎಂಎನ್ 1,2,3,4,5,6ಜೆಪಿಜಿ
1.ಸಿ.ಕೆ.ಜಾಫರ್ ಷರೀಫ್2.ಎಂ.ವಿ.ಚಂದ್ರಶೇಖರ ಮೂರ್ತಿ
3.ಎಚ್ .ಡಿ.ಕುಮಾರಸ್ವಾಮಿ4.ರಾಜಶೇಖರನ್
5.ಡಿ.ಕೆ.ಸುರೇಶ್6.ಡಾ.ಸಿ.ಎನ್ .ಮಂಜುನಾಥ್