- ತರೀಕೆರೆಯಲ್ಲಿ ಪೋದಾರ್ ಜಂಬೋ ಕಿಡ್ಸ್ ಶಾಲೆಯ ವಾರ್ಷಿಕೋತ್ಸವ ಸಮಾರಂಭ
ಮಕ್ಕಳನ್ನು ವಿಶ್ವಮಾನವರನ್ನಾಗಿ ಮಾಡಿ ಅವರಲ್ಲಿ ವೈಚಾರಿಕತೆ ಮನೋಭಾವ ಬೆಳೆಸಬೇಕು ಎಂದು ಅಜ್ಜಂಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರೊ. ಡಾ.ಎನ್.ಎಲ್.ಆನಂದ್ ಹೇಳಿದ್ದಾರೆ.
ಆಶೀರ್ವಾದ್ ಫೌಂಡೇಶನ್, ಪೋದಾರ್ ಜಂಬೋ ಕಿಡ್ಸ್ ಶಾಲೆಯಿಂದ ಪಟ್ಟಣದ ಸಪ್ತಗಿರಿ ಕನ್ವೆನ್.ಷನ್ ಹಾಲ್ ನಲ್ಲಿ ನಡೆದ ಶಾಲೆ ವಾರ್ಷಿಕೋತ್ಸವದಲ್ಲಿ ಮಾತನಾಡಿದರು. ಮಕ್ಕಳನ್ನು ಮತ್ತು ಅವರ ಮನಸ್ಸಿನ ತಳಮಳ ಅರ್ಥ ಮಾಡಿಕೊಳ್ಳಬೇಕು. ಮಕ್ಕಳು ನಮ್ಮನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಅವರು ತುಂಬಾ ಬುದ್ದಿವಂತರು ಮತ್ತು ಕುಶಾಗ್ರಮತಿಗಳಾಗಿರುತ್ತಾರೆ. ನಾವು ಮಕ್ಕಳ ಸ್ಥಾನದಲ್ಲಿ ನಿಂತು ಯೋಚಿಸಬೇಕು. ಮಕ್ಕಳನ್ನು ಎಷ್ಟು ಚೆನ್ನಾಗಿ ಬೆಳೆಸುತ್ತೇವೆಯೋ ಅಷ್ಟು ಚೆನ್ನಾಗಿ ದೇಶ ಬೆಳೆಯುತ್ತದೆ, ಮಕ್ಕಳನ್ನು ದ್ವೀಪ ಮಾಡಬೇಡಿ ದೀಪ ಮಾಡಿ, ಆಗ ದೀಪ ಮನೆ ಮತ್ತು ಸಮಾಜವನ್ನು ಬೆಳಗುತ್ತದೆ ಎಂದು ಹೇಳಿದರು. ಮೊಬೈಲ್, ಡಿಜಿಟಲ್ ಜೀವನದ ಒಂದು ಭಾಗವಾಗಿ ಬಿಟ್ಟಿದೆ ಮಕ್ಕಳು ಸ್ವತಂತ್ರ ಬಯಸುತ್ತಾರೆ. ಜಂಕ್ ಫುಡ್ ಆಹಾರದ ಒಂದು ಭಾಗವಾಗಿದೆ. ಮಕ್ಖಳು ಗೆಲವು ಸೋಲುಗಳನ್ನು ಸಂಭ್ರಮಿಸಬೇಕು. ಮಕ್ಕಳ ಜೊತೆಯಲ್ಲಿ ಗುಣಮಟ್ಟದ ಸಮಯ ಕಳೆಯಬೇಕು. ಇದು ಮಕ್ಕಳ ಜೀವನದಲ್ಲಿ ಮಹತ್ವದ ಬದಲಾವಣೆ ತರುತ್ತದೆ ಎಂದ ಅವರು ಸಂವಾದ ನಡೆಸಿ ಅದರಲ್ಲಿ ವಿಜೇತರಾದವರಿಗೆ ಪುಸ್ತಕ ಬಹುಮಾನ ವಿತರಿಸಿದರು.ಆಶೀರ್ವಾದ್ ಫೌಂಡೇಶನ್ ಅಧ್ಯಕ್ಷ ಮಕ್ಕಳ ತಜ್ಞ ಡಾ.ಎಸ್.ಗಿರೀಶ್ ಮಾತನಾಡಿ ಸಂಸ್ಥೆ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಗುರುತಿಸಿಕೊಂಡಿದೆ ಸಮಾಜದ ಬೆಳವಣಿಗೆಗೆ ಈ ಎರಡೂ ಆಧಾರ ಸ್ಥಂಭಗಳು ಭದ್ರ ಬುನಾದಿ. ಆಧುನಿಕ ಜಗತ್ತಿನ ನಾಗಾಲೋಟದಲ್ಲಿ ಮಕ್ಕಳು ಸ್ಪರ್ಧಿಗಳಾಗದೆ, ಒಳ್ಳೆಯ ಸಂಸ್ಕಾರ, ಸಂಪ್ರದಾಯುತ ಸಂಸ್ಕಾರ, ಗುರು ಹಿರಿಯರಿಗೆ ಕೊಡುವ ಗೌರವ ಉತ್ತಮ ಶಿಕ್ಷಣದ ಜೊತೆಗ ಯಶಸ್ಸಿನ ಭವಿಷ್ಯಕ್ಕೆ ಬುನಾದಿ ಎಂದು ಹೇಳಿದರು.ತರೀಕೆರೆ ಜಂಬೋ ಕಿಡ್ಸ್ ಶಾಲೆ ಪ್ರಿನ್ಸಿಪಾಲರಾದ ಡಾ.ರಶ್ಮಿ ಗಿರೀಶ್ ಮಾತನಾಡಿ ಪುಸ್ತಕ ಮತ್ತು ಪಠ್ಯೇತರ ಚಟುವಟಿಕೆಗಳಿಂದ ಮಕ್ಕಳಿಗೆ ಸಿಗುವ ಎಲ್ಲಾ ಅವಕಾಶ ಶಾಲೆಯಿಂದ ಸಿಗುವ ಹಾಗೆ ಶಾಲಾ ವಾತಾವರಣ ಕಲ್ಪಿಸಲಾಗಿದೆ. ಮಕ್ಕಳ ಭವಿಷ್ಯಕ್ಕೆ ಅನುಗುಣ ಹಾಗೂ ಸರ್ವತೋಮುಖ ಬೆಳವಣಿಗೆಗೆ ನಮ್ಮ ತಂಡ ಎಲ್ಲಾ ರೀತಿಯಲ್ಲೂ ಸನ್ನದ್ಧವಾಗಿದೆ. ಮಕ್ಕಳ ಜ್ಞಾನ ವೃದ್ಧಿ ಬಗ್ಗೆ ಪೋಷಕರು ಸಂತೃಪ್ತಿ ಯಾಗಿದ್ದಾರೆ ಎಂದು ಹೇಳಿದರು. ಫೀಬಾ ಪೌಲ್, ಶಾಲಾ ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.-22ಕೆಟಿಆರ್.ಕೆ.01ಃ
ತರೀಕೆರೆಯಲ್ಲಿ ಆಶೀರ್ವಾದ್ ಫೌಂಡೇಶನ್, ಪೋದಾರ್ ಜಂಬೋ ಕಿಡ್ಸ್ ಶಾಲೆಯಿಂದ ನಡೆದ ಶಾಲೆ ವಾರ್ಷಿಕೋತ್ಸವದಲ್ಲಿ ಆಶೀರ್ವಾದ ನರ್ಸಿಂಗ್ ಹೋಂನ ಮಕ್ಕಳ ತಜ್ಞ ಡಾ.ಎಸ್.ಗಿರೀಶ್, ಜಂಬೋ ಕಿಡ್ಸ್ ಶಾಲೆಯ ಪ್ರಿನ್ಸಿಪಾಲರಾದ ಡಾ.ರಶ್ಮಿ ಗಿರೀಶ್ ಅಜ್ಜಂಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರೊಫೆಸರ್ ಡಾ.ಎನ್.ಎಲ್.ಆನಂದ್ ಭಾಗವಹಿಸಿದ್ದರು.