ಡಾ.ನಾಗಮಾರಪಳ್ಳಿ ಆಸ್ಪತ್ರೆಗೀಗ ಹೈಟೆಕ್ ಸ್ಪರ್ಶ

KannadaprabhaNewsNetwork |  
Published : Nov 12, 2026, 01:30 AM IST
ಚಿತ್ರ 11ಬಿಡಿಆರ್61 | Kannada Prabha

ಸಾರಾಂಶ

ಬಡವರಿಗೆ ಕಡಿಮೆ ದರದಲ್ಲಿ ಅತ್ಯುತ್ತಮ ಚಿಕಿತ್ಸೆ ಲಭಿಸಬೇಕು ಎನ್ನುವುದು ದಿ. ಡಾ.ಗುರುಪಾದಪ್ಪ ನಾಗಮಾರಪಳ್ಳಿ ಅವರ ಕನಸಾಗಿತ್ತು ಎಂದು ಸೂರ್ಯಕಾಂತ ನಾಗಮಾರಪಳ್ಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೀದರ್

ಸಹಕಾರ ಕ್ಷೇತ್ರದ ಮೊದಲ ಆಸ್ಪತ್ರೆ ಎಂಬ ಹೆಗ್ಗಳಿಕೆ ಇರುವ ನಗರದ ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿಸೂಪರ್ ಸ್ಪೆಷಾಲಿಟಿ ಸಹಕಾರ ಆಸ್ಪತ್ರೆಯು ನವೀಕರಣಗೊಂಡಿದೆ.

ಬೆಡ್ ಸೌಲಭ್ಯ ಹೆಚ್ಚಿಸಲಾಗಿದೆ. ತಪಾಸಣೆ ಮತ್ತು ಚಿಕಿತ್ಸೆಗೆ ಹೈಟೆಕ್ ಸ್ಪರ್ಶ ನೀಡಲಾಗಿದೆ. ನವೀನ ಮತ್ತು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಆಧುನೀಕರಣಗೊಂಡಿರುವ ಆಸ್ಪತ್ರೆಯು ದಿ.ಡಾ.ಗುರುಪಾದಪ್ಪ ನಾಗಮಾರಪಳ್ಳಿ ಅವರ ಜನ್ಮದಿನ ವಾದ ನ.11ರಂದು ಸಾರ್ವಜನಿಕ ಸೇವೆ ಆರಂಭಿಸಿದೆ. ಆಸ್ಪತ್ರೆಯ ಸಂಸ್ಥಾಪಕರಾದ ಜಿಲ್ಲೆಯ ಸಹಕಾರ ಕ್ಷೇತ್ರದ ದಿಗ್ಗಜರಾಗಿದ್ದ ದಿ.ಡಾ.ಗುರುಪಾದಪ್ಪ ನಾಗಮಾರಪಳ್ಳಿ ಅವರ ಜನ್ಮದಿನವನ್ನು ಆಸ್ಪತ್ರೆಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಕೇಕ್ ಕಟ್ ಮಾಡಲಾಯಿತು. ದಿ.ನಾಗಮಾರಪಳ್ಳಿ ಅವರ ಸೇವೆ, ಕೊಡುಗೆಯನ್ನು ಸ್ಮರಿಸಲಾಯಿತು.

ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಉಮಾಕಾಂತ ನಾಗಮಾರಪಳ್ಳಿ, ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ, ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿಸೂಪರ್ ಸ್ಪೇಷಾಲಿಟಿ ಸಹಕಾರ ಆಸ್ಪತ್ರೆಯ ಅಧ್ಯಕ್ಷ ತರುಣ್ ಸೂರ್ಯಕಾಂತ ನಾಗಮಾರಪಳ್ಳಿ ಅವರ ಉಪಸ್ಥಿತಿಯಲ್ಲಿ ನವೀಕರಣಗೊಂಡ ಆಸ್ಪತ್ರೆ ಕಾರ್ಯಾರಂಭಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಉಮಾಕಾಂತ ನಾಗಮಾರಪಳ್ಳಿ ಮಾತನಾಡಿ, ಆಸ್ಪತ್ರೆಯ ಬೆಡ್‌ಗಳ ಸಾಮರ್ಥ್ಯವನ್ನು 100ಕ್ಕೆ ಹೆಚ್ಚಿಸ ಲಾಗಿದೆ. ತಪಾಸಣೆ, ಚಿಕಿತ್ಸಾ ವ್ಯವಸ್ಥೆಯನ್ನು ಆಧುನೀಕರಣಗೊಳಿಸಲಾಗಿದೆ. ಇದರಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ನಾರಂಜಾ ಕಾರ್ಖಾನೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಮಾತನಾಡಿ, ಬಡವರಿಗೆ ಕಡಿಮೆ ದರದಲ್ಲಿ ಅತ್ಯುತ್ತಮ ಚಿಕಿತ್ಸೆ ಲಭಿಸಬೇಕು ಎನ್ನುವುದು ದಿ. ಡಾ.ಗುರುಪಾದಪ್ಪ ನಾಗಮಾರಪಳ್ಳಿ ಅವರ ಕನಸಾಗಿತ್ತು. ಅವರ ಆಶಯದಂತೆ ಆಸ್ಪತ್ರೆ ಸೇವೆ ಸಲ್ಲಿಸುತ್ತಿದೆ. ಅತ್ಯುತ್ತಮ ಚಿಕಿತ್ಸೆಯನ್ನು ಅತೀ ಕಡಿಮೆ ವೆಚ್ಚದಲ್ಲಿ ನೀಡಲಾಗುತ್ತಿದೆ ಎಂದರು.

ಆಸ್ಪತ್ರೆ ಅಧ್ಯಕ್ಷ ತರುಣ್ ಸೂರ್ಯಕಾಂತ ನಾಗಮಾರಪಳ್ಳಿ ಮಾತನಾಡಿ, ಆಸ್ಪತ್ರೆಯನ್ನು ಆಧುನೀಕರಣಗೊಳಿಸಲಾಗಿದೆ. ಹಾಸಿಗೆ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ಬಡವರಿಗೆ ಅತ್ಯುತ್ತುಮ ಚಿಕಿತ್ಸೆ ಲಭಿಸುವಂತೆ ಮಾಡಲಾಗಿದೆ ಎಂದು ಹೇಳಿದರು.

ಸಮಾರಂಭದಲ್ಲಿ ಆಸ್ಪತ್ರೆಯ ನಿರ್ದೇಶಕರು ಮತ್ತು ಗಣ್ಯರಾದ ಡಿ.ಕೆ.ಸಿದ್ರಾಮ, ಡಾ.ಚಂದ್ರಕಾಂತ ಗುದಗೆ, ಅಶೋಕ ರೇಜಂತಲ್, ಶಕುಂತಲಾ ಬೆಲ್ದಾಳೆ, ಆಕಾಶ ನಾಗಮಾರಪಳ್ಳಿ, ರಾಚಪ್ಪ ಪಾಟೀಲ್, ಡಾ.ವಿಜಯಕುಮಾರ ಕೋಟೆ, ರಾಮದಾಸ ತುಕಾರಾಮ, ಸಂಜು ಸಿದಾಪುರೆ, ಶಿವಕುಮಾರ ಭಾಲ್ಕೆ, ಸೈಯದ್ ಖಿಜರುಲ್ಲ, ಗೋವಿಂದ್, ನರಸಾರೆಡ್ಡಿ, ವಿಜಯಕುಮಾರ ಆನಂದೆ, ಮಹೇಶ ಪಾಂಚಾಳ್, ವಿಜಯರೆಡ್ಡಿ, ಶಿವಕುಮಾರ ಕನ್ನಾ, ಗಣ್ಯರಾದ ಸಿದ್ರಾಮ ವಾಘಮಾರೆ, ವಿಜಯಕುಮಾರ ಪಾಟೀಲ್, ವೀರಶೆಟ್ಟಿ ಪಟ್ನೆ, ಭೀಮರಾವ ಪಾಟೀಲ್, ಫರ್ನಾಂಡಿಸ್ ಹಿಪ್ಪಳಗಾಂವ್, ಅಮರ್ ಗೋಣಿ, ನಂದು ಜೋಶಿ, ಮಹಾದೇವ ಪಾಟೀಲ್, ಪೀಟರ್ ಶ್ರೀಮಂಡಲ್, ಬಾಲಾಜಿರೆಡ್ಡಿ, ಕಿಶನರಾವ್ ಪಾಟೀಲ್, ವಿಶ್ವನಾಥ ಘೋಡೆ, ಸೋಮಶೇಖರ ಪಾಟೀಲ್, ಹಾವಗಿರಾವ ಬಿರಾದಾರ್, ಕುಶಾಲ ಯಾಬಾ, ಪ್ರಸಾದ ಪಾಟೀಲ್ ಚಿಮಕೊಡ, ಚೇತನ ದಾನಾ ಮತ್ತಿತರ ಗಣ್ಯರು, ಮುಖಂಡರು ಉಪಸ್ಥಿತರಿದ್ದರು.

ದಿ. ಡಾ.ಗುರುಪಾದಪ್ಪ ನಾಗಮಾರಪಳ್ಳಿ ಅವರ ಜನ್ಮದಿನ ನಿಮಿತ್ತ ದಿನವಿಡೀ ಹೊರರೋಗಿ ತಪಾಸಣೆ ಉಚಿತವಾಗಿ ನಡೆಯಿತು. ಎಂಆರ್‌ಐ, ಸಿಟಿ ಸ್ಕ್ಯಾನ್ ಮತ್ತು ಲ್ಯಾಬ್ ಟೆಸ್ಟಗಳಿಗೆ ಶೇ.50 ರಿಯಾಯತಿ ನೀಡಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀಪಾವಳಿಲೀ ರಾಕೆಟ್‌ನಂತೆ ಹಾರಿದ ವಾಯು ಮಾಲಿನ್ಯ!
ಕೌಟುಂಬಿಕ ಕೇಸಲ್ಲಿ ಕುಟುಂಬ ಸಿಲುಕಿಸುವುದು ತರವಲ್ಲ: ಕೋರ್ಟ್‌