ರಬಕವಿ-ಬನಹಟ್ಟಿ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ರಬಕವಿಯ ನೇತ್ರತಜ್ಞ ಡಾ.ಪದ್ಮಜೀತ ನಾಡಗೌಡ ಪಾಟೀಲ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರ ಪರಿಣಾಮ ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆಗೊಂಡಿದ್ದರು.
ಇದೀಗ ಲೋಕಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಪರ ಬೆಂಬಲಿಸಲು ನಿರ್ಧರಿಸಿ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಇವರ ಬೆಂಬಲಿಗರಾದ ಶಂಕರ ಸೊರಗಾಂವಿ, ಮಾಳು ಹಿಪ್ಪರಗಿ, ಜಿನ್ನಪ್ಪ ಹೊಸೂರ, ಶ್ರೀಖರ ಪಿಸೆ, ಪ್ರಕಾಶ ನಡೋನಿ, ಸದಾಶಿವ ನಾಯಕ, ಸಂಜಯ ಅಮ್ಮಣಗಿಮಠ, ರಾಜು ದೇಸಾಯಿ, ರವೀಂದ್ರ ಬಾಡಗಿ, ಸಂಗಪ್ಪ ಹಲ್ಲಿ ಸೇರಿದಂತೆ ಮಹಾಲಿಂಗಪುರ,ತೇರದಾಳ, ರಬಕವಿ-ಬನಹಟ್ಟಿ ನಗರ ಹಾಗೂ ಕ್ಷೇತ್ರದಲ್ಲಿ ನೂರಾರು ಮುಖಂಡರು, ಕಾರ್ಯಕರ್ತರು ಸಾಮೂಹಿಕವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.