ಗೈರಾದ ಅಧಿಕಾರಿಗಳಿಗೆ ನೋಟಿಸ್‌ ನೀಡಲು ಡಾ. ಪುನೀತ್ ಸೂಚನೆ

KannadaprabhaNewsNetwork |  
Published : Aug 01, 2025, 12:30 AM IST
ಫೊಟೋ-31ಬಿವೈಡಿ1 | Kannada Prabha

ಸಾರಾಂಶ

ಸಣ್ಣ ನೀರಾವರಿ, ಬಿಇಒ, ತಾಲೂಕು ಆರೋಗ್ಯಾಧಿಕಾರಿ, ಲೋಕೋಪಯೋಗಿ, ರೇಷ್ಮೆ ಇಲಾಖೆ, ಎಪಿಎಂಸಿ ಸೇರಿದಂತೆ ತಾಲೂಕು ಮಟ್ಟದ ಕೆಲವು ಅಧಿಕಾರಿಗಳ ಗೈರಾಗಿದ್ದು, ಎಲ್ಲರಿಗೂ ಸಭೆಯ ಬಳಿಕ ನೋಟಿಸ್ ಜಾರಿಗೊಳಿಸಲು ತಾಪಂ ಇಒ ಸೂಚಿಸಿದರು.

ಬ್ಯಾಡಗಿ: ತ್ರೈಮಾಸಿಕ, ಮಾಸಿಕ ಸಭೆಗಳಿಗೆ ಬಹುತೇಕ ತಾಲೂಕು ಮಟ್ಟದ ಅಧಿಕಾರಿಗಳು ಗೈರಾಗುತ್ತಿರುವುದರಿಂದ ಪ್ರಗತಿ ವರದಿ ಪಡೆಯಲು ಸಾಧ್ಯವಾಗುತ್ತಿಲ್ಲ. ಸಹಾಯಕ ಅಧಿಕಾರಿಗಳು ಅಪೂರ್ಣ ಮಾಹಿತಿ ನೀಡುವುದರಿಂದ ಸಭೆಯಲ್ಲಿ ಗೊಂದಲವಾಗುತ್ತಿದೆ. ಸಭೆಗೆ ಗೈರಾದ ಎಲ್ಲ ಅಧಿಕಾರಿಗಳಿಗೆ ಶಿಸ್ತುಕ್ರಮದ ನೋಟಿಸ್ ಜಾರಿಗೊಳಿಸುವಂತೆ ಆಡಳಿತಾಧಿಕಾರಿ ಡಾ. ಪುನೀತ್ ಅವರು ತಾಪಂ ಇಒಗೆ ಸೂಚಿಸಿದರು.

ಇಲ್ಲಿಯ ತಾಪಂ ಪ್ರಗತಿ ಪರಿಶೀಲನಾ ಮಾಸಿಕ ಸಭೆಯಲ್ಲಿ ಅವರು ಈ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ ಬಾರಿಯ ಸಭೆಯಲ್ಲಿ ಪಿಡಬ್ಲ್ಯೂಡಿ ಜಿಲ್ಲಾ ಹಾಗೂ ರಾಜ್ಯ ಹೆದ್ದಾರಿ ದುರಸ್ತಿ, ನಿರ್ವಹಣೆ, ಬಜೆಟ್ ಸೇರಿದಂತೆ ಕೆಲವು ಸಮಸ್ಯೆಗಳ ಕುರಿತು ಚರ್ಚಿಸಿ ಕ್ರಮ ಕೈಗೊಂಡು ವರದಿ ನೀಡಲು ಸೂಚಿಸಲಾಗಿತ್ತು. ಆದರೆ ಸಭೆಗೆ ಮುಖ್ಯ ಎಂಜಿನಿಯರ್‌ ಗೈರಾದ ಹಿನ್ನೆಲೆಯಲ್ಲಿ ಸಹಾಯಕ ಎಂಜಿನಿಯರ್‌ ಶಿವಪ್ಪ ಮಾಳಿ ವರದಿ ನೀಡಲು ಮುಂದಾದರು. ಆಡಳಿತಾಧಿಕಾರಿ ಕೇಳಿದ ಮಾಹಿತಿ ಅವರ ಬಳಿ ಇರಲಿಲ್ಲ. ಹೀಗಾಗಿ ಅವರನ್ನು ಮಾಹಿತಿ ತೆಗೆದುಕೊಂಡು ಸಭೆಗೆ ಬರುವಂತೆ ಸೂಚಿಸಿದಲ್ಲದೆ, ಸಭೆಯಿಂದ ಹೊರಕಳುಹಿಸಿದರು.

ಕೆಲವರು ಅನುಪಾಲನೆ ವರದಿ ಅನುಷ್ಠಾನ ಕುರಿತು ಅಧಿಕಾರಿಗಳು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಸಮಸ್ಯೆಗಳನ್ನು ಪ್ರಸ್ತಾಪಿಸಿದಾಗ ಪತ್ರ ಬರೆದಿದ್ದೇವೆ, ಮೇಲಧಿಕಾರಿಗಳಿಗೆ ತಿಳಿಸಿದ್ದೇವೆ, ಪ್ರಸ್ತಾವನೆಯಲ್ಲಿದೆ ಇತ್ಯಾದಿ ಹೇಳಿ, ಪ್ರಗತಿ ಕುರಿತು ಸಮರ್ಪಕವಾಗಿ ವರದಿ ನೀಡುತ್ತಿಲ್ಲ ಎಂದ ಡಾ. ಪುನೀತ್‌, ಅಧಿಕಾರಿಗಳ ನಿರ್ಲಕ್ಷ್ಯ ಸರಿಯಲ್ಲ ಎಂದರು.

ಶೇ. 100 ಫಲಿತಾಂಶ ಕೊಡಿ: ವಸತಿನಿಲಯಗಳಿಗೆ ಮೂಲ ಸೌಲಭ್ಯ ಸೇರಿದಂತೆ ವಿಶೇಷ ಸವಲತ್ತು ನೀಡಿದೆ. ಆದರೆ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ವಸತಿ ನಿಲಯದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ವಿದ್ಯಾರ್ಥಿಗಳ ಫಲಿತಾಂಶ ಇಳಿಮುಖವಾಗಿದೆ. ಶೇ. 100 ಫಲಿತಾಂಶ ಪಡೆಯಲು ಏನು ಸಮಸ್ಯೆ? ಮೇಲ್ವಿಚಾರಕರು ಪ್ರತಿದಿನ ಸಂಜೆ 6-8 ವರೆಗೆ ನಿಲಯದಲ್ಲಿದ್ದು, ವಿದ್ಯಾರ್ಥಿಗಳ ಅಧ್ಯಯನದ ಬಗ್ಗೆ ಗಮನ ಕೊಡಬೇಕು. ಈ ಕುರಿತು ವಾಟ್ಸ್‌ಆ್ಯಪ್‌ ಗ್ರೂಪ್‌ ಮಾಡಿ ಮಕ್ಕಳ ಪ್ರಗತಿ ಕುರಿತು ನಿತ್ಯ ಮಾಹಿತಿ ನೀಡಿ ಎಂದು ಸಹಾಯಕ ನಿರ್ದೇಶಕ ಶರಣಯ್ಯ ಕುಲಕರ್ಣಿ ಅವರಿಗೆ ಸೂಚಿಸಿದರು.

ಸಣ್ಣ ನೀರಾವರಿ, ಬಿಇಒ, ತಾಲೂಕು ಆರೋಗ್ಯಾಧಿಕಾರಿ, ಲೋಕೋಪಯೋಗಿ, ರೇಷ್ಮೆ ಇಲಾಖೆ, ಎಪಿಎಂಸಿ ಸೇರಿದಂತೆ ತಾಲೂಕು ಮಟ್ಟದ ಕೆಲವು ಅಧಿಕಾರಿಗಳ ಗೈರಾಗಿದ್ದು, ಎಲ್ಲರಿಗೂ ಸಭೆಯ ಬಳಿಕ ನೋಟಿಸ್ ಜಾರಿಗೊಳಿಸಲು ತಾಪಂ ಇಒ ಸೂಚಿಸಿದರು.

ಸಭೆಯಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಮಲ್ಲಿಕಾರ್ಜುನ, ವ್ಯವಸ್ಥಾಪಕ ಪ್ರಕಾಶ ಹಿರೇಮಠ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಗಣೇಶ ಕಮ್ಮಾರ, ತೋಟಗಾರಿಕೆ ಸಹಾಯಕ ನಿರ್ದೇಶಕ ಅಶೋಕ ಕುರುಬರ, ರಾಜು ಅರಳೀಕಟ್ಟಿ, ಸುರೇಶ ಬೇಡರ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಗವಿಕಲತೆ ನಿರ್ಮೂಲನೆಗೆ ತಪ್ಪದೇ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿ
ಕಾಂಗ್ರೆಸ್ಸಿನಿಂದ ಉ.ಕ.ಕ್ಕೆ ಹೆಚ್ಚು ಅನ್ಯಾಯ-ಸಂಸದ ಬೊಮ್ಮಾಯಿ