ಅಭಿಮಾನಿಗಳಿಂದ ಡಾ.ಪುನೀತ್‌ ರಾಜ್‌ಕುಮಾರ್ ಪುಣ್ಯಸ್ಮರಣೆ

KannadaprabhaNewsNetwork |  
Published : Oct 31, 2025, 01:45 AM IST
ಪಟ್ಟಣದ ಹಳೇ ಬಸ್ ನಿಲ್ದಾಣದ ಡಾ.ಪುನಿತ್‌ರಾಜ್‌ಕುಮಾರ್ ಅಭಿಮಾನಿಗಳ ಸಂಘದವರು ಏರ್ಪಡಿಸಿದ್ದ ೪ನೇ ವರ್ಷದ ಪುಣ್ಯಸ್ಮರಣೆಯ  ಕಾರ್ಯಕ್ರಮ ನಡೆಯಿತು | Kannada Prabha

ಸಾರಾಂಶ

ಸಂಘವು ನಿರಂತರವಾಗಿ ಸಮಾಜಮುಖಿ ಸೇವೆ ಮಾಡುತ್ತಿದ್ದು, ಪಟ್ಟಣದ ಡಾ.ರಾಜ್‌ ಕುಮಾರ್ ಧಾಮ, ಪುನೀತ್‌ ರಾಜ್‌ಕುಮಾರ್ ಉದ್ಯಾನವನಕ್ಕೆ ಸಂಘದವರು ಸ್ಪಂದಿಸಿದ್ದು ಶಾಸಕರು, ಪುರಸಭೆಯವರು ಪ್ರಗತಿಗೆ ಕೈಜೋಡಿಸಿದ್ದಾರೆ.

ಚನ್ನರಾಯಪಟ್ಟಣ: ನಟ, ಗಾಯಕ, ನಿರೂಪಕ, ನಿರ್ಮಾಪಕರಾಗಿ ಕನ್ನಡದ ಹಿರಿಮೆ ಎತ್ತಿಹಿಡಿದು, ಬಡವಿದ್ಯಾರ್ಥಿಗಳಿಗೆ ಶಕ್ತಿಧಾಮ, ನೇತ್ರದಾನ ಸೇರಿ ಹಲವಾರು ಸಮಾಜ ಮುಖಿ ಸೇವೆ ಮಾಡಿ ಸಂದೇಶಗಳನ್ನು ನೀಡಿದ ನಗುವಿನ ರಾಜ ಡಾ.ಪುನೀತ್‌ ರಾಜ್‌ಕುಮಾರ್ ಎಂದು ಹಿರಿಯ ಪತ್ರಕರ್ತ ಪುಟ್ಟಣ್ಣ ಗೋಕಾಕ್ ತಿಳಿಸಿದರು. ಅವರು ಪಟ್ಟಣದ ಹಳೇ ಬಸ್ ನಿಲ್ದಾಣದ ಡಾ.ಪುನೀತ್‌ ರಾಜ್‌ಕುಮಾರ್ ಅಭಿಮಾನಿಗಳ ಸಂಘದಿಂದ ಏರ್ಪಡಿಸಿದ್ದ 4ನೇ ವರ್ಷದ ಪುಣ್ಯಸ್ಮರಣೆಯ ಕಾರ್ಯಕ್ರಮದಲ್ಲಿ ಮಾತನಾಡಿ, ಸಂಘವು ನಿರಂತರವಾಗಿ ಸಮಾಜಮುಖಿ ಸೇವೆ ಮಾಡುತ್ತಿದ್ದು, ಪಟ್ಟಣದ ಡಾ.ರಾಜ್‌ ಕುಮಾರ್ ಧಾಮ, ಪುನೀತ್‌ ರಾಜ್‌ಕುಮಾರ್ ಉದ್ಯಾನವನಕ್ಕೆ ಸಂಘದವರು ಸ್ಪಂದಿಸಿದ್ದು ಶಾಸಕರು, ಪುರಸಭೆಯವರು ಪ್ರಗತಿಗೆ ಕೈಜೋಡಿಸಿದ್ದಾರೆ ಎಂದರು. ಅಧ್ಯಕ್ಷರಾದ ಗಂಗಣ್ಣ ಬರಗೂರು, ರುದ್ರೇಶ್, ತೀರ್ಥಾಚಾರ್, ಹೇಮಂತ್‌ಕುಮಾರ್, ಕೃಷ್ಣಮೂರ್ತಿ, ಅಶೋಕ್, ದೇವರಾಜ್, ಮುಬಾರಕ್, ಸಂತೋಷ್, ಬಾಲಕೃಷ್ಣ, ಜಯರಾಂ, ಎಂ. ಎಸ್. ಮಂಜು, ರಾಜ್‌ಕುಮಾರ್ ಸಂಘದ ಗೌರವಾಧ್ಯಕ್ಷ ರೇವಣ್ಣ ಮತ್ತಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

2027ರಿಂದ ಪಿಯು ಮಕ್ಳಿಗೆ ಮುದ್ರಿತ ಅಂಕಪಟ್ಟಿ ಸಿಗದು!
ಹೆಣ್ಣುಮಕ್ಕಳು, ಹಳ್ಳಿ ಹೈಕಳೇ ಈ ಬಾರಿಯೂ ಮೇಲುಗೈ-ಪಿಯುಸಿ ಐತಿಹಾಸಿಕ ಫಲಿತಾಂಶ