ಡಾ। ರಾಜ್ ಕಿಡ್ನಾಪ್‌: 9 ವೀರಪ್ಪನ್ ಬಂಟರು ಖುಲಾಸೆ

KannadaprabhaNewsNetwork |  
Published : Feb 26, 2026, 02:00 AM ISTUpdated : Feb 26, 2026, 11:25 AM IST
Dr Rajkumar Veerappan

ಸಾರಾಂಶ

 ಕನ್ನಡ ವರದನಟ ಡಾ। ರಾಜ್‌ಕುಮಾರ್ ಅಪಹರಣ ಪ್ರಕರಣದಲ್ಲಿನ ಕಾಡುಗಳ್ಳ ವೀರಪ್ಪನ್‌ನ ಒಂಬತ್ತು ಸಹಚರರ ಖುಲಾಸೆಯನ್ನು ಮದ್ರಾಸ್ ಹೈಕೋರ್ಟ್ ಅನುಮೋದಿಸಿದೆ.ಅವರನ್ನು ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್  ವಜಾಗೊಳಿಸಿದೆ.

ಚೆನ್ನೈ: 2000ನೇ ಇಸವಿಯಲ್ಲಿ ಕನ್ನಡ ವರದನಟ ಡಾ। ರಾಜ್‌ಕುಮಾರ್ ಅಪಹರಣ ಪ್ರಕರಣದಲ್ಲಿನ ಕಾಡುಗಳ್ಳ ವೀರಪ್ಪನ್‌ನ ಒಂಬತ್ತು ಸಹಚರರ ಖುಲಾಸೆಯನ್ನು ಮದ್ರಾಸ್ ಹೈಕೋರ್ಟ್ ಅನುಮೋದಿಸಿದೆ.ಅವರನ್ನು ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.

ಸೆ,25, 2018 ರಂದು, ಗೋಪಿಚೆಟ್ಟಿಪಾಳ್ಯಂ ಸೆಷನ್ಸ್ ನ್ಯಾಯಾಲಯವು ಪ್ರಕರಣದಲ್ಲಿ ಉಳಿದಿರುವ ಒಂಬತ್ತು ಆರೋಪಿಗಳಾದ ಗೋವಿಂದರಾಜ್, ಆಂಡ್ರಿಲ್, ಪಸುವಣ್ಣ, ಪುಟ್ಟುಸ್ವಾಮಿ, ಕಲ್ಮಂದಿರಿರಾಮನ್, ಮಾರನ್, ಸೆಲ್ವಂ, ಅಮೃತಲಿಂಗಂ ಮತ್ತು ನಾಗರಾಜ್ ಅವರನ್ನು ಎಲ್ಲಾ ಅಪರಾಧಗಳಿಂದ ಖುಲಾಸೆಗೊಳಿಸಿತ್ತು.

ವೀರಪ್ಪನ್ ಸೇರಿದಂತೆ ಒಟ್ಟು 14 ಜನರು ಪ್ರಕರಣದಲ್ಲಿ

ವೀರಪ್ಪನ್ ಸೇರಿದಂತೆ ಒಟ್ಟು 14 ಜನರು ಪ್ರಕರಣದಲ್ಲಿ ಆರೋಪಿಗಳಾಗಿದ್ದರು. ವೀರಪ್ಪನ್, ಸೇತುಕುಳಿ ಗೋವಿಂದನ್, ಚಂದ್ರಗೌಡ ಮತ್ತು ಸೇತುಮಣಿ 2004 ರಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟರು. ಆರೋಪಿಗಳಲ್ಲಿ ಒಬ್ಬರಾದ ರಮೇಶ್ ಅವರನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.ಏನಿದು ಪ್ರಕರಣ?:

ಜುಲೈ 30, 2000 ರಂದು ವೀರಪ್ಪನ್ ಮತ್ತು ಅವನ ಸಹಚರರು ರಾಜ್‌ಕುಮಾರ್ ಅವರನ್ನು ಅಪಹರಿಸಿದ್ದರು. ಈರೋಡ್ ಜಿಲ್ಲೆಯ ತಾಳವಾಡಿ ಬಳಿಯ ತೊಡ್ಡಗಾನೂರಿನಲ್ಲಿ ರಾಜ್‌ಕುಮಾರ್ ತಮ್ಮ ತೋಟದ ಮನೆಯಲ್ಲಿದ್ದಾಗ ಈ ಘಟನೆ ನಡೆದಿತ್ತು. 108 ದಿನಗಳ ನಂತರ ವೀರಪ್ಪನ್‌ ಡಾ। ರಾಜ್‌ಕುಮಾರ್ ಅವರನ್ನು ಬಿಡುಗಡೆ ಮಾಡಿದ್ದ.

18 ವರ್ಷಗಳ ಕಾಲ ವಿಚಾರಣೆ

ವಿಚಾರಣಾ ನ್ಯಾಯಾಲಯದಲ್ಲಿ ಸುಮಾರು 10 ನ್ಯಾಯಾಧೀಶರು 18 ವರ್ಷಗಳ ಕಾಲ ವಿಚಾರಣೆ ನಡೆಸಿ 2018ರ ಸೆ.17ರಂದು ವಿಚಾರಣೆ ಮುಕ್ತಾಯಗೊಳಿಸಿ ಆರೋಪಿಗಳನ್ನು ಖುಲಾಸೆ ಮಾಡಿದ್ದರು. ಆದರೆ, ಪ್ರಾಸಿಕ್ಯೂಷನ್ 2019 ರಲ್ಲಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.ಮೇಲ್ಮನವಿ ಸಲ್ಲಿಸಿದ 7 ವರ್ಷಗಳ ನಂತರ, ನ್ಯಾ। ಪಿ ವೇಲ್‌ಮುರುಗನ್ ಮತ್ತು ನ್ಯಾ.ಎಂ. ಜೋತಿರಾಮನ್ ಅವರಿದ್ದ ವಿಭಾಗೀಯ ಪೀಠವು ಬುಧವಾರ ಮೇಲ್ಮನವಿಯನ್ನು ಅಂಗೀಕರಿಸಲು ನಿರಾಕರಿಸಿತು ಮತ್ತು ವಿಚಾರಣಾ ನ್ಯಾಯಾಲಯದ ಆದೇಶವನ್ನು ದೃಢಪಡಿಸಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಮಹಿಳಾ ಮೀಸಲಿಂದ ರಾಜಕೀಯಚಿತ್ರಣವೇ ಬದಲು: ಕುಮಾರಸ್ವಾಮಿ
ಬೀದಿಗಳಲ್ಲಿ ಇಲಿಗಳ ಕಾಟ:ಆರೋಗ್ಯ ಸಮಸ್ಯೆ ಭೀತಿ