ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಇಲ್ಲಿನ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪುರಭವನದಲ್ಲಿ ನಡೆದ ಡಾ.ರಾಜ್ ಕುಮಾರ್ ಜನ್ಮದಿನಾಚರಣೆ - ಕನ್ನಡ ಅಭಿಮಾನ ದಿನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಡಾ.ರಾಜ್ ಕುಮಾರ್ ಕನ್ನಡಿಗರ ಮೇಲೆ ಬೀರಿದ ಪ್ರಭಾವ ಅಪಾರವಾಗಿದೆ. ಚಲನಚಿತ್ರಗಳಲ್ಲಿ ಅವರು ನಿರ್ವಹಿಸಿದ ಪಾತ್ರಗಳು ವೈವಿಧ್ಯಮಯವಾಗಿವೆ. ಕನ್ನಡ ನಾಡು ನುಡಿಯ ವಿಚಾರದಲ್ಲೂ ಮುಂಚೂಣಿಯಲ್ಲಿದ್ದರು ಎಂಬುದಕ್ಕೆ ಗೋಕಾಕ್ ಚಳುವಳಿ ಸಾಕ್ಷಿಯಾಗಿದೆ. ಕನ್ನಡ ನಾಡಿನ ಸಾಂಸ್ಕೃತಿಕ ಪ್ರತಿನಿಧಿಯಾಗಿರುವ ಅವರು ಕಲಾ ವಿಶ್ವವಿದ್ಯಾಲಯವಿದ್ದಂತೆ. ಇಂತಹ ಮೇರು ವ್ಯಕ್ತಿಗೆ ಭಾರತರತ್ನ ಪುರಸ್ಕಾರ ದೊರೆಯದಿರುವುದು ವಿಷಾದನೀಯ ಎಂದರು.ತಾ.ಕಸಾಪ ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ್ ಮಾತನಾಡಿ, ಡಾ.ರಾಜ್ ಕುಮಾರ್ ತಾವು ಅಭಿನಯ ಮಾಡುವ ಪಾತ್ರಗಳಿಗೆ ಸಾಕಷ್ಟು ಪೂರ್ವ ಸಿದ್ದತೆ ಮಾಡುತ್ತಿದ್ದರು ಎಂಬ ವಿಚಾರ ಗಮನಾರ್ಹ. ಮೊದಲು ಕಲಿಕೆ ನಂತರ ಅಭಿನಯ ಮಾಡುತ್ತಿದ್ದರು. ಇದು ಸಾಧನೆ ಮಾಡುವ ವ್ಯಕ್ತಿಗಳಿಗೆ ಮಾದರಿಯಾದ ಉದಾಹರಣೆ ಎಂದರು.
ತಾ.ಕಸಾಪ ಅಧ್ಯಕ್ಷ ಪಿ.ಗೋವಿಂದರಾಜ್, ನಿಕಟಪೂರ್ವ ಅಧ್ಯಕ್ಷೆ ಪ್ರಮೀಳಾ ಮಹದೇವ್, ಕವಯತ್ರಿ ಆಶಾ ಗುಡ್ಡದಹಳ್ಳಿ , ಕನ್ನಡ ಹೋರಾಟಗಾರ ಡಿ.ಎಲ್.ಚೌಡಪ್ಪ, ಗುರುರಾಜಪ್ಪ, ಮುಖ್ಯಶಿಕ್ಷಕ ಕೆ.ವಿ.ವೆಂಕಟರೆಡ್ಡಿ, ಕಸಾಪ ಕೋಶಾಧ್ಯಕ್ಷ. ಸಾ.ಲ.ಕಮಲನಾಥ್, ಗೌರವ ಕಾರ್ಯದರ್ಶಿ ಎ.ಜಯರಾಮ್, ಸಂಘಟನಾ ಕಾರ್ಯದರ್ಶಿ ಆರ್.ಗೋವಿಂದರಾಜು, ವಿ.ಎಸ್.ಹೆಗಡೆ, ಜಾಗೃತಿ ವೇದಿಕೆ ನಾಗರಾಜು, ಪಿ.ಎ.ವೆಂಕಟೇಶ್, ನೇತ್ರಾವತಿ, ಮುನಿರತ್ನಮ್ಮ, ಮಲ್ಲೇಶ್, ಷಫೀರ್, ಹಿತೇಶ್ ಭಾಗವಹಿಸಿದ್ದರು.