ಕನ್ನಡ ಪ್ರಭವಾರ್ತೆ ಮುಧೋಳ
ನಗರದ ರಾಷ್ಟ್ರೀಯ ಸಂಶೋಧನಾ ವೇದಿಕೆ ಮುಧೋಳ ವತಿಯಿಂದ ಭಾನುವಾರ ನಡೆದ ಡಾ.ಸಂಗಮೇಶ ಕಲ್ಯಾಣಿ ಅವರ ಶೋಧ-ಪರಿಶೋಧದೊಂದಿಗೆ 10ನೇ ಶತಮಾನದ ಗದಾಯುದ್ಧ ಕಾವ್ಯದ ಐದು ತಾಮ್ರಪಟ ಹಾಗೂ 6ನೇ ಶತಮಾನದ ಬಾದಾಮಿ ಚಾಲುಕ್ಯರ ತಾಮ್ರದ ಪಟಗಳು ಹಾಗೂ ಅವ್ವ ಹೇಳಿದ ಕತೆ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.
ರಾಜಾಶ್ರಯ ಪಡೆದು ಹಲವಾರು ಕವಿಗಳಿಗೆ ಇರದ ಕವಿ ಚಕ್ರವರ್ತಿ ಬಿರುದು ರನ್ನನಿಗೆ ಮಾತ್ರ ದೊರೆಕಿದೆ. ಮಹಾಕವಿ ರನ್ನ ತನ್ನದೆಯಾದ ಗಂಡು ಭಾಷೆಯಲ್ಲಿ ವಿಶಿಷ್ಟ ರೀತಿಯಲ್ಲಿ ಈ ಗದಾಯುದ್ಧ ಕೃತಿ ರಚನೆ ಮಾಡಿದ್ದರಿಂದ ಅವರಿಗೆ ಈ ಬಿರುದು ಬಂದಿದೆ. ಅಂತಹವರ ಕೃತಿಯನ್ನು ತಾಮ್ರದ ಪಟದಲ್ಲಿ ನೀಡಿದ ಡಾ.ಸಂಗಮೇಶ ಕಲ್ಯಾಣಿ ಅವರಿಗೆ ಸರ್ಕಾರದ ವತಿಯಿಂದ ಅಭಿನಂದಿಸಬೇಕಾಗುತ್ತದೆ. ಶ್ರಮದಾಯಕವಾದ ಕಾರ್ಯವನ್ನು ಮಾಡುತ್ತಾ ಜೊತೆಗೆ ಬಾದಾಮಿಯ ಶಾಸನವನ್ನು ತಾಮ್ರದಪಟದಲ್ಲಿ ಬರೆದಿದ್ದು ಇವರಲ್ಲಿ ಪ್ರಾಚೀನ ಕಾಲದ ಆಶಯಗಳು ಇನ್ನೂ ಉಳಿದಿವೆ ಎಂಬುದನ್ನು ತೋರಿಸುತ್ತದೆ. ಹಳಗನ್ನಡದ ಆಸಕ್ತಿ ನನ್ನನ್ನು ಇಲ್ಲಿಯವರೆಗೆ ಕರೆದು ತಂದಿದೆ ಎಂದು ಹೇಳಿದರು.ಶಾಸಕ ಜಗದೀಶ ಗುಡಗುಂಟಿ ಮಾತನಾಡಿ, ಡಾ.ಎಸ್.ಸಿ.ಕಲ್ಯಾಣಿಯವರ ಶಿಶ್ತು ಹಾಗೂ ನಿರರ್ಗಳತೆಗೆ ಹೆಸರಾದವರು. ಅವರ ಕೃತಿ ಬಿಡುಗಡೆ ಮಾಡಿದ್ದು ಸಂತಸ ತಂದಿದೆ ಎಂದರು.
ಮಹಾಲಿಂಗಪುರದ ಶ್ರೀ ಮಹಾಲಿಂಗೇಶ್ವರ ಸಂಸ್ಥಾನಮಠದ ಶ್ರೀ ಮಹಾಲಿಂಗೇಶ್ವರ ಶಿವಯೋಗಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಚಿಂತನ ಸಿರಿಯ ಅಧ್ಯಕ್ಷ ಡಾ.ಎಂ.ಆರ್. ದೇಸಾಯಿ ಅಧ್ಯಕ್ಷತೆ ವಹಿಸಿ ಮಾತನಾಡಿದರು,
----
ನನಗೆ ಹಳಗನ್ನಡ ಹಾಗೂ ಮೋಡಿ ಲಿಪಿಯಲ್ಲಿ ಬಹಳ ಆಸಕ್ತಿ. ಅದಕ್ಕೆ ಪುಷ್ಟಿಕೊಟ್ಟು ಹಂಪಿಯ ಕ.ವಿ.ವಿ ಯಲ್ಲಿ ಪ್ರೋತ್ಸಾಹಕೊಟ್ಟ ನಂತರ ಇಂದು ಮೋಡಿ ಲಿಪಿ ಓದುವುದರಲ್ಲಿ ನಿಪುಣನಾಗಿದ್ದೇನೆ. ಇದಕ್ಕೆ ಮಾಜಿ ಡಿಸಿಎಂ ಜಿ.ಎಂ. ಕಾರಜೋಳರ ಪ್ರೋತ್ಸಾಹವೇ ಕಾರಣ. ಧಾರವಾಡದ ಕ.ವಿ.ವಿ ಯಲ್ಲಿ ಮೋಡಿಲಿಪಿ ಡಿಪ್ಲೊಮಾ ಉಪನ್ಯಾಸಕನಾಗುವ ಅವಕಾಶ ಸಿಕ್ಕಿದೆ. ನನನಗೆ ಪ್ರೋತ್ಸಾಹ ನೀಡಿದ ಎಲ್ಲರಿಗೂ ಧನ್ಯವಾದ.- ಡಾ.ಸಂಗಮೇಶ ಕಲ್ಯಾಣಿ, ಮೋಡಿಲಿಪಿ ತಜ್ಞ ಮುಧೋಳ