ಅಭಯಹಸ್ತ ಉಡುಪಿಗೆ‌ ಡಾ.ಸತೀಶ್ ಶೆಟ್ಟಿ ಚಾರಿಟೇಬಲ್ ‌ಟ್ರಸ್ಟ್‌ ಪ್ರಶಸ್ತಿ

KannadaprabhaNewsNetwork |  
Published : Jun 17, 2024, 01:41 AM IST
ಅಭಯಹಸ್ತ | Kannada Prabha

ಸಾರಾಂಶ

ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಕಸ್ತೂರ್ಬಾ ಆಸ್ಪತ್ರೆ ‌ಮಣಿಪಾಲ ಆಯೋಜಿಸಿದ ರಕ್ತದಾನಿಗಳಿಗೆ ಹಾಗೂ ರಕ್ತದಾನ ಶಿಬಿರದ ಆಯೋಜಕರಿಗೆ ಗೌರವ ಪ್ರದಾನ‌‌ ಕಾರ್ಯಕ್ರಮದಲ್ಲಿ ಅತೀ‌ ಹೆಚ್ಚು ರಕ್ತದಾನ ಶಿಬಿರ ಆಯೋಜಿಸಿದಕ್ಕಾಗಿ ಅಭಯಹಸ್ತಗೆ ಪ್ರಶಸ್ತಿ ಪ್ರದಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಅಭಯಹಸ್ತ ಚಾರಿಟೇಬಲ್ ಟ್ರಸ್ಟ್‌ಗೆ ಡಾ. ಸತೀಶ್ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಪ್ರಶಸ್ತಿ ಪ್ರದಾನಿಸಲಾಯಿತು.

ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಕಸ್ತೂರ್ಬಾ ಆಸ್ಪತ್ರೆ ‌ಮಣಿಪಾಲ ಆಯೋಜಿಸಿದ ರಕ್ತದಾನಿಗಳಿಗೆ ಹಾಗೂ ರಕ್ತದಾನ ಶಿಬಿರದ ಆಯೋಜಕರಿಗೆ ಗೌರವ ಪ್ರದಾನ‌‌ ಕಾರ್ಯಕ್ರಮದಲ್ಲಿ ಅತೀ‌ ಹೆಚ್ಚು ರಕ್ತದಾನ ಶಿಬಿರ ಆಯೋಜಿಸಿದಕ್ಕಾಗಿ ಅಭಯಹಸ್ತಗೆ ಪ್ರಶಸ್ತಿ ಪ್ರದಾನಿಸಲಾಯಿತು. ಕುಂದಾಪುರ ಸಹಾಯಕ ಆಯುಕ್ತರಾದ ರಶ್ಮಿ ಎಸ್.ಆರ್‌. ಪ್ರಶಸ್ತಿ ನೀಡಿ ಗೌರಾವಿಸಿದರು.

ಈ ಸಂದರ್ಭ ಕೆಎಂಸಿ ಮಣಿಪಾಲ ಡೀನ್ ಡಾ. ಪದ್ಮರಾಜ್ ಹೆಗ್ಡೆ, ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ರಕ್ತ ಕೇಂದ್ರ ಕೆಎಂಸಿ ಮಣಿಪಾಲದ ನಿರ್ದೇಶಕ ಡಾ.ಶಮಿ ಶಾಸ್ತ್ರಿ, ಡಾ. ಗಣೇಶ್ ಮೋಹನ್ ಉಪಸ್ಥಿತರಿದ್ದರು.ಕಳೆದ 4 ವರ್ಷಗಳಿಂದ ಕರಾವಳಿ ಕರ್ನಾಟಕದ್ಯಾಂತ ದಾಖಲೆಯ ರಕ್ತದಾನ‌ ಶಿಬಿರ ಆಯೋಜನೆ ಹಾಗೂ ನಿತ್ಯ ‌ತುರ್ತು ರಕ್ತದಾನಿಗಳನ್ನು ವಿವಿಧ ಆಸ್ಪತ್ರೆಗೆ ಪೂರೈಸಿ ಸಾವಿರಾರು ಜೀವಗಳಿಗೆ ಪುನರ್ಜನ್ಮ ನೀಡಿದ ಅಭಯಹಸ್ತ ಉಡುಪಿ, ಕೇವಲ 4 ವರ್ಷದಲ್ಲಿ ದಾಖಲೆಯ 208 ರಕ್ತದಾನ ಶಿಬಿರವನ್ನು ಆಯೋಜಿಸಿ 23,000 ಯೂನಿಟ್ ರಕ್ತವನ್ನು ಸಂಗ್ರಹಿಸಿತ್ತು.

ಸಂಸ್ಥೆ ಕರ್ನಾಟಕ ರಾಜ್ಯ ಸರಕಾರದಿಂದ‌ 2021ರಲ್ಲಿ ಅತೀ ಹೆಚ್ಚು ರಕ್ತ ಸಂಗ್ರಹಕ್ಕಾಗಿ ಪ್ರಥಮ ಸ್ಥಾನ ನೀಡಿ ಬೆಂಗಳೂರಿನಲ್ಲಿ ಗೌರವ ಸನ್ಮಾನ, 2023ರಲ್ಲಿ ಉಡುಪಿ ‌ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಹತ್ತು‌ ಹಲವು ಸಂಸ್ಥೆಯಿಂದ ಗೌರವ ಸನ್ಮಾನ ಪಡೆದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಿಹರ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ, ಸಿಸಿ ಕ್ಯಾಮೆರಾ ಅಳವಡಿಸಿ
ಪ್ರೀತಿಸುವಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ಬೆನ್ನತ್ತಿದ್ದ ಮಹಿಳೆ ಈಗ ಜೈಲು ಪಾಲು