- ಧಾರವಾಡದಿಂದ ದಾವಣಗೆರೆಗೆ ಆಗಮಿಸಿದ್ದ ರೈಲಿನಲ್ಲಿ ಬೆಂಗಳೂರಿಗೆ ಪ್ರಯಾಣ
- ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ. ಶೆಟ್ಟಿ, ಬೆಂಗಾವಲು ಪೊಲೀಸರ ಜೊತೆಗೆ ಪ್ರಯಾಣ
- - - ಕನ್ನಡಪ್ರಭ ವಾರ್ತೆ, ದಾವಣಗೆರೆ ಮನೆಯಿಂದ ಹೊರಗೆ ಕಾಲಿಟ್ಟರೆ ಐಷಾರಾಮಿ ಕಾರುಗಳೇ ಮುಂದೆ ನಿಲ್ಲುವ, ತುರ್ತು ಕೆಲಸವೆಂದರೆ ಹೆಲಿಪ್ಯಾಡ್‌ನಲ್ಲಿ ಹೆಲಿಕಾಫ್ಟರ್ ಸಿದ್ಧವಾಗಿ ನಿಂತಿರುವಂಥ ಪ್ರಭಾವಿ ರಾಜಕಾರಣಿ, ಆಗರ್ಭ ಶ್ರೀಮಂತ, ಕಾಂಗ್ರೆಸ್ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸಿ, ಎಲ್ಲರ ಗಮನ ತನ್ನೆಡೆಗೆ ಸೆಳೆದಿದ್ದಾರೆ.ಕೆಲ ದಶಕಗಳಿಂದ ಈಚೆಗೆ ಮೊದಲ ಬಾರಿಗೆ ರೈಲಿನಲ್ಲಿ ಪ್ರಯಾಣಿಸುವ ಮೂಲಕ ಶಿವಶಂಕರಪ್ಪ ಸರಳತೆ ಮೆರೆದರು. ಧಾರವಾಡದಿಂದ ಮಧ್ಯಾಹ್ನ 3.35ಕ್ಕೆ ದಾವಣಗೆರೆ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ವಂದೇಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಬೆಂಗಳೂರಿಗೆ ತೆರಳಿದರು. ತಮ್ಮೊಂದಿಗೆ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ. ಶೆಟ್ಟಿ, ಬೆಂಗಾವಲು ಪೊಲೀಸರ ಜೊತೆಗೆ ಜನಸಾಮಾನ್ಯರಂತೆ ಪ್ರಯಾಣಿಸಿದ್ದು ಎಲ್ಲರ ಕುತೂಹಲಕ್ಕೂ ಕಾರಣವಾಗಿತ್ತು.
ಕೆಲ ದಶಕಗಳ ಬಳಿಕ ಶಾಮನೂರು ಶಿವಶಂಕರಪ್ಪ ಅವರು ರೈಲಿನಲ್ಲಿ ಪ್ರಯಾಣಿಸಿದ್ದು ಎಲ್ಲರಲ್ಲಿ ಅಚ್ಚರಿಗೆ ಕಾರಣವಾಗಿತ್ತು. ಅದರಲ್ಲೂ ಹೊಸ ರೂಪದ, ಶರವೇಗದ ವಂದೇಭಾರತ್ ಎಕ್ಸಪ್ರೆಸ್ ರೈಲಿನಲ್ಲಿ ಪಯಣಿಸುವ ಮೂಲಕ ವಿಶೇಷತೆ ಮೆರೆದರು. ಕೆಲ ಹೊತ್ತು ತಾವು ವ್ಯಾಪಾರಕ್ಕೆ ಹೋಗುವಾಗ, ರಾಜಕೀಯಕ್ಕೆ ಕಾಲಿಡುವ ಮುಂಚೆ ರೈಲ್ವೆ ಪ್ರಯಾಣ ಮಾಡುತ್ತಿದ್ದ ಕ್ಷಣಗಳನ್ನು ನೆನೆದರು. ಹಳೆಯ ನೆನಪುಗಳ ಪುಟವನ್ನು ಮೆಲಕು ಹಾಕುತ್ತಾ ಸಂಜೆ ಹೊತ್ತಿಗೆ ಬೆಂಗಳೂರು ತಲುಪಿದರು.
- - - -14ಕೆಡಿವಿಜಿ8, 9: