ಧಾರವಾಡ:
ಕರ್ನಾಟಕ ವಿದ್ಯಾವರ್ಧಕ ಸಂಘ ಡಾ. ಸರೋಜಿನಿ ಶಿಂತ್ರಿ ಸಂಸ್ಮರಣೆ ದತ್ತಿಯಲ್ಲಿ ಉಪನ್ಯಾಸ ನೀಡಿದ ಅವರು, ಮನೆಯೇ ಮೊದಲ ಪಾಠಶಾಲೆ ಎಂಬಂತೆ ಡಾ. ಸರೋಜಿನಿ ಶಿಂತ್ರಿಯವರ ವ್ಯಕ್ತಿತ್ವ ನಿರ್ಮಾಣವಾದದ್ದೇ ಮನೆಯಲ್ಲಿ. ತಂದೆ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದು ಮಗಳಿಗೆ ಒಳ್ಳೆಯ ಸಂಸ್ಕಾರ ನೀಡಿದರು. ಆ ಕಾಲದಲ್ಲಿ ಮಹಿಳೆ ಶಿಕ್ಷಣ ಪಡೆಯುವುದೇ ಅಪರೂಪವಾಗಿತ್ತು. ಇಂಥ ಕಾಲಘಟ್ಟದಲ್ಲಿ ಸಂಪ್ರದಾಯ ಮೀರಿ ಮಗಳಿಗೆ ಉನ್ನತ ಶಿಕ್ಷಣ ಕೊಡಿಸಿದರು. ಹೆಣ್ಣು ಮಕ್ಕಳೇ ನಮ್ಮ ಆಸ್ತಿ ಎಂದು ಬೆಳೆಸಿದರು. ಬಾಲ್ಯದಲ್ಲಿ ಡಾ. ಸರೋಜಿನಿ ಶಿಂತ್ರಿ ಆಂಗ್ಲ ಕಾದಂಬರಿಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಿದ್ದರು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಧ್ಯಾಪಕಿ ಡಾ. ಶೈಲಜಾ ಅಮರಶೆಟ್ಟಿ ಮಾತನಾಡಿದರು. ದೊಡ್ಡಬಸಪ್ಪ ಬೆಳವಗಿ, ವೀರಣ್ಣ ಒಡ್ಡೀನ, ಶಿವಾನಂದ ಭಾವಿಕಟ್ಟಿ, ಶಂಕರ ಕುಂಬಿ, ಮಂದಾಕಿನಿ ಪುರೋಹಿತ, ಸುಮಂಗಲಾ ಮುಮ್ಮಿಗಟ್ಟಿ ಇದ್ದರು.