ವಿಜಯಪುರ: ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಜಾತಿ ಮತ ಭೇದವೆಣಿಸದೆ ಸಿದ್ದಗಂಗಾ ಮಠದಲ್ಲಿ ಅಕ್ಷರ, ಆಶ್ರಯ, ಅನ್ನದಾಸೋಹ ಸೇವೆ ಜಗತ್ತಿಗೆ ಮಾದರಿ ಎಂದು ಶ್ರೀ ನಗರೇಶ್ವರ ಸ್ವಾಮಿ ಅಭಿವೃದ್ಧಿ ಟ್ರಸ್ಟ್ ಮಾಜಿ ಅಧ್ಯಕ್ಷ ಜೆಆರ್‌ಪಿ ಮುರಳೀಧರ್ ತಿಳಿಸಿದರು. ಪಟ್ಟಣದ ಗಾಂಧಿಚೌಕದಲ್ಲಿ ಅಶಿವೈ ನಗರ್ತ ಮಹಂತಿನ ಮಠ, ನಗರ್ತ ಯುವಕ ಸಂಘ, ಮಹಿಳಾ ಸಂಘ, ನಗರೇಶ್ವರ ಸೇವಾ ಸಮಿತಿ ಮತ್ತಿತರೆ ಅಂಗ ಸಂಸ್ಥೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಡಾ.ಶಿವಕುಮಾರ ಸ್ವಾಮೀಜಿಯ ೬ನೇ ಪುಣ್ಯಸ್ಮರಣೋತ್ಸವ ಹಾಗೂ ದಾಸೋಹ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಅಶಿವೈ ನಗರ್ತ ಮಹಂತಿನ ಮಠ ಧರ್ಮಸಂಸ್ಥೆ ಅಧ್ಯಕ್ಷ ಎಸ್.ಪುನೀತ್ ಕುಮಾರ್ ಮಾತನಾಡಿ, ತ್ರಿವಿಧ ದಾಸೋಹಿ, ನಡೆದಾಡುವ ದೇವರು ಎಂದೇ ಖ್ಯಾತಿ ಗಳಿಸಿದ ಡಾ. ಶಿವಕುಮಾರ್ ಸ್ವಾಮೀಜಿ ಸಮಾಜಕ್ಕೆ ಸಲ್ಲಿಸಿರುವ ಸೇವೆ ಅಪಾರ. ಅವರನ್ನು ಸದಾ ಸ್ಮರಿಸಿಕೊಂಡು ದೈವಸ್ಮರಣೆ ಮಾಡುತ್ತಿರುತ್ತೇವೆ ಎಂದು ತಿಳಿಸಿದರು.ಅಶಿವೈ ನಗರ್ತ ಮಹಂತಿನ ಮಠ ಗೌರವ ಕಾರ್ಯದರ್ಶಿ ವಿಶ್ವನಾಥ್ ಮಾತನಾಡಿ, ಭಕ್ತರ ಉಸಿರಲಿ ಉಸಿರಾಗಿ ಶಕ್ತಿ ಮತ್ತು ಚೈತನ್ಯ ತುಂಬುವ ಶಿವನ ವರಪುತ್ರ ಶ್ರೀ ಶಿವಕುಮಾರ ಮಹಾಸ್ವಾಮಿಗಳು. ಕಾಯಕ ಬದುಕಿನಲ್ಲಿ ಸದಾ ದಾರಿದೀಪವಾಗುವ ಶ್ರೀಗಳ ಮಾರ್ಗದರ್ಶನ, ಸೂರ್ಯಚಂದ್ರರಂತೆ ಸದಾ ಶಾಶ್ವತವಾಗಿ ಉಳಿಯುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರ್ತ ಯುವಕ ಸಂಘದ ಅಧ್ಯಕ್ಷ ಎ.ಮಂಜುನಾಥ್, ಮಾಜಿ ಅಧ್ಯಕ್ಷರಾದ ಸಿ.ಭಾಸ್ಕರ, ಸುರೇಶ್, ಪುರಸಭಾ ಮಾಜಿ ಸದಸ್ಯರಾದ ನವೀನ್, ಅ.ಶಿ. ವೈ. ನಗರ್ತ ಮಹಂತಿನ ಮಠ ಖಜಾಂಚಿ ಎ.ಮಧು, ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಮ.ಸುರೇಶ್ ಬಾಬು, ಮಹಂತಿನ ಮಠದ ಸದಸ್ಯರಾದ ಸಿ.ವಿಜಯರಾಜ್, ನಂಜಣ್ಣ, ಎನ್.ವಿ. ಬಸವರಾಜ್, ಪ್ರವೀಣ್, ಸುರೇಶ್ ಬಾಬು, ವಿನಯ್, ಯುವ ಮಿತ್ರ ಸುಮನ್, ನಿರಂಜನ್, ಕಾರ್ತಿಕ್, ಚಂದನ್, ತೆಂಗಿನಕಾಯಿ ಅಭಿ, ದರ್ಶನ್, ಬಿಜೆಪಿ ಮುಖಂಡ ರವಿಕುಮಾರ್ ಅರ್ಚಕರಾದ ಎಂ.ಸೋಮಶೇಖರ್ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಡಾ.ಶಿವಕುಮಾರ ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
(ಫೋಟೋ ಕ್ಯಾಪ್ಷನ್)ವಿಜಯಪುರದ ಗಾಂಧಿಚೌಕದಲ್ಲಿ, ಅಶಿವೈ ನಗರ್ತ ಮಹಂತಿನ ಮಠ, ನಗರ್ತ ಯುವಕ ಸಂಘ, ಮಹಿಳಾ ಸಂಘ, ನಗರೇಶ್ವರ ಸೇವಾ ಸಮಿತಿ ಸಹಯೋಗದಲ್ಲಿ ಡಾ.ಶಿವಕುಮಾರ ಸ್ವಾಮೀಜಿ ೬ನೇ ಪುಣ್ಯಸ್ಮರಣೋತ್ಸವ ಹಾಗೂ ದಾಸೋಹ ದಿನದ ಕಾರ್ಯಕ್ರಮ ಆಯೋಜಿಸಲಾಗಿತ್ತು.