ಪಾಲಕರು ಮಕ್ಕಳಿಗಾಗಿ ಸಮಯ ಮೀಸಲಿಡಿ: ಫಾಸ್ಟರ್ ಜೈಸನ್

KannadaprabhaNewsNetwork |  
Published : Jan 24, 2025, 12:45 AM IST
ಫೋಟೋ: 23 ಜಿಎಲ್ಡಿ4 - ಗುಳೇದಗುಡ್ಡದ ಸ್ಥಳೀಯ ರಾಠಿ ಮತ್ತು ಕಾವಡೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪಾಲಕರ ಕ್ರೀಡಾಕೂಟ ಹಾಗೂ ಶಾಲಾ ಶಿಕ್ಷಕಿಯರ ಆಹಾರ ಮೇಳ ಜರುಗಿತು. | Kannada Prabha

ಸಾರಾಂಶ

ನಿತ್ಯ ಬದುಕಿನ ಜಂಜಾಟದಲ್ಲಿ ಪಾಲಕರು ಮಕ್ಕಳಿಗಾಗಿ ಸಮಯ ಮೀಸಲಿಡುವುದು ತುಂಬಾ ಅಗತ್ಯ

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ನಿತ್ಯ ಬದುಕಿನ ಜಂಜಾಟದಲ್ಲಿ ಪಾಲಕರು ಮಕ್ಕಳಿಗಾಗಿ ಸಮಯ ಮೀಸಲಿಡುವುದು ತುಂಬಾ ಅಗತ್ಯವಾಗಿದೆ ಎಂದು ತಾಲೂಕಿನ ಆಸಂಗಿ ಮತ್ತು ಕಟಗಿನಹಳ್ಳಿ ಚರ್ಚಿನ ಫಾಸ್ಟರ್ ಜೈಸನ್ ಹೇಳಿದರು.

ಸ್ಥಳೀಯ ರಾಠಿ ಮತ್ತು ಕಾವಡೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪಾಲಕರ ಕ್ರೀಡಾಕೂಟ ಹಾಗೂ ಶಾಲಾ ಶಿಕ್ಷಕಿಯರ ಆಹಾರ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಬಿಡುವಿಲ್ಲದ ಇಂದಿನ ಜೀವನದ ತಮ್ಮ ತಮ್ಮ ಕಾರ್ಯ, ಕೆಲಸಗಳಲ್ಲಿ ತಲ್ಲೀನರಾಗಿರುವ ಪಾಲಕರಿಗೆ ಮಕ್ಕಳೊಂದಿಗೆ ಶಾಲಾ ಪರಿಸರದಲ್ಲಿ ಆಟೋಟಗಳನ್ನು ಆಡುವುದರ ಮೂಲಕ ಮನರಂಜನೆ ಪಡೆದುಕೊಳ್ಳಬಹುದಾದ ಈ ಕಾರ್ಯಕ್ರಮ ಸ್ವಾಗತಾರ್ಹವಾಗಿದೆ. ಮಕ್ಕಳಿಗಾಗಿ ಪಾಲಕರು ತಮ್ಮ ಸಮಯ ಮೀಸಲಿಡಬೇಕು ಎಂದು ತಿಳಿಸಿ, ತಮ್ಮ ಬಾಲ್ಯದ ಶಾಲಾ ಅನುಭವಗಳನ್ನು ಹಂಚಿಕೊಂಡರು. ಅಲ್ಲದೇ ಶಾಲೆಯ ಚೇರಮನ್ ಅಶೋಕ ಹೆಗಡಿಯವರು ಹಾಗೂ ಶಾಲೆಯ ಶಿಕ್ಷಕಿಯರು ನಡೆಸಿಕೊಡುತ್ತಿರುವ ಆಹಾರ ಮೇಳದಲ್ಲಿ ಆಹಾರ ಶುಚಿ ಹಾಗೂ ರುಚಿಯಿಂದ ಕೂಡಿದೆ. ಪಾಲಕರು ಆಟಗಳಲ್ಲಿ ಭಾಗವಹಿಸಿ ಈ ಕಾರ್ಯಕ್ರಮ ತಮಗೂ ತಮ್ಮ ಮಕ್ಕಳಿಗೂ ಮನರಂಜನಾತ್ಮಕ ಕಾರ್ಯಕ್ರಮವಾಗಿರಲಿ ಎಂದರು.

ಆಟಗಳಲ್ಲಿ ಹಲವಾರು ಪಾಲಕರು ಸ್ವಇಚ್ಛೆಯಿಂದ ಉತ್ಸುಕರಾಗಿ ಭಾಗವಹಿಸಿದ್ದರು. ಗೆದ್ದವರಿಗೆ ಕೊನೆಯಲ್ಲಿ ಬಹುಮಾನಗಳನ್ನು ನೀಡಲಾಯಿತು. ಸಂಸ್ಥೆಯ ಸದಸ್ಯ ಆರ್.ಆರ್. ರಾಠಿ, ವಿಠಲಸಾ ಕಾವಡೆ, ಶ್ಯಾಮಸುಂದರ ಮಾಲಪಾಣಿ, ಶಾಲೆಯ ಮುಖ್ಯ ಗುರುಮಾತೆಯರಾಜ ಜೆ.ಜೆ.ಲೋಬೋ, ವೀಣಾ ಹಳ್ಳೂರ, ದೈಹಿಕ ಶಿಕ್ಷಕ ಎ.ಜಿ.ಕವಡಿಮಟ್ಟಿ, ಶಿಕ್ಷಕರಾದ ವಿ.ವಾಯ್.ವಗ್ನರ, ಜೆ.ಎನ್.ಸಮಗಂಡಿ ಮತ್ತು ಸಿ. ಎ. ಪರಗಿ ಭಾಗವಹಿಸಿದ್ದರು. ಎಸ್. ಬಿ. ಗಾಜಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''