ಸರ್ಕಾರಿ ವಸತಿ ಶಾಲೆ ಮಕ್ಕಳಿಂದ ಅಪೂರ್ವ ಸಾಧನೆಃ ಡಾ.ಟಿ.ಎಂ.ದೇವರಾಜ್

KannadaprabhaNewsNetwork |  
Published : Jun 20, 2025, 12:34 AM IST
ವಾಕಿಂಗ್ ಕ್ಲಬ್ ವತಿಯಿಂದ ಟಿ.ಬಿ.ಕಾರ್ತಿಕ್ ಅವರಿಗೆ ಸನ್ಮಾನ | Kannada Prabha

ಸಾರಾಂಶ

ತರೀಕೆರೆ: ಸರ್ಕಾರಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ಮಕ್ಕಳಿಂದ ಅಪೂರ್ವ ಸಾಧನೆಯಾಗಿದೆ ಎಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಟಿ.ಎಂ.ದೇವರಾಜ್ ಹೇಳಿದ್ದಾರೆ.

ವಾಕಿಂಗ್ ಕ್ಲಬ್ ನಿಂದ ಟಿ.ಬಿ.ಕಾರ್ತಿಕ್ ಅವರಿಗೆ ಸನ್ಮಾನ

ತರೀಕೆರೆ: ಸರ್ಕಾರಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ಮಕ್ಕಳಿಂದ ಅಪೂರ್ವ ಸಾಧನೆಯಾಗಿದೆ ಎಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಟಿ.ಎಂ.ದೇವರಾಜ್ ಹೇಳಿದ್ದಾರೆ.

ವಾಕಿಂಗ್ ಕ್ಲಬ್ನಿಂದ ಪಟ್ಟಣದ ಟಿ.ಬಿ.ಕಾರ್ತಿಕ್ ಅವರಿಗೆ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಇತ್ತೀಜಿನ ದಿನಗಳಲ್ಲಿ ನವೋದಯ ಮತ್ತು ಮೊರಾರ್ಜಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ಮಕ್ಕಳು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪರೀಕ್ಷೆಗಳಲ್ಲಿ ವಿಶೇಷವಾದ ಸಾಧನೆ ಮಾಡಿ. ಸರ್ಕಾರಿ ಶಾಲೆ ಮಕ್ಕಳಿಗೆ ಸೌಲಭ್ಯ ನೀಡಿದರೆ ಅಪೂರ್ವ ಸಾಧನೆ ಮಾಡುತ್ತೇವೆ ಎಂದು ತೋರಿಸಿದ್ದಾರೆ. ಈ ನಿಟ್ಟಿನಲ್ಲಿ ಟಿ.ಬಿ.ಕಾರ್ತಿಕ್ ಸರ್ಕಾರಿ ಸೌಲಭ್ಯ ಉಪಯೋಗಿಸಿಕೊಂಡು ರಾಷ್ಟ್ರ ಮಟ್ಟದ ಮಿಲಿಟರಿ ಅಕಾಡೆಮಿ ಪರೀಕ್ಷೆಯಲ್ಲಿ 44ನೇ ರ್‍ಯಾಂಕ್ ಪಡೆದು ತರೀಕೆರೆಗೂ ಮತ್ತು ವಸತಿ ಶಾಲೆಗೂ ಕೀರ್ತಿ ತಂದಿದ್ದಾರೆ, ಇದೇ ರೀತಿ ಬೇರೆ ಮಕ್ಕಳೂ ಕೂಡ ಉತ್ತಮವಾಗಿ ವಿದ್ಯಾಭ್ಯಾಸ ಮಾಡಿ ಈ ರೀತಿಯ ಅವಕಾಶಗಳನ್ನು ಟಿ.ಬಿ.ಕಾರ್ತಿಕ್ ತೋರಿಸಿಕೊಟ್ಟಿದ್ದಾರೆ ಎಂದು ಅವರು ತಿಳಿಸಿ ಕಾರ್ತಿಕ್ ಅವರಿಗೆ ಶುಭಾಷಯ ಕೋರಿದರು.

ಪುರಸಭಾ ಮಾಜಿ ಅಧ್ಯಕ್ಷ ಟಿ.ಎಸ್.ಧರ್ಮರಾಜ್ ಅವರು ಮಾತನಾಡಿ ಟಿ.ಬಿ.ಕಾರ್ತಿಕ್ ಯು.ಪಿ.ಎಸ್.ಸಿ. ಪರೀಕ್ಷೆಯಲ್ಲಿ 44ನೇ ರಾಂಕ್ ಪಡೆದು ಇತಿಹಾಸ ನಿರ್ಮಿಸಿ ತರೀಕೆರೆಗೆ ಕೀರ್ತಿ ತಂದಿದ್ದಾರೆ. ಟಿ.ಬಿ.ಕಾರ್ತಿಕ್ ತರೀಕೆರೆ ಯುವಕರಾಗಿ ಭವಿಷ್ಯದಲ್ಲಿ ಭಾರತದ ಅತ್ಯುನ್ನತ ಹುದ್ದೆ ಪಡೆದು ರಾಷ್ಟ್ರಕ್ಕೆ ಕೀರ್ತಿ ತರಲಿ ಎಂದು ಶುಭ ಹಾರೈಸಿದರು.

ಪುರಸಭೆ ಸದಸ್ಯ ಟಿ.ಜಿ.ಲೋಕೇಶ್ ಮಾತನಾಡಿ ಟಿ.ಬಿ.ಕಾರ್ತಿಕ್ ಅವರಿಗೆ ಶುಭ ಹಾರೈಸಿದರು. ಸಾಧನೆ ಶಿಖರವನ್ನೇರುತ್ತಿರುವ ಪಟ್ಟಣದ ಟಿ. ಬಿ.ಕಾರ್ತಿಕ್ ಗೆ ವಾಕಿಂಗ್ ಕ್ಲಬ್ ನಿಂದ ಶಾಲು ಹಾರ ಧನಸಹಾಯದೊಂದಿಗೆ ಸನ್ಮಾನಿಸಲಾಯಿತು.

ಟಿ.ಬಿ.ಕಾರ್ತಿಕ್ ಅವರ ಮುಂದಿನ ಹಂತಗಳು ಯಶಸ್ವಿಯಾಗಿ ಪೂರೈಸಲಿ ಎಂದು ವಾಕಿಂಗ್ ಕ್ಲಬ್ ನ ಎಲ್ಲಾ ಸದಸ್ಯರು ಶುಭ ಹಾರೈಸಿದರು. ಪುರಸಭಾ ಮಾಜಿ ಅಧ್ಯಕ್ಷರಾದ ಬಿ.ಕೆ. ಚಂದ್ರಶೇಖರ್ ಬಿ.ರಾಜಪ್ಪ, ಲೇಖಕ ತ.ಮ.ದೇವಾನಂದ, ಗಂಗಾಧರ್.ಧ್ರುವ ಕುಮಾರ್. ಚನ್ನಕೇಶವ. ಮೌನೇಶ ಅಚಾರ್ ಮತ್ತು ಸ್ನೇಹಿತರು ಕ್ರಿಕೆಟ್ ಕ್ಲಬ್ ನ ಸದಸ್ಯರು ಉಪಸ್ಥಿತರಿದ್ದರು.

18ಕೆಟಿಆರ್.ಕೆ.1ಃ

ತರೀಕೆರೆಯಲ್ಲಿ ವಾಕಿಂಗ್ ಕ್ಲಬ್ ವತಿಯಿಂದ ಟಿ.ಬಿ.ಕಾರ್ತಿಕ್ ಅವರನ್ನು ಸನ್ಮಾನಿಸಲಾಯಿತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ