ಹಿಂದೆಲ್ಲಾ ಗ್ರಾಮೀಣ ಭಾಗದ ಪ್ರತಿ ಹಳ್ಳಿಗಳಲ್ಲೂ ಪಕ್ಷಭೇದ ಮರೆತು ಎಲ್ಲರೂ ಸೇರಿ ತಿಂಗಳಾನುಗಟ್ಟಲೆ ಅಭ್ಯಾಸ ಮಾಡಿ ನಾಟಕ ಪ್ರದರ್ಶಿಸುತ್ತಿದ್ದರು. ಆದರೆ ಇಂದು ನಾಟಕದ ಪ್ರಾತಧಾರಿಗಳನ್ನೆ ಹುಡುಕುವಷ್ಟರ ಮಟ್ಟಿಗೆ ನಾಟಕ ಕಲೆ ತನ್ನ ಆಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ ಎಂದು ಆತಂಕ ವ್ಯಕ್ತ ಪಡಿಸಿದರು.
ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ಪೌರಾಣಿಕ ನಾಟಕಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿದ್ದು, ಜಾನಪದ ಕಲೆಗಳಂತೆ ನಾಟಕ ಕಲೆಯನ್ನು ನಾವೆಲ್ಲರೂ ನಮ್ಮ ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಕೆಲಸ ಮಾಡಬೇಕಿದೆ ಎಂದು ಶಾಸಕ ಸಿ.ಪಿ. ಯೋಗೇಶ್ವರ್ ಅಭಿಪ್ರಾಯಪಟ್ಟರು.ನಗರದ ಶತಮಾನೋತ್ಸವ ಭವನದಲ್ಲಿ ಮಹದೇಶ್ವರ ಕೃಪಾ ಪೋಷಿತ ನಾಟಕ ಮಂಡಳಿ ತಾಪಂ ಮಾಜಿ ಸದಸ್ಯ ದಿವಗಂತ ಶಿವಲಿಂಗಯ್ಯ(ಕುಳ್ಳಪ್ಪ) ಸ್ಮರಣಾರ್ಥ ಆಯೋಜಿಸಿದ್ದ ಶ್ರೀ ಕೃಷ್ಣ ಸಂಧಾನ ಅಥವಾ ಕುರುಕ್ಷೇತ್ರ ಎಂಬ ಪೌರಾಣಿಕ ನಾಟಕದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಹಿಂದೆಲ್ಲಾ ಗ್ರಾಮೀಣ ಭಾಗದ ಪ್ರತಿ ಹಳ್ಳಿಗಳಲ್ಲೂ ಪಕ್ಷಭೇದ ಮರೆತು ಎಲ್ಲರೂ ಸೇರಿ ತಿಂಗಳಾನುಗಟ್ಟಲೆ ಅಭ್ಯಾಸ ಮಾಡಿ ನಾಟಕ ಪ್ರದರ್ಶಿಸುತ್ತಿದ್ದರು. ಆದರೆ ಇಂದು ನಾಟಕದ ಪ್ರಾತಧಾರಿಗಳನ್ನೆ ಹುಡುಕುವಷ್ಟರ ಮಟ್ಟಿಗೆ ನಾಟಕ ಕಲೆ ತನ್ನ ಆಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ ಎಂದು ಆತಂಕ ವ್ಯಕ್ತ ಪಡಿಸಿದರು.ರಾತ್ರಿಯಿಂದ ಬೆಳಗಿನ ಜಾವದ ತನಕ ಮನೆ ಮಂದಿಯೆಲ್ಲಾ ಕುಳಿತು ನಾಟಕ ನೋಡುತ್ತಿದ್ದ ದಿನಗಳು ದೂರಾಗಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ನಾಟಕ ನೋಡುವಂತಹ ಚಿತ್ರಣವನ್ನು ನಾವೂ ಕಾಣುತ್ತಿದ್ದೇವೆ. ಇದು ನಾಟಕ ಕಲೆಯ ನಶಿಸುವಿಕೆಗೆ ಕಾರಣವಾಗಲಿದ್ದು, ಈ ಬಗ್ಗೆ ನಾವೆಲ್ಲರೂ ಎಚ್ಚೆತ್ತು ನಾಟಕ ಕಲೆ ಉಳಿಸುವತ್ತ ಗಮನಹರಿಸಬೇಕು ಎಂದರು.
ಬಮೂಲ್ ನಿರ್ದೇಶಕ ಲಿಂಗೇಶ್ ಕುಮಾರ್ ಮಾತನಾಡಿ, ಸರಳ ಸಜ್ಜನಿಕೆಯ ಶಿವಲಿಂಗಯ್ಯರವರ ಸ್ಮರಣಾರ್ಥ ನಡೆಯುತ್ತಿರುವ ಈ ಪೌರಾಣಿಕ ನಾಟಕದಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ತೊಡಗಿಸಿಕೊಂಡಿರುವ ಎಲ್ಲರಿಗೂ ಶುಭವಾಗಲೆಂದು ಹಾರೈಸಿದರು.
ಕಳೆದ 25 ವರ್ಷಗಳಿಂದಲೂ ನಾಟಕ ಕಲೆಯನ್ನು ಮೈಗೂಡಿಸಿಕೊಂಡು ರಂಗ ನಿರ್ದೇಶಕರಾಗಿ ತೊಡಗಿಸಿಕೊಂಡಿರುವ ಎಂ.ಕೆ.ಧರ್ಮೇಂದ್ರ ಕುಮಾರ್ ಅವರಿಗೆ ರಾಜ್ಯ ಸರ್ಕಾರದಿಂದ ಪ್ರಶಸ್ತಿ ನೀಡುವಂತೆ ಕಲಾವಿದರು ಮಾಡಿದ ಮನವಿಗೆ ಸ್ಪಂದಿಸಿದ ಶಾಸಕರು ಈ ಬಗ್ಗೆ ಸರಕಾರಕ್ಕೆ ಪತ್ರ ಬರೆಯುವ ಮುಖೇನ ಅವರ ಸೇವೆಯನ್ನು ಗೌರವಿಸುವ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ನಾಟಕ ಕಾರ್ಯಕ್ರಮಕ್ಕೆ ಸಹಕಾರವಿತ್ತ ಸಮಾಜ ಸೇವಕರ ನುಣ್ಣೂರು ಬಲರಾಮ್, ಒಕ್ಕಲಿಗರ ಸಂಘದ ನಿರ್ದೇಶಕ ಚಕ್ಕೆರೆ ವೆಂಕಟರಾಮೇಗೌಡ, ನಗರಸಭೆ ಅಧ್ಯಕ್ಷ ವಾಸಿಲ್, ಯಶಸ್‌ಗೌಡ, ಬೋರ್‌ವೆಲ್ ರಂಗನಾಥ್, ಸುನೀಲ್, ಮಾಕಳಿ ಬೋರೇಗೌಡ, ಚಂದ್ರು ಸೇರಿದಂತೆ ಹಲವರನ್ನು ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ವ್ಯವಸ್ಥಾಪಕರಾದ ಚಕ್ಕೆರೆ ರಾಮು, ಬ್ರಹ್ಮಣೀಪುರ ಪ್ರಸನ್ನ, ಕೃಷ್ಣಾಪುರ ಶಿವರಾಮ್ (ಕೆಂಪ), ಮಳೂರು ಪಟ್ಟಣ ಕುಮಾರ್, ಮಳೂರು ರಾಜೇಶ್, ಚಿನ್ನಗಿರಿಗೌಡ, ಗುತ್ತಿಗೆದಾರರಾದ ಶ್ಯಾನುಭೋಗನಹಳ್ಳಿ ಪ್ರದೀಪ್, ಎಂಪಿಸಿಎಸ್ ನೌಕರರ ಸಂಘದ ಅಧ್ಯಕ್ಷ ಗರಕಹಳ್ಳಿ ಶಿವಕುಮಾರ್, ಸಾದರಹಳ್ಳಿ ಶಿವರಾಜ್ ಸೇರಿದಂತೆ ಹಲವರು ಹಾಜರಿದ್ದರು.
ಪೋಟೊ೩೦ಸಿಪಿಟಿ೧: ನಗರದ ಶತಮಾನೋತ್ಸವ ಭವನದಲ್ಲಿ ಜರುಗಿದ ಪೌರಾಣಿಕ ನಾಟಕದಲ್ಲಿ ಶಾಸಕರನ್ನು ಸನ್ಮಾನಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.