ಕನ್ನಡಪ್ರಭ ವಾರ್ತೆ, ಹನೂರು
ಚಿರತೆ ಮರಿಗಳು ಪ್ರತ್ಯಕ್ಷವಾಗಿದೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ತಕ್ಷಣ ಹನೂರು ಬಫರ್ ವಲಯದ ನಾಗರಾಜು ಮತ್ತು ತಂಡದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಎರಡು ಚಿರತೆ ಮರಿಗಳನ್ನು ಸುರಕ್ಷಿತವಾಗಿ ಪಡೆದು ಹಿರಿಯ ಅಧಿಕಾರಿಗಳ ಮಾರ್ಗದರ್ಶನದ ಮೇರೆಗೆ ಕ್ರಮವಹಿಸುತ್ತೇವೆ ಎಂದು ತಿಳಿಸಿದ್ದಾರೆ.
ಚಿರತೆ ಸೆರೆ ಹಿಡಿಯಲು ಆಗ್ರಹ :ಮರಿ ಚಿರತೆ ಜೊತೆಗೆ ತಾಯಿ ಸಹ ಇದೆ ಎಂದು ಪ್ರತ್ಯಕ್ಷ ವಾಗಿ ಕಬ್ಬು ಕಟಾವು ಮಾಡಿರುವ ಕಾರ್ಮಿಕರು ಹೇಳಿದ್ದು ತಕ್ಷಣ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆಯ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹ ಮಾಡಿದ್ದಾರೆ.
ಗುಂಡಾಪುರ, ಬಸಪ್ಪನ ದೊಡ್ಡಿ, ಗಂಗನ ದೊಡ್ಡಿ ಈ ಭಾಗದಲ್ಲಿ ಈ ಹಿಂದೆಯೇ ಚಿರತೆ ಹಾವಳಿ ಹೆಚ್ಚಾಗಿದ್ದು ಕುರಿ ಮೇಕೆ ಹಾಗೂ ನಾಯಿ ಸೇರಿದಂತೆ ಸಾಕುಪ್ರಾಣಿಗಳನ್ನ ಬಲಿ ಪಡೆದು ಸಾಕಷ್ಟು ಸಾವು ನೋವುಗಳನ್ನ ಉಂಟು ಮಾಡಿದ್ದ ನಿದರ್ಶನವು ಇತ್ತು. ಇದಕ್ಕನುಗುಣವಾಗಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಒತ್ತಾಯಪೂರ್ವಕವಾಗಿ ಚಿರತೆಸರ ಹಿಡಿಯಲು ಬೋನು ಸಹ ಅಳವಡಿಸಲಾಗಿತ್ತು. ಆದರೆ ಚಿರತೆ ಬಲೆಗೆ ಬಿದ್ದಿರಲಿಲ್ಲ. ಇದೀಗ ಮತ್ತೆ ಚಿರತೆ ಮರಿಗಳು ಪ್ರತ್ಯಕ್ಷವಾಗಿರುವುದು ಆ ಭಾಗದ ಜನರನ್ನು ಮತ್ತಷ್ಟು ಆತಂಕ ಕಿಡು ಮಾಡಿದೆ.