ಸಮಾಜ ಪರಿವರ್ತನೆ ನಾಟಕಗಳು ಅಗತ್ಯ

KannadaprabhaNewsNetwork |  
Published : Feb 11, 2025, 12:47 AM IST
ಕ್ಯಾಪ್ಷನ9ಕೆಡಿವಿಜಿ37 ದಾವಣಗೆರೆ ಸಮೀಪದ ಕೊಂಡಜ್ಜಿಯಲ್ಲಿ ವೃತ್ತಿ ರಂಗನಾಟಕ ರಚನಾ ಶಿಬಿರವನ್ನು ಡಾ.ಕೆ.ವೈ. ನಾರಾಯಣ ಸ್ವಾಮಿ ಉದ್ಘಾಟಿಸಿದರು. | Kannada Prabha

ಸಾರಾಂಶ

ನಾಟಕ ರಚನೆಗೆ ಸಾಮಾಜಿಕ ಪ್ರಬುದ್ಧತೆ ಹಾಗೂ ಪಾರದರ್ಶಕ ವಿಚಾರಗಳನ್ನು ಹೊತ್ತು ಒಬ್ಬರಿಂದ ಇನ್ನೊಬ್ಬರಿಗೆ ದಾಟಿಸುವಂತಿರಬೇಕು. ಆಗ ಮಾತ್ರ ಉತ್ತಮ ನಾಟಕಗಳು ರಚನೆಯಾಗುತ್ತವೆ ಎಂದು ನಾಟಕಕಾರ, ವಿಮರ್ಶಕ ಡಾ. ಕೆ.ವೈ. ನಾರಾಯಣ ಸ್ವಾಮಿ ಹೇಳಿದರು.

- ವೃತ್ತಿ ರಂಗನಾಟಕ ರಚನಾ ಶಿಬಿರದಲ್ಲಿ ರಂಗಕರ್ಮಿ ಡಾ.ನಾರಾಯಣ ಸ್ವಾಮಿ- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ನಾಟಕ ರಚನೆಗೆ ಸಾಮಾಜಿಕ ಪ್ರಬುದ್ಧತೆ ಹಾಗೂ ಪಾರದರ್ಶಕ ವಿಚಾರಗಳನ್ನು ಹೊತ್ತು ಒಬ್ಬರಿಂದ ಇನ್ನೊಬ್ಬರಿಗೆ ದಾಟಿಸುವಂತಿರಬೇಕು. ಆಗ ಮಾತ್ರ ಉತ್ತಮ ನಾಟಕಗಳು ರಚನೆಯಾಗುತ್ತವೆ ಎಂದು ನಾಟಕಕಾರ, ವಿಮರ್ಶಕ ಡಾ. ಕೆ.ವೈ. ನಾರಾಯಣ ಸ್ವಾಮಿ ಹೇಳಿದರು.

ದಾವಣಗೆರೆ ಸಮೀಪದ ಕೊಂಡಜ್ಜಿಯ ಸ್ಕೌಟ್ ಕ್ಯಾಂಪಿನಲ್ಲಿ ಭಾನುವಾರ ದಾವಣಗೆರೆ ವೃತ್ತಿ ರಂಗಾಯಣ, ಬೆಂಗಳೂರಿನ ಕರ್ನಾಟಕ ನಾಟಕ ಅಕಾಡೆಮಿ ಸಹಯೋಗದಲ್ಲಿ ನಡೆದ ವೃತ್ತಿ ರಂಗನಾಟಕ ರಚನಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾಟಕಗಳನ್ನು ರಚಿಸುವಾಗ ಸರಿಯಾದ ವಿಷಯ ವಸ್ತುಗಳು ಮೊದಲು ಬರಹಗಾರನಿಗೆ ಅರ್ಥವಾಗಬೇಕು. ಆ ನಂತರ ನೋಡುಗರಿಗೆ ಅರ್ಥೈಸಬೇಕು ಇದು ನಿರಂತರ ಓದು ಬರಹ ಹಾಗೂ ಉತ್ತಮ ನಾಟಕಗಳನ್ನು ನೋಡುವುದರಿಂದ ಸಾಧ್ಯವಾಗುತ್ತದೆ ಎಂದರು.ಶಿಬಿರದ ನಿರ್ದೇಶಕ ಬಸವರಾಜ ಪಂಚಗಲ್ ಮಾತನಾಡಿ, ಒಂದು ನಾಟಕವು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವುದರ ಜೊತೆಗೆ ಸಮಾಜಕ್ಕೆ ಪರಿವರ್ತನೆಯ ಸಂದೇಶವನ್ನು ರವಾನಿಸುವಂತಿರಬೇಕು. ಹಾಗೆ ಹಿಂದಿನ ತಲೆಮಾರಿನವರು ತಮಗಾಗುತ್ತಿದ್ದ ಅಪಮಾನ, ನೋವು, ನಲಿವು ಹಾಗೂ ನ್ಯೂನ್ಯತೆಗಳನ್ನು ನಾಟಕದ ರೂಪದಲ್ಲಿ ಅಭಿವ್ಯಕ್ತ ಪಡಿಸುತ್ತಿದ್ದರು. ಆದರೆ ಇಂದಿನ ಯುವ ಜನತೆಗೆ ನಾಟಕಗಳ ರಚನೆ ಹಾಗೂ ಅಭಿರುಚಿಯನ್ನು ಅಗತ್ಯವಾಗಿ ಬೆಳೆಸಬೇಕಿದೆ ಎಂದರು. ದಾವಣಗೆರೆ ವೃತ್ತಿ ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ರಂಗಭೂಮಿಯ ಚಿಂತನೆಗಳನ್ನು ಒಟ್ಟಾರೆಯಾಗಿ ಮರುರೂಪಿಸಬೇಕಾಗಿದೆ. ಇದಕ್ಕೆ ಪೂರಕವಾಗಿ ರಂಗಭೂಮಿ ವಿದ್ವಾಂಸರು ಕೈಗೂಡಿಸಿ ವೃತ್ತಿ ರಂಗಭೂಮಿಯನ್ನು ಹೊಸ ದಿಕ್ಕಿನತ್ತ ನಡೆಸಬೇಕಿದೆ. ಅದಕ್ಕೆ ದಾವಣಗೆರೆಯ ವೃತ್ತಿ ರಂಗಾಯಣ ಪೂರಕ ವಾತಾವರಣವನ್ನು ಸೃಷ್ಟಿಸುತ್ತಿದೆ. ಆ ದಿಕ್ಕಿನಲ್ಲಿ ಇಂದಿನ ವೃತ್ತಿ ರಂಗ ನಾಟಕ ರಚನಾ ಶಿಬಿರ ವಿನೂತನ ಪ್ರಯತ್ನ ಮಾಡುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ನಾಟಕಾರ ಡಾ.ಕೆ.ಶಿವನಗೌಡ ಹಾಗೂ ಶಿಬಿರಾರ್ಥಿಗಳು ಭಾಗವಹಿಸಿದ್ದರು.

- - - -9ಕೆಡಿವಿಜಿ37.ಜೆಪಿಜಿ:

ದಾವಣಗೆರೆ ಸಮೀಪದ ಕೊಂಡಜ್ಜಿಯಲ್ಲಿ ವೃತ್ತಿ ರಂಗನಾಟಕ ರಚನಾ ಶಿಬಿರವನ್ನು ಡಾ.ಕೆ.ವೈ. ನಾರಾಯಣ ಸ್ವಾಮಿ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ವಕೀಲರಿಗೆ ಮಾಹಿತಿ ನೀಡದಿದ್ರೆ ಕ್ರಮ : ಹೈ!
ಉತ್ತರ ಕರ್ನಾಟಕಕ್ಕೆ ₹15,000 ಕೋಟಿ : ಅಜಯ್‌