ಹಗರಿಬೊಮ್ಮನಹಳ್ಳಿ: ಗ್ರಾಮೀಣ ಭಾಗದಲ್ಲಿ ರಂಗ ಚಳವಳಿಯ ರೂಪವಾದ ನಾಟಕಗಳು ನಿರಂತರವಾಗಿ ಪ್ರದರ್ಶಿತಗೊಳ್ಳುತ್ತಿವೆ. ಗ್ರಾಮೀಣ ಜನರನ್ನು ಎಚ್ಚರದ ಸ್ಥಿತಿಯಲ್ಲಿಡಲು ನಾಟಕಗಳು ಪೂರಕವಾಗಿವೆ ಎಂದು ನಿವೃತ್ತ ಮುಖ್ಯೋಪಾಧ್ಯಾಯ ವಿ.ಬಿ. ಮಲ್ಲೇಶಪ್ಪ ಅಭಿಪ್ರಾಯಪಟ್ಟರು.
ಗ್ರಾಮೀಣ ಸೊಗಡುಗಳಾದ ಜನಪದ ನೃತ್ಯ ರೂಪಕಗಳು ಮತ್ತು ನಾಟಕಗಳು ಇಂದಿಗೂ ಹಳ್ಳಿಗಳ ಜೀವಾಳವಾಗಿವೆ. ನಗರ ಪ್ರದೇಶಗಳಿಂದ ವಿಮುಖವಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು. ಗ್ರಾಮದಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪರಿಷತ್ತು ಹಮ್ಮಿಕೊಂಡಿರುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂದು ಆಶಿಸಿದರು.
ಪರಿಷತ್ತಿನ ಅಧ್ಯಕ್ಷ ಗೂಳಪ್ಪ ಹುಲಿಮನಿ ಮಾತನಾಡಿ, ಜನರಲ್ಲಿ ಸಾಂಸ್ಕ್ರತಿಕ ಶ್ರೀಮಂತಿಕೆ ಬೆಳೆಸುವ ಅಗತ್ಯವಿದೆ. ಕಲಾವಿದರನ್ನು ಪೋಷಿಸುವ ಔದಾರ್ಯವನ್ನು ಮುಂದಿನ ಪೀಳಿಗೆಗೆ ವಿಸ್ತರಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.ದತ್ತಿ ದಾನಿಗಳಾದ ಇಟಗಿ ಕಲ್ಲೇಶಪ್ಪ, ತಂಬ್ರಹಳ್ಳಿಯ ರಾಮನಮಲಿ, ಜಿ. ಮಂಜುನಾಥ, ಪೆಂಡಕೂರು ಗಿರೀಶ, ಉಲವತ್ತಿಯ ಆಲೂರು ವೀರಭದ್ರಪ್ಪ ಮತ್ತು ಹಡಗಲಿಯ ಶಾನುಭೋಗರ ಜಗದೀಶ ಅವರು ದತ್ತಿ ದಾನ ಒದಗಿಸಿದ್ದರು.
ಪರಿಷತ್ತಿನ ಪದಾಧಿಕಾರಿಗಳಾದ ಎಸ್.ವಿ. ಪಾಟೀಲ್, ಮಾರುತಿ ಮತ್ತು ಪ್ರಹ್ಲಾದ್ ಕಾರ್ಯಕ್ರಮ ನಿರ್ವಹಿಸಿದರು.