ಸಾಹಿತ್ಯ ಪ್ರಕಾರಗಳಲ್ಲಿ ನಾಟಕಗಳೇ ಆಕರ್ಷಣೀಯ

KannadaprabhaNewsNetwork |  
Published : May 30, 2026, 02:00 AM IST
ಕನಕದಾಸ ಶಿಕ್ಷಣ ಸಮಿತಿಯಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ರಂಗಭೂಮಿ ನಡೆದು ಬಂದ ದಾರಿ ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಲಾಯಿತು. | Kannada Prabha

ಸಾರಾಂಶ

ರಂಗಭೂಮಿಗೆ ಸುದೀರ್ಘ ಇತಿಹಾಸವಿದೆ. ಎಲ್ಲ ಸಾಹಿತ್ಯ ಪ್ರಕಾರಗಳಲ್ಲಿ ನಾಟಕಗಳೇ ರಮ್ಯ ಹಾಗೂ ಆಕರ್ಷಣೀಯ ಎಂದು ಕಾಳಿದಾಸರು ಹೇಳಿದ್ದಾರೆ. ಪ್ರಾರಂಭದಲ್ಲಿ ಜಾನಪದ ರಂಗಭೂಮಿ ಉದಯವಾದ ನಂತರ ವೃತ್ತಿ ರಂಗಭೂಮಿ ಅಸ್ತಿತ್ವಕ್ಕೆ ಬಂದಿತು.

ಧಾರವಾಡ:

ರಂಗಭೂಮಿಗೆ ಜಾನಪದವೇ ಮೂಲ ಎಂದು ಹುಬ್ಬಳ್ಳಿ ಜೀವಿ ಕಲಾ ಬಳಗದ ಅಧ್ಯಕ್ಷ ಗದಿಗೆಯ್ಯ ಹಿರೇಮಠ ಹೇಳಿದರು.

ವಿದ್ಯಾನಗರದ ಕನಕದಾಸ ಶಿಕ್ಷಣ ಸಮಿತಿಯಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ರಂಗಭೂಮಿ ನಡೆದುಬಂದ ದಾರಿ ಕುರಿತು ಉಪನ್ಯಾಸ ನೀಡಿದ ಅವರು, ರಂಗಭೂಮಿಗೆ ಸುದೀರ್ಘ ಇತಿಹಾಸವಿದೆ. ಎಲ್ಲ ಸಾಹಿತ್ಯ ಪ್ರಕಾರಗಳಲ್ಲಿ ನಾಟಕಗಳೇ ರಮ್ಯ ಹಾಗೂ ಆಕರ್ಷಣೀಯ ಎಂದು ಕಾಳಿದಾಸರು ಹೇಳಿದ್ದಾರೆ. ಪ್ರಾರಂಭದಲ್ಲಿ ಜಾನಪದ ರಂಗಭೂಮಿ ಉದಯವಾದ ನಂತರ ವೃತ್ತಿ ರಂಗಭೂಮಿ ಅಸ್ತಿತ್ವಕ್ಕೆ ಬಂದಿತು. ವೃತ್ತಿ ರಂಗಭೂಮಿ ಕಲಾವಿದರಿಗೆ ಬದುಕು ಕಟ್ಟಿಕೊಳ್ಳಲು ಸಹಾಯವಾದರೆ, ಹವ್ಯಾಸಿ ರಂಗಭೂಮಿ ಸಮಾಜದ ಅಂಕು-ಡೊಂಕು ತಿದ್ದಲು ಪ್ರಮುಖ ಪಾತ್ರ ವಹಿಸಿದವು ಎಂದರು.

ನಂತರ ಬಂದ ಬೀದಿ ನಾಟಕಗಳು ಜನರೆಡೆಗೆ ಹೋಗಿ ಕಲಾ ಪ್ರದರ್ಶನ ಮಾಡಿ ಜನಜಾಗೃತಿ ಮೂಡಿಸಿ ಸರ್ಕಾರದ ಯೋಜನೆ ಜನ-ಮನ ತಲುಪುವಂತೆ ಮಾಡಿದವು. ರಂಗಭೂಮಿ ದೇಶದ ಸ್ವಾತಂತ್ರ್ಯ ಹೋರಾಟದಲ್ಲೂ ಪ್ರಮುಖ ಪಾತ್ರ ವಹಿಸಿತ್ತು. ನಾಟಕಗಳು ಕೇವಲ ಮನರಂಜನೆ ಮಾಧ್ಯಮವಲ್ಲ ಸಮಾಜಕ್ಕೆ ಒಳ್ಳೆ ಮಾರ್ಗದರ್ಶನ ಸಂದೇಶ ನೀಡುವುದಾಗಿದೆ ಎಂದು ಹೇಳಿದರು.

ಪ್ರಾಚಾರ್ಯ ಪ್ರೊ. ಸಂದೀಪ ಬೂದಿಹಾಳ ಮಾತನಾಡಿ, ಕವಿವ ಸಂಘ ಈ ನಾಡಿನ ಕಲೆ, ಸಾಹಿತ್ಯ, ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಿಸಲು ನಿರಂತರವಾಗಿ ಶ್ರಮಿಸುತ್ತಾ ಬಂದಿದೆ. ಕವಿವ ಸಂಘ ಧಾರವಾಡಕ್ಕೆ ಸೀಮಿತವಾಗದೆ ಶಾಲೆ, ಕಾಲೇಜುಗಳಲ್ಲಿ ಆಯೋಜಿಸುತ್ತಿರುವುದು ಅಭೀನಂದನೀಯ ಎಂದರು.

ಕನಕದಾಸ ಶಿಕ್ಷಣ ಸಮಿತಿ ಉಪಾಧ್ಯಕ್ಷ ಶಾಂತಣ್ಣ ಕಡಿವಾಲ ಅಧ್ಯಕ್ಷತೆ ವಹಿಸಿದ್ದರು. ಜಾನಪದ ವಿದ್ವಾಂಸ ಡಾ. ರಾಮು ಮೂಲಗಿ ಜಾನಪದದಲ್ಲಿರುವ ಜೀವನ ಮೌಲ್ಯಗಳ ಹಾಡುಗಳನ್ನು ಹಾಡಿದರು. ಹಾರ್ಮೋನಿಯಂ ಸಾಥ್ ಶಿವರಾಜ ಹಿರೇಮಠ, ತಬಲಾ ಸಾಥ್ ನಾಗಲಿಂಗ ಮುರಗಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಳೆಗಾಲದಲ್ಲಿ ಪ್ರಾಣಹಾನಿ ತಡೆಗೆ ಮುನ್ನಚ್ಚರಿಕೆ ವಹಿಸಿ
ಸಚಿವ ಸ್ಥಾನಕ್ಕಾಗಿ ದೆಹಲಿಯಲ್ಲಿ ಬೀಡುಬಿಟ್ಟ ಕೊಪ್ಪಳ ಜಿಲ್ಲೆಯ ಶಾಸಕರು