ಕಾಲುವೆಗಳ ಹೂಳೆತ್ತುವ ಕಾರ್ಯ ಆರಂಭ : ರೈತ ಸಂಘ ಹರ್ಷ

KannadaprabhaNewsNetwork |  
Published : Feb 23, 2025, 12:31 AM IST
ವಡಗೇರಾ ತಾಲೂಕಿನ ಕೊನೆ ಭಾಗದ ಕಾಲುವೆಗಳ ಹೂಳೆತ್ತುವ ಕಾರ್ಯ ಆರಂಭಿಸಲಾಯಿತು. | Kannada Prabha

ಸಾರಾಂಶ

Dredging of canals started: Raitha Sangh Harsha

ಕನ್ನಡಪ್ರಭ ವಾರ್ತೆ ವಡಗೇರಾ

ತಾಲೂಕಿನ ಕೊನೆಭಾಗದ ಕಾಲುವೆಗಳ ಹೂಳೆತ್ತುವಂತೆ ಆಗ್ರಹಿಸಿ ರೈತ ಸಂಘದ ತಾಲೂಕಾಧ್ಯಕ್ಷ ವಿದ್ಯಾಧರ್ ಜಾಕಾ ನೇತೃತ್ವದಲ್ಲಿ ಕಾಲುವೆ ಬಳಿ ಪ್ರತಿಭಟನೆ ಮಾಡಿ ಎಚ್ಚರಿಸಿದ್ದ ಹಿನ್ನೆಲೆ ಎಚ್ಚೆತ್ತುಕೊಂಡ ಅಧಿಕಾರಿಗಳು, ಕಾಲುವೆಗಳ ಹೂಳೆತ್ತಿಸಿ ಜಾಲಿ, ಗಿಡಗಂಟಿ ಮುಳ್ಳುಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದು, ರೈತ ಸಂಘ ಹರ್ಷ ವ್ಯಕ್ತಪಡಿಸಿದೆ.

ಈ ವೇಳೆ ಮಾತನಾಡಿದ ರೈತ ಸಂಘದ ತಾಲೂಕಾಧ್ಯಕ್ಷ ವಿದ್ಯಾಧರ್ ಜಾಕಾ, ನಮ್ಮ ಮನವಿಗೆ ಸ್ಪಂದಿಸಿ, ಕಾಲುವೆಗಳ ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗಿರುವುದು ಸ್ವಾಗತಾರ್ಹ. ನಮ್ಮ ಹೋರಾಟಕ್ಕೆ ಸಿಕ್ಕ ಜಯ ಇದಾಗಿದೆ ಎಂದರು.

ಈಗಾಗಲೇ ಜೋಳ, ಸಜ್ಜಿ, ಕಡಲೆ, ಶೇಂಗಾ, ಮೆಣಸಿನಕಾಯಿ ಬೀಜ ಬಿತ್ತನೆ ಮಾಡಿದ್ದು, ಕೊನೆ ಭಾಗದ ರೈತರಿಗೆ ನೀರಿನ ಅವಶ್ಯಕತೆ ಇದ್ದು, ತಕ್ಷಣ ಹಂತ ಹಂತವಾಗಿ ಸಮರ್ಪಕವಾಗಿ ಕಾಲುವೆಗಳಿಗೆ ನೀರು ಹರಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ. ತಾಲೂಕು ಗೌರವಾಧ್ಯಕ್ಷ ಶರಣು ಜಡಿ, ತಾಲೂಕು ಕಾರ್ಯದರ್ಶಿ ಸತೀಶ್ ಪೂಜಾರಿ, ಮಲ್ಲು ನಾಟೇಕಾರ, ತಿರುಮಲ ಕಲಾಲ, ನಿಂಗು ಕುರ್ಕಳಿ, ದರ್ಶನ್ ಗುತ್ತೇದಾರ್, ಮರೆಪ್ಪ ಬಾಡದ, ಯಲ್ಲಪ್ಪ ಕರಿಕಳ್ಳಿ ಇತರರಿದ್ದರು.

----

22ವೈಡಿಆರ್‌7 : ವಡಗೇರಾ ತಾಲೂಕಿನ ಕೊನೆ ಭಾಗದ ಕಾಲುವೆಗಳ ಹೂಳೆತ್ತುವ ಕಾರ್ಯ ಆರಂಭಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರಸು ದಾಖಲೆ ಸರಿಗಟ್ಟಲು ಜನರ ಆಶೀರ್ವಾದವೇ ಕಾರಣ: ಸಿದ್ದರಾಮಯ್ಯ
ಅವಕಾಶ ಬಳಸಿಕೊಂಡು ಭವಿಷ್ಯ ರೂಪಿಸಿಕೊಳ್ಳಿ