ಡ್ರಿಂಕ್‌ ಆ್ಯಂಡ್‌ ಡ್ರೈವ್‌: ವಾಹನ ಸವಾರರ ಡಿಎಲ್‌ ರದ್ದು

KannadaprabhaNewsNetwork |  
Published : Jan 30, 2026, 02:45 AM IST
ಕುಡಿದು ವಾಹನ ಚಾಲನೆ: ಡಿಎಲ್‌ ರದ್ದುಗೊಳಿಸಲು ಶಿಫಾರಸು ಮಾಡಲು ಮುಂದಾದ ಪೊಲೀಸ್‌ ಇಲಾಖೆ, ಕಪ್ಪು ಬಣ್ಣದ ಕೂಲಿಂಗ್‌ ಗ್ಲಾಸ್‌ ಬಳಕೆ: ಎಚ್ಚರದಿಂದಿರಲು ಪೊಲೀಸ್‌ ಅಧಿಕಾರಿ ಸೂಚನೆ | Kannada Prabha

ಸಾರಾಂಶ

ನಗರದಲ್ಲಿ ಕುಡಿದು ವಾಹನ ಚಲಾಯಿಸುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಪೊಲೀಸರು ಕೇಸು ದಾಖಲು, ಸಿಸಿಟಿವಿ ಅಳವಡಿಕೆ ಸೇರಿದಂತೆ ಹಲವು ಕ್ರಮ ಕೈಗೊಂಡರೂ ಚಾಲಕರು ಎಚ್ಚೆತ್ತುಕೊಂಡಿಲ್ಲ. ಹೀಗಾಗಿ ನಿಯಮ ಮೀರುವವರ ವಿರುದ್ಧ ಪೊಲೀಸ್ ಇಲಾಖೆ ದಂಡ ವಿಧಿಸುವುದರ ಜೊತೆಗೆ ಡಿ ಎಲ್ ಅನ್ನು ರದ್ದು ಮಾಡಿಸಲು ಮುಂದಾಗಿದೆ.

ಮುರಳೀಧರ್‌ ಶಾಂತಳ್ಳಿ

ಕನ್ನಡಪ್ರಭವಾರ್ತೆ, ಸೋಮವಾರಪೇಟೆ

ನಗರದಲ್ಲಿ ಕುಡಿದು ವಾಹನ ಚಲಾಯಿಸುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಪೊಲೀಸರು ಕೇಸು ದಾಖಲು, ಸಿಸಿಟಿವಿ ಅಳವಡಿಕೆ ಸೇರಿದಂತೆ ಹಲವು ಕ್ರಮ ಕೈಗೊಂಡರೂ ಚಾಲಕರು ಎಚ್ಚೆತ್ತುಕೊಂಡಿಲ್ಲ. ಹೀಗಾಗಿ ನಿಯಮ ಮೀರುವವರ ವಿರುದ್ಧ ಪೊಲೀಸ್ ಇಲಾಖೆ ದಂಡ ವಿಧಿಸುವುದರ ಜೊತೆಗೆ ಡಿ ಎಲ್ ಅನ್ನು ರದ್ದು ಮಾಡಿಸಲು ಮುಂದಾಗಿದೆ.

೨೦೨೬ ರ ಜನವರಿ ಯಿಂದ ಇಲ್ಲಿಯವರೆಗೆ ಕುಡಿದು ವಾಹನ ಚಲಾಯಿಸುವವರ ವಿರುದ್ಧ ೧೫ ಕೇಸ್ ಗಳನ್ನು ದಾಖಲಿಸಲಾಗಿದ್ದು ಸುಮಾರು ೧.೧೩೫೦೦ ರು. ದಂಡ ವಸೂಲಿ ಮಾಡಲಾಗಿದೆ.

ಕಾರಿಗೆ ಟಿಂಟ್‌, ಒಳಗೆ ಅಕ್ರಮ ಚಟುವಟಿಕೆ

ಮಂಗಳವಾರ ನಗರದ ಹೊರ ವಲಯದಲ್ಲಿ ಕೂಲಿಂಗ್ ಪೇಪರ್‌ ಅಂಟಿಸಿದ ಕಾರಿನಲ್ಲಿ ವ್ಯಕ್ತಿಯೊಬ್ಬ ಮದ್ಯಪಾನ ಸೇವಿಸಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದರು. ಈ ವೇಳೆ ಅದೇ ಮಾರ್ಗವಾಗಿ ಕರ್ತವ್ಯದ ನಿಮಿತ್ತ ಸಾಗುತ್ತಿದ್ದ ಇನ್‌ಸ್ಪೆಕ್ಟರ್ ಮುದ್ದು ಮಾದೇವ ಕಾರನ್ನು ಗಮನಿಸಿ ಪರಿಶೀಲಿಸಿದಾಗ ಕಾರಿನ ಒಳಗಡೆ ಮದ್ಯಪಾನ, ಅನೈತಿಕ ಚಟುವಟಿಕೆಗೆ ನಡೆಸುತ್ತಿರುವುದು ಕಂಡುಬಂದಿದೆ. ಕುಡಿದು ವಾಹನ ಚಲಾಯಿಸಿದ ಕಾರ್ ಮಾಲಿಕನಿಗೆ ೮೦೦೦ ರು. ದಂಡ ಹಾಕುವುದರ ಜೊತೆಗೆ ನಿಯಮ ಮೀರಿ ಕಪ್ಪು ಕೂಲಿಂಗ್ ಹಾಕಿದ್ದಕ್ಕೆ ೧೦೦೦ ರು. ದಂಡ ಹಾಗೂ ಡಿ ಎಲ್ ಅನ್ನು ರದ್ದು ಮಾಡಲು ಸಾರಿಗೆ ಇಲಾಖೆಗೆ ಶಿಫಾರಸು ಮಾಡಲಾಗಿದೆ ಎಂದು ಇನ್‌ ಸ್ಪೆಕ್ಟರ್‌ ತಿಳಿಸಿದ್ದಾರೆ. ಕಾರು ಚಾಲಕ ಡ್ರಿಂಕ್ ಅಂಡ್ ಡ್ರೈವ್‌ ಗೆ ದಂಡ ಕಟ್ಟಿದ ನಂತರ ತನ್ನ ಕಾರಿಗೆ ಅಂಟಿಸಿದ್ದ ಕಪ್ಪು ಬಣ್ಣದ ಕೂಲಿಂಗ್ ಪೇಪರನ್ನು ತೆರವು ಮಾಡಿ ಠಾಣೆಯಿಂದ ತೆರಳಿದ್ದಾರೆ.

ಇತ್ತೀಚೆಗೆ ವಾರಾಂತ್ಯದಲ್ಲಿ ಪ್ರವಾಸಿಗರು ಹೆಚ್ಚುತ್ತಿದ್ದು, ಕೂಲಿಂಗ್‌ ಪೇಪರ್‌ ಕಾರಿಗೆ ಅಳವಡಿಸಿ, ಮದ್ಯಪಾನ ಮಾಡುವುದು, ಅನೈತಿಕ ಚಟುವಟಿಕೆ ನಡೆಸುತ್ತಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್‌ ಇಲಾಖೆ ಅಕ್ರಮಗಳಿಗೆ ಕಡಿವಾಣ ಹಾಕಲು ಸಜ್ಜಾಗಿದೆ. ವಾಹನ ಚಾಲಕರು, ಜೊತೆಯಲ್ಲಿ ತೆರಳುವವರು ಈ ಬಗ್ಗೆ ಎಚ್ಚರಿಕೆ ವಹಿಸುವುದು ಉತ್ತಮ. ಇಲ್ಲದಿದ್ದರೆ ವಾಹನ ಚಾಲನಾ ಪರವಾನಾಗಿ ರದ್ದುಗೊಳಿಸಿ ದಂಡ ದಂಡ ವಸೂಲಿ ಮಾಡಲಾಗುವುದು. ಈಗಾಗಲೇ ೧೫ ಮಂದಿ ಕುಡಿದು ವಾಹನ ಚಾಲನೆ ಮಾಡಿದವರ ಡಿಎಲ್‌ ರದ್ದುಗೊಳಿಸಲು ಶಿಫಾರಸ್ಸು ಮಾಡಲಾಗಿದೆ.

ಮುದ್ದುಮಾದೇವ, ಆರಕ್ಷಕ ನಿರೀಕ್ಷಕರು, ಸೋಮವಾರಪೇಟೆ ವೃತ್ತ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತುಂಬೆ ಗ್ರೂಪ್‌ನಿಂದ ತುಂಬೆ ಕೇರ್ಸ್ ಉದ್ಘಾಟನೆ
ಬೈಂದೂರು ಉತ್ಸವದಲ್ಲಿ ಹೆಣ್ಣು ಕರುಗಳ ಪ್ರದರ್ಶನ