ಯುಎಇಯಲ್ಲಿ ಗ್ರೇಟ್ ಪ್ಲೇಸ್ ಟು ವರ್ಕ್‌ (೨೦೨೫-೨೦೨೬) ಪ್ರಮಾಣ ಪತ್ರವನ್ನು ಇತ್ತೀಚೆಗೆ ಪಡೆದುಕೊಂಡಿರುವ ತುಂಬೆ ಗ್ರೂಪ್, ತನ್ನ ಎಲ್ಲ ಘಟಕಗಳ ಉದ್ಯೋಗಿಗಳ ಜೀವನಮಟ್ಟ, ವೃತ್ತಿ ಅಭಿವೃದ್ಧಿ ಹಾಗೂ ದೀರ್ಘಕಾಲೀನ ಭದ್ರತೆಯನ್ನು ಉದ್ದೇಶಿಸಿ ತುಂಬೆ ಕೇರ್ಸ್ ಎಂಬ ಸಮಗ್ರ ಕಲ್ಯಾಣ ಕಾರ್ಯಕ್ರಮ

ಮಂಗಳೂರು: ಯುಎಇಯಲ್ಲಿ ಗ್ರೇಟ್ ಪ್ಲೇಸ್ ಟು ವರ್ಕ್‌ (೨೦೨೫-೨೦೨೬) ಪ್ರಮಾಣ ಪತ್ರವನ್ನು ಇತ್ತೀಚೆಗೆ ಪಡೆದುಕೊಂಡಿರುವ ತುಂಬೆ ಗ್ರೂಪ್, ತನ್ನ ಎಲ್ಲ ಘಟಕಗಳ ಉದ್ಯೋಗಿಗಳ ಜೀವನಮಟ್ಟ, ವೃತ್ತಿ ಅಭಿವೃದ್ಧಿ ಹಾಗೂ ದೀರ್ಘಕಾಲೀನ ಭದ್ರತೆಯನ್ನು ಉದ್ದೇಶಿಸಿ ತುಂಬೆ ಕೇರ್ಸ್ ಎಂಬ ಸಮಗ್ರ ಕಲ್ಯಾಣ ಕಾರ್ಯಕ್ರಮವನ್ನು ಆರಂಭಿಸಿದೆ.೫೬ ರಾಷ್ಟ್ರಗಳ ೩,೦೦೦ಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ೫೦೦ಕ್ಕೂ ಅಧಿಕ ವೈದ್ಯರನ್ನು ಹೊಂದಿರುವ ತುಂಬೆ ಗ್ರೂಪ್, ಈ ಕಾರ್ಯಕ್ರಮದ ಮೂಲಕ ಆರೋಗ್ಯ ಸೇವೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ತನ್ನ ನಾಯಕತ್ವವನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ ಜನಕೇಂದ್ರಿತ ಸಂಸ್ಥೆಯಾಗಿ ತನ್ನ ಗುರುತನ್ನು ಸ್ಥಿರಪಡಿಸಿದೆ.ಸಾಮಾನ್ಯ ಉದ್ಯೋಗಿ ಸೌಲಭ್ಯ ಯೋಜನೆಯನ್ನೇ ಮೀರಿದ ತುಂಬೆ ಕೇರ್ಸ್ ಆರೋಗ್ಯ, ಆರ್ಥಿಕ ಭದ್ರತೆ, ಶಿಕ್ಷಣ, ಕಲ್ಯಾಣ, ಗೌರವ ಹಾಗೂ ನಾಯಕತ್ವ ಅಭಿವೃದ್ಧಿಯನ್ನು ಒಂದೇ ಸಮಗ್ರ ಚಟುವಟಿಕೆಯಡಿ ಒಗ್ಗೂಡಿಸಿದೆ. ಇದರ ಮೂಲಕ ತುಂಬೆ ಗ್ರೂಪ್ ಈ ಪ್ರದೇಶದ ಅತ್ಯಾಕರ್ಷಕ ಉದ್ಯೋಗ ಸಂಸ್ಥೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ.ಈ ಕಾರ್ಯಕ್ರಮ ತುಂಬೆ ಗ್ರೂಪ್‌ನ ಸ್ಥಾಪಕ ಹಾಗೂ ಅಧ್ಯಕ್ಷ ಡಾ. ತುಂಬೆ ಮೊಯ್ದೀನ್ ಅವರ ದೃಷ್ಟಿಕೋನದಡಿ ರೂಪುಗೊಂಡಿದೆ. ಉದ್ಯೋಗಿಗಳ ಮೇಲಿನ ಆಳವಾದ ಹೂಡಿಕೆಯಿಂದಲೇ ಸ್ಥಿರ ಮತ್ತು ಶಕ್ತಿಶಾಲಿ ಸಂಸ್ಥೆಗಳು ನಿರ್ಮಾಣವಾಗುತ್ತವೆ ಎಂಬ ನಂಬಿಕೆಯೇ ಇದರ ಮೂಲವಾಗಿದೆ.ಈ ಕುರಿತು ಮಾತನಾಡಿದ ಡಾ. ತುಂಬೆ ಮೊಯ್ದೀನ್, ಗ್ರೇಟ್ ಪ್ಲೇಸ್ ಟು ವರ್ಕ್ ಮಾನ್ಯತೆ ನಮ್ಮ ಉದ್ಯೋಗಿಗಳು ಅನುಭವಿಸುತ್ತಿರುವ ಕಾರ್ಯ ಸಂಸ್ಕೃತಿಗೆ ದೊರೆತ ಮಾನ್ಯತೆ. ‘ತುಂಬೆ ಕೇರ್ಸ್’ ಮೂಲಕ ಪ್ರತಿಯೊಬ್ಬ ಉದ್ಯೋಗಿಗೂ ಆರೋಗ್ಯ, ವೃತ್ತಿ ಮತ್ತು ಜೀವನದಲ್ಲಿ ಸಂಪೂರ್ಣ ಬೆಂಬಲ ನೀಡುವ ಬದ್ಧತೆಯನ್ನು ನಾವು ಇನ್ನಷ್ಟು ಬಲಪಡಿಸಿದ್ದೇವೆ. ಉದ್ಯೋಗಿಗಳು ಭದ್ರತೆ ಮತ್ತು ಗೌರವವನ್ನು ಅನುಭವಿಸಿದಾಗ, ಶ್ರೇಷ್ಟತೆ ಸಹಜವಾಗಿ ಮೂಡುತ್ತದೆ. ಇದು ಕೇವಲ ಯೋಜನೆಯಲ್ಲ, ನಮ್ಮ ಸಂಸ್ಥೆಯ ಸಂಸ್ಕೃತಿಯ ಪ್ರತಿಬಿಂಬವಾಗಿದೆ ಎಂದರು.ತುಂಬೆ ಕೇರ್ಸ್ ಕಾರ್ಯಕ್ರಮದಡಿ ಉದ್ಯೋಗಿಗಳಿಗೆ ಉಚಿತ ವೈದ್ಯಕೀಯ ತಪಾಸಣೆ, ಉಚಿತ ರಕ್ತ ಪರೀಕ್ಷೆಗಳು, ಉಚಿತ ಆರೋಗ್ಯ ವಿಮೆ, ಜೀವ ವಿಮೆ ಹಾಗೂ ಕಾರ್ಮಿಕ ಪರಿಹಾರ ವಿಮೆ ಒದಗಿಸಲಾಗುತ್ತದೆ. ಜೊತೆಗೆ ಬಾಡಿ ಅಂಡ್ ಸೌಲ್ ಹೆಲ್ತ್ ಕ್ಲಬ್ ಮೂಲಕ ತ್ರೈಮಾಸಿಕ ದೇಹ ಸಂರಚನಾ ವಿಶ್ಲೇಷಣೆ, ಉಚಿತ ಹೆಲ್ತ್ ಕ್ಲಬ್ ಸದಸ್ಯತ್ವ ಹಾಗೂ ಗ್ರೂಮಿಂಗ್ ಮತ್ತು ವೆಲ್ನೆಸ್ ಸೇವೆಗಳ ಸೌಲಭ್ಯವೂ ಲಭ್ಯವಿದೆ. ಈ ಕ್ರಮಗಳು ತಡೆಗಟ್ಟುವ ಆರೋಗ್ಯ ಸೇವೆ ಮತ್ತು ಆರಂಭಿಕ ರೋಗ ಪತ್ತೆಗೆ ಒತ್ತು ನೀಡುತ್ತವೆ.ಶಿಕ್ಷಣ ಮತ್ತು ವೃತ್ತಿ ಅಭಿವೃದ್ಧಿಯ ಭಾಗವಾಗಿ, ಉದ್ಯೋಗಿಗಳ ಮಕ್ಕಳಿಗೆ ಗಲ್ಫ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ಅರ್ಹತಾಧಾರಿತ ವಿದ್ಯಾರ್ಥಿವೇತನ, ಹಾಗೂ ತುಂಬೆ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಮತ್ತು ಇನ್ ಹೆಲ್ತ್ಕೇರ್ ಮೂಲಕ ಉಚಿತ ನಾಯಕತ್ವ ತರಬೇತಿ ನೀಡಲಾಗುತ್ತದೆ. ಇದರಿಂದ ಸಂಸ್ಥೆಯ ಒಳಗೇ ಮುಂದಿನ ತಲೆಮಾರಿನ ನಾಯಕತ್ವ ರೂಪುಗೊಳ್ಳಲಿದೆ.ಇದಲ್ಲದೆ ಕಾರ್ಯಕ್ಷಮತೆಯ ಆಧಾರದ ಮೇಲೆ ಬಹುಮಾನ ಮತ್ತು ಪ್ರೋತ್ಸಾಹಧನ, ದೀರ್ಘಕಾಲ ಸೇವೆ ಸಲ್ಲಿಸಿದ ಉದ್ಯೋಗಿಗಳಿಗೆ ವಿಶೇಷ ಸೌಲಭ್ಯಗಳು, ವಾರ್ಷಿಕ ಬೋನಸ್ ಯೋಜನೆಗಳು ಹಾಗೂ ವಿವಿಧ ತುಂಬೆ ಗ್ರೂಪ್ ಘಟಕಗಳಲ್ಲಿ ರಿಯಾಯಿತಿ ದರಗಳನ್ನೂ ಈ ಕಾರ್ಯಕ್ರಮ ಒಳಗೊಂಡಿದೆ.

ಒಟ್ಟಾರೆ ತುಂಬೆ ಕೇರ್ಸ್ ಉದ್ಯೋಗಿಗಳ ಆರೋಗ್ಯ, ಗೌರವ ಮತ್ತು ಭವಿಷ್ಯ ಭದ್ರತೆಯನ್ನು ಕೇಂದ್ರವಾಗಿಟ್ಟುಕೊಂಡ ಸಮಗ್ರ ಕಲ್ಯಾಣ ಯೋಜನೆಯಾಗಿ ಗುರುತಿಸಿಕೊಂಡಿದ್ದು, ತುಂಬೆ ಗ್ರೂಪ್‌ನ್ನು ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡುವ ಪ್ರಮುಖ ಸಂಸ್ಥೆಯಾಗಿ ಸ್ಥಾಪಿಸಿದೆ.