ನರಗುಂದ: 84 ಕೋಟಿ ಜೀವಿರಾಶಿಗಳಿಗೆ ನೀರು ಬಹಳ ಅಮೂಲ್ಯ ಸಂಪತ್ತು, ಹಾಗಾಗಿ ನಾವು ನೀರನ್ನು ಮಿತಯಾಗಿ ಬಳಕೆ ಮಾಡಿ ಮುಂದಿನ ಪೀಳಿಗೆಗೆ ಕೊಡುವದು ಅವಶ್ಯವಿದೆ ಎಂದು ಕೊಪ್ಪಳ ಪ್ರಾದೇಶಿಕ ನಿರ್ದೇಶಕ ಚಂದ್ರಶೇಖರ ಹೇಳಿದರು.
ಕಾಮಗಾರಿಯ ಒಟ್ಟು ವೆಚ್ಚ ₹11, 55,236-00 ಅದರಲ್ಲಿ ₹7,10,876-00ಗಳನ್ನು ಪೂಜ್ಯ ಹೆಗ್ಗಡೆ ದಂಪತಿಗಳು ನೀಡುವ ಜತೆಗೆ ಪುನಶ್ಚೇತನಗೊಳಿಸಲು ಸಂಸ್ಥೆ ನಿಯೋಜನೆ ಮಾಡಿದ್ದಾರೆ. ಧರ್ಮಸ್ಥಳ ಸಂಸ್ಥೆಯ ಜನಮುಖಿ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು.
ಸಾನ್ನಿಧ್ಯ ವಹಿಸಿದ ಶ್ರೀವೇದಮೂರ್ತಿ ರೇವಣಸಿದ್ದೇಶ್ವರ ಹಿರೇಮಠ ಶ್ರೀಗಳು ಮಾತನಾಡಿ, ಹೆಗ್ಗಡೆ ದಂಪತಿ ಧರ್ಮಸ್ಥಳ ಸಂಸ್ಥೆಯಿಂದ ಒಂದು ಸರ್ಕಾರ ಮಾಡುವ ಕೆಲಸ ಸಾರ್ವಜನಿಕರಿಗಾಗಿ ಅನುಷ್ಠಾನ ಮಾಡುತ್ತಿದ್ದಾರೆ. ಆದ್ದರಿಂದ ಸಂಘಗಳ ಸದಸ್ಯರು ಮತ್ತು ಸಾರ್ವಜನಿಕರು ಜನಮುಖಿ ಕಾರ್ಯಕ್ರಮ ಸದುಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು.ಜಿಲ್ಲಾ ನಿರ್ದೇಶಕ ಕೇಶವ ದೇವಾಂಗರವರು ಮಾತನಾಡಿ, ನಮ್ಮ ಊರು ನಮ್ಮ ಕೆರೆ ಕಾರ್ಯಕ್ರಮ ಹೆಗ್ಗಡೆ ದಂಪತಿ ಕನಸ್ಸು, ಈ ಕಾರ್ಯಕ್ರಮ ಕೋಟ್ಯಂತರ ಸಾರ್ವಜನಿಕರಿಗೆ ಅನುಕೂಲವಾಗಿದೆ. ಆಡು ಮುಟ್ಟದ ಸೊಪ್ಪಿಲ್ಲ ಗ್ರಾಮಾಭಿವೃದ್ಧಿ ಯೋಜನೆ ಮಾಡದ ಜನಪರ ಕಾರ್ಯಕ್ರಮಗಳು ಉಳಿದಿಲ್ಲ ಎಂದು ಹೇಳಿದರು.
ಜಿಲ್ಲಾ ಜನಜಾಗೃತಿ ನಿಕಟ ಪೂರ್ವ ಅಧ್ಯಕ್ಷ ಎಚ್.ಬಿ. ಅಸೂಟಿ ಮಾತನಾಡಿ, ಕೆರೆಯ ಸುತ್ತ ಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಿ ಮತ್ತು ಕೆರೆಯ ನೀರಿನ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ತಾಲೂಕು ಯೋಜನಾಧಿಕಾರಿ ಮಾಲತಿ ದಿನೇಶ, ವಲಯ ಮೇಲ್ವಿಚಾರಿಕ ಅಕ್ಕಮಹಾದೇವಿ, ಬಸವರಾಜ ರೊಟ್ಟಿ, ದಿಲಶಾದ ಬೇಗಂ ಜಾಲಿಹಾಳ, ಬಸವರಾಜ ತಿಮ್ಮಣ್ಣವರ, ಗ್ರಾಪಂ ಸದಸ್ಯರು, ಪ್ರಗತಿಪರ ರೈತರು, ಕೆರೆ ಇಂಜಿನಿಯರ್ ಸತೀಶ, ಕೃಷಿ ಮೇಲ್ವಿಚಾರಕ ಅಕ್ಷಯ, ವಿಚಕ್ಷಣಾಧಿಕಾರಿ ಮೌನೇಶ್, ನೋಡಲ್ ಅಧಿಕಾರಿ ಆನಂದ, ಸಿ.ಎಸ್.ಸಿ ಸೇವಾದಾರರು, ಸೇವಾ ಪ್ರತಿನಿಧಿಗಳು, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಪದಾಧಿಕಾರಿಗಳು, ಸರ್ವ ಸದಸ್ಯರು ಉಪಸ್ಥಿತರಿದ್ದರು.