-ತಾಲೂಕಿನ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದರೆ ಕೂಡಲೇ ಕ್ರಮ ಕೈಗೊಳ್ಳಬೇಕು.-ಬರಗಾಲದಿಂದ ನೀರಿನ ದುಸ್ತರ ವಾಗುತ್ತಿದ್ದು, ಕುಡಿಯುವ ನೀರಿನ ವಿಷಯದಲ್ಲಿ ಯಾರೂ ತಾತ್ಸಾರ ಮಾಡಬಾರದು.-ಟ್ಯಾಂಕರ್‌ಗಳಿಗೆ ಜಿ.ಪಿ.ಎಸ್ ಅಳವಡಿಸಿ ಏಜೆನ್ಸಿ ಜಿ.ಪಿ.ಎಸ್‌ನಲ್ಲಿ ಗುರುತಿಸಬೇಕು.
ತಾಲೂಕಿನ 22 ಗ್ರಾಮ ಪಂಚಾಯಿತಿ ವ್ಯಾಪ್ತಿಯ 25 ಗ್ರಾಮಗಳಿಗೆ ಪ್ರತಿದಿನ 50 ಟ್ಯಾಂಕರ್ ಮೂಲಕ ಪ್ರತಿದಿನ 106 ಟ್ರೀಪ್ ನೀರು ಪೂರೈಸಲಾಗುತ್ತಿದೆ. ಮುಂಬರುವ ದಿನದಲ್ಲಿ ತಾಲೂಕಿನ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದರೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಎಸಿ ಅಬೀದ್ ಗದ್ಯಾಳ ಸೂಚಿಸಿದರು.
ಅವರು ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಹಸೀಲ್ದಾರ್ ಸಭಾ ಭವನದಲ್ಲಿ ಹಮ್ಮಿಕೊಂಡ ಟಾಸ್ಕ್‌ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬರಗಾಲದಿಂದ ನೀರಿನ ದುಸ್ತರ ವಾಗುತ್ತಿದ್ದು, ಕುಡಿಯುವ ನೀರಿನ ವಿಷಯದಲ್ಲಿ ಯಾರೂ ತಾತ್ಸಾರ ಮಾಡಬಾರದು. ಹಿರೇಬೇವನೂರ, ಅಥರ್ಗಾ ಮತ್ತು ಹೊರ್ತಿ ಸೇರಿದಂತೆ ತಾಲೂಕಿನಲ್ಲಿರುವ ವಸತಿ ನಿಲಯಗಳಿಗೆ ಬೇಡಿಕೆಯ ಅನುಗುಣವಾಗಿ ನೀರನ್ನು ಪೂರೈಸಬೇಕು. ನೀರು ಪೂರೈಸುವ ಆ್ಯಪ್ ಬಳಸಬೇಕು. ಕಿ.ಮೀ ತಿಳಿಸಬೇಕು. ಅಂದರೆ ಮಾತ್ರ ಹಣ ಬಿಡುಗಡೆ ಮಾಡಲಾಗುತ್ತಿದೆ ಎಂದರು.ಟ್ಯಾಂಕರ್‌ಗಳಿಗೆ ಜಿ.ಪಿ.ಎಸ್ ಅಳವಡಿಸಿ ಏಜನ್ಸಿ ಜಿ.ಪಿ.ಎಸ್‌ನಲ್ಲಿ ಗುರುತಿಸಬೇಕು. ಮುಂದಿನ ದಿನಗಳಲ್ಲಿ ಟ್ಯಾಂಕರ್ ಆ್ಯಪ್ ಉಪಯೋಗಿಸುವ ಕುರಿತು ಮಾಹಿತಿ ನೀಡಿದರು.
ತಹಸೀಲ್ದಾರ್ ಮಂಜುಳಾ ನಾಯಕ, ತಾಪಂ ಇಒ ಬಾಬು ರಾಠೋಡ, ಎಇಇ ಎಸ್.ಆರ್.ರುದ್ರವಾಡಿ, ಬಿಇಒ ಟಿ.ಎಸ್.ಅಲಗೂರ, ಪಿಡಿಒ ಸಿ.ಜಿ.ಪಾರೆ, ಬಸವರಾಜ ಬಿರಾದಾರ ಮಾತನಾಡಿದರು.