ಭೂ ಪರಿವರ್ತನೆಯಾದ ನಿವೇಶನಗಳನ್ನು ನೋಂದಣಿ ಮಾಡಿ: ಟೈರ್‌ ರಂಗನಾಥ್‌ ಒತ್ತಾಯ

KannadaprabhaNewsNetwork |  
Published : Feb 19, 2024, 01:33 AM IST
15ಶಿರಾ2: ಶಿರಾ ನಗರದ ಉಪನೊಂದಣಾಧಿಕಾರಿಗಳ ಕಚೇರಿಯ ಬಳಿ ರಿಯಲ್ ಎಸ್ಟೇಟ್ ಉದ್ಯಮಿಗಳಿಂದ ನಡೆದ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ದಸಂಸ ಸಂಚಾಲಕ ಟೈರ್ ರಂಗನಾಥ್, ಶಿರಾ ತಾಲೂಕು ರಿಯಲ್ ಎಸ್ಟೇಟ್ ಉದ್ಯಮಿಗಳ ಸಂಘದ ಪೆದ್ದರಾಜು, ದಯಾನಂದ ಸಾಗರ್, ಅಪ್ಪಿ ರಂಗನಾಥ್, ಸತೀಶ್, ಶಿವಣ್ಣ, ಮಾಜಿ ನಗರಸಭಾ ಸದಸ್ಯ ಬಸವರಾಜು ಸೇರಿದಂತೆ ಹಲವರು ಹಾಜರಿದ್ದರು. | Kannada Prabha

ಸಾರಾಂಶ

ಜಿಲ್ಲಾಧಿಕಾರಿಗಳ ಭೂ ಪರಿವರ್ತನೆಯಿಂದ ಆಗಿರುವ ನಿವೇಶನಗಳನ್ನು ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಬಾರದೆಂದು ನಗರಸಭೆಯಿಂದ ನೋಂದಣಾಧಿಕಾರಿಗಳ ಕಚೇರಿಗೆ ಪತ್ರ ಬರೆದಿದ್ದು, ಇದರಿಂದ ಸಾಮಾನ್ಯ ನಾಗರಿಕರಿಗೆ ತೊಂದರೆಯಾಗುತ್ತದೆ.

ಕನ್ನಡಪ್ರಭ ವಾರ್ತೆ ಶಿರಾ

ಜಿಲ್ಲಾಧಿಕಾರಿಗಳ ಭೂ ಪರಿವರ್ತನೆಯಿಂದ ಆಗಿರುವ ನಿವೇಶನಗಳನ್ನು ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಬಾರದೆಂದು ನಗರಸಭೆಯಿಂದ ನೋಂದಣಾಧಿಕಾರಿಗಳ ಕಚೇರಿಗೆ ಪತ್ರ ಬರೆದಿದ್ದು, ಇದರಿಂದ ಸಾಮಾನ್ಯ ನಾಗರಿಕರಿಗೆ ತೊಂದರೆಯಾಗುತ್ತದೆ. ಕೂಡಲೇ ಈ ಆದೇಶ ಹಿಂಪಡೆಯಬೇಕು ಎಂದು ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ಟೈರ್‌ ರಂಗನಾಥ್ ಒತ್ತಾಯಿಸಿದರು.

ನಗರದ ಉಪನೋಂದಣಾಧಿಕಾರಿಗಳ ಕಚೇರಿಯ ಬಳಿ ರಿಯಲ್ ಎಸ್ಟೇಟ್ ಉದ್ಯಮಿಗಳಿಂದ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಶಿರಾ ನಗರಸಭೆಯಿಂದ ಹತ್ತಾರು ವರ್ಷಗಳು ಕಳೆದರೂ ನಿವೇಶನ ರಹಿತರಿಗೆ ನಿವೇಶನ ನೀಡಲಾಗಿಲ್ಲ. ಹೀಗಿದ್ದರೂ ಬಡವರು ಕಷ್ಟಪಟ್ಟು ದುಡಿದು ನಿವೇಶನ ಕೊಂಡುಕೊಂಡರೆ ಅದನ್ನು ರಿಜಿಸ್ಟರ್‌ ಮಾಡಬೇಡಿ ಎಂದು ಆದೇಶ ಹೊರಡಿಸಿದ್ದಾರೆ. ಶಿರಾ ನಗರ ವ್ಯಾಪ್ತಿಯಲ್ಲಿ ನಿವೇಶನಗಳ ಬೆಲೆ ಗಗನಕ್ಕೇರಿದ್ದು, ಸೂಡಾದಲ್ಲಿ ಅನುಮೋದನೆಯಾಗಿರುವ ನಿವೇಶನಗಳನ್ನೇ ಕೊಂಡುಕೊಳ್ಳಲು ೧೫ ರಿಂದ ೨೦ ಲಕ್ಷ ಹಣ ಬೇಕು. ಜನರಲ್ಲಿ ಅಷ್ಟು ಹಣವಿಲ್ಲ. ಈ ಹಿಂದೆ ಡಿಸಿ ಅವರಿಂದ ಭೂಪವರಿವರ್ತನೆಯಾದ ಬಡಾವಣೆಗಳಲ್ಲಿ ಕೊಂಡುಕೊಳ್ಳುವ ನಿವೇಶನಗಳನ್ನು ನೋಂದಣಾಧಿಕಾರಿಗಳ ಕಚೇರಿಯಲ್ಲಿ ರಿಜಿಸ್ಟರ್‌ ಮಾಡದಂತೆ ನಗರಸಭೆ ಪೌರಾಯಕ್ತರು ಪತ್ರ ಬರೆದಿದ್ದಾರೆ ಎಂದರು.

ಹೀಗಾದರೆ ಬಡವರ ಪಾಡೇನು ಎಂದು ಪ್ರಶ್ನಿಸಿದ ಅವರು ಶಿರಾ ನಗರದಲ್ಲಿ ಎಷ್ಟು ಇ-ಖಾತೆ ಮಾಡಿದ್ದೀರಿ. ನಗರದಲ್ಲಿ ಎಷ್ಟೋ ನಿವೇಶನ, ಮನೆಗಳು ಇ-ಖಾತೆ ಆಗಿಲ್ಲ. ಎಷ್ಟೋ ಬಡಾವಣೆಗಳಲ್ಲಿ ಯಾವುದೇ ಖಾತೆಗಳನ್ನು ಮಾಡಲಾಗಿಲ್ಲ. ನಗರಸಭೆ ಪೌರಾಯುಕ್ತರು ಜಿಲ್ಲಾಧಿಕಾರಿಗಳಿಗಿನ್ನು ಮೇಲಾಧಿಕಾರಿಗಳಾಗಿದ್ದಾರೆಯೇ. ಬಡವರಿಗೆ ಅನುಕೂಲವಾಗುವ ಕೆಲಸ ಮಾಡಬೇಕು. ಇದೇ ರೀತಿ ಮುಂದುವರೆದರೆ ನಗರಸಭೆ ಮುಂದೆ ಅನಿರ್ಧಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಇದರ ಜೊತೆಗೆ ರೇರಾ ಎಂದು ಹೊಸದಾಗಿ ೧೦ ಸಾವಿರ ಹಣ ವಸೂಲಿ ಮಾಡುತ್ತಿದ್ದಾರೆ. ಇದರ ಬಗ್ಗೆ ಮಾಹಿತಿ ಕೊಡಬೇಕು. ನಗರಸಭೆಯಲ್ಲಿ ಅಕ್ರಮವಾಗಿ ಖಾತೆ ಮಾಡಿರುವವರ ಮೇಲೆ ಕ್ರಮ ಕೈಗೊಳ್ಳಬೇಕು. ಅವರು ಜೈಲಿಗೆ ಹೋಗಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಶಿರಾ ತಾಲೂಕು ರಿಯಲ್ ಎಸ್ಟೇಟ್ ಉದ್ಯಮಿಗಳ ಸಂಘದ ಪೆದ್ದರಾಜು, ದಯಾನಂದ ಸಾಗರ್‌, ಅಪ್ಪಿ ರಂಗನಾಥ್, ಸತೀಶ್, ಶಿವಣ್ಣ, ಮಾಜಿ ನಗರಸಭಾ ಸದಸ್ಯ ಬಸವರಾಜು ಸೇರಿದಂತೆ ಹಲವರು ಹಾಜರಿದ್ದರು.

PREV

Recommended Stories

ರಾಹುಲ್‌ ಗಾಂಧಿ ಧರಣಿಗೆ 4500 ಪೊಲೀಸರ ಭದ್ರತೆ
ಹಳಿತಪ್ಪಿದ ಬೆಂಗಳೂರು ಉಪನಗರ ರೈಲು ಯೋಜನೆ : ಕೆ-ರೈಡ್ ಜತೆಗಿನ ಎಲ್‌ ಆ್ಯಂಡ್‌ ಟಿ ಗುತ್ತಿಗೆ ರದ್ದು