ಕನ್ನಡಪ್ರಭ ವಾರ್ತೆ ವಿಜಯಪುರ
ಜಲಧಾರೆ ಯೋಜನೆ ಪೂರ್ಣಗೊಂಡ ನಂತರ ಗ್ರಾಮೀಣ ಭಾಗದ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ಬಗೆಹರಿಯಲಿದೆ ಎಂದು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ತಿಳಿಸಿದರು.ತಿಕೋಟಾ ತಾಲೂಕಿನ ಅರಕೇರಿ, ಜಾಲಗೇರಿ ಹಾಗೂ ಟಕ್ಕಳಕಿಯಲ್ಲಿ ಜಲಜೀವನ್ ಮಿಷನ್(ಜೆಜೆಎಂ) ಯೋಜನೆಯ ಅಂಗವಾಗಿ ಮನೆಮನೆಗಳಿಗೆ ಕುಡಿಯುವ ನೀರು ಪೂರೈಸುವ ನಳಗಳ ಸಂಪರ್ಕ ಕಾಮಗಾರಿಗಳಿಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
ಜಲಧಾರೆ ಯೋಜನೆಯಡಿ ಆಲಮಟ್ಟಿ ಜಲಾಶಯದಿಂದ ಸುಮಾರು ಒಂದು ಮೀಟರ್ ಸುತ್ತಳತೆಯ ಬೃಹತ್ ಪೈಪ್‌ಲೈನ್ ಅಳವಡಿಸಿ ಜಲಜೀವನ ಮಿಷನ್ ಯೋಜನೆಯ ಜಲಮೂಲಗಳಿಗೆ ನೀರು ಪೂರೈಸಲಾಗುವುದು. ಒಂದೂವರೆ ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು.ಇದರಿಂದ ಪ್ರತಿಯೊಂದು ದೊಡ್ಡಿ, ತಾಂಡಾಗಳು, ಗ್ರಾಮಗಳು ಸೇರಿದಂತೆ ಪ್ರತಿಯೊಂದು ಜನವಸತಿ ಪ್ರದೇಶಗಳಿಗೆ ನೀರು ಪೂರೈಕೆಯಾಗಲಿದೆ. ಅಷ್ಟೇ ಅಲ್ಲ, ಜಲಧಾರೆ ಯೋಜನೆ ಪೂರ್ಣಗೊಂಡ ನಂತರ ಜೆಜೆಎಂ ಯೋಜನೆಗೆ ಜಲಮೂಲಗಳ ಸಮಸ್ಯೆ ಬಗೆಹರಿಯಲಿದೆ. ಜೊತೆಗೆ ಗ್ರಾಮೀಣ ಭಾಗದ ಜನರಿಗೆ ನಗರ ಪ್ರದೇಶಗಳಂತೆ ಮನೆಮನೆಗೆ ನದಿಯಿಂದ ಕುಡಿಯುವ ನೀರು ಪೂರೈಕೆಯಾಗಲಿದೆ. ಅಲ್ಲದೇ, ಮಹಿಳೆಯರು ಮತ್ತು ಮಕ್ಕಳು ಕುಡಿಯುವ ನೀರಿಗೆ ಅಲೆದಾಡುವುದು ಕೂಡ ತಪ್ಪಲಿದೆ ಎಂದರು.
ಅರಕೇರಿ ಗ್ರಾಪಂ ವ್ಯಾಪ್ತಿಯಲ್ಲಿ ಅರಕೇರಿ ಎಲ್. ಟಿ- 1ರಲ್ಲಿ ₹93 ಲಕ್ಷ, ಪವಾರ ವಸ್ತಿ ಮತ್ತು ಒಡೆಯರ ವಸ್ತಿಯಲ್ಲಿ ₹24.66 ಲಕ್ಷ, ಕರಾಡದೊಡ್ಡಿಯಲ್ಲಿ ₹74 ಲಕ್ಷ, ಮಾನವರ ದೊಡ್ಡಿಯಲ್ಲಿ ₹ 58 ಲಕ್ಷ, ₹1.30 ಕೋ. ಭಂಡಾರ ವಸ್ತಿಯಲ್ಲಿ ₹ 15.64 ಲಕ್ಷ, ಎಲ್. ಟಿ. 2 ರಲ್ಲಿ ₹ 93 ಲಕ್ಷ, ಎಲ್‌ಟಿಯಲ್ಲಿ ₹ 1.18 ಕೋಟಿ, ಸಿದ್ದಾಪುರ ಎ ಗ್ರಾಮದಲ್ಲಿ ₹ 1.42 ಕೋ. ವೆಚ್ಚದಲ್ಲಿ ಮನೆಮನೆಗಳಿಗೆ ನಳಗಳನ್ನು ಸಂಪರ್ಕ ಕಾಮಗಾರಿಗಳಿಗೆ, ಜಾಲಗೇರಿ ಗ್ರಾಮದ ವೀರಭದ್ರೇಶ್ವರ ತೋಟದಲ್ಲಿ ₹ 28.83 ಲಕ್ಷ, ಗೋಪನೆ ವಸ್ತಿಯಲ್ಲಿ ₹14.94 ಲಕ್ಷ, ಚಿಗರ್ಯಾಳ ವಸ್ತಿಯಲ್ಲಿ ₹24.53 ಲಕ್ಷ, ಚಿಗರ್ಯಾಳ ವಸ್ತಿ ಎಚ್.ಪಿ.ಎಸ್(ಮಹಾದೇವ ನಗರ)ದಲ್ಲಿ ₹18.13 ಲಕ್ಷ, ಯತ್ನಾಳ ಎಲ್.ಟಿ-1ರಲ್ಲಿ ₹ ₹ 14 ಲಕ್ಷ ವೆಚ್ಚದ ಕಾಮಗಾರಿಗಳಿಗೆ, ಟಕ್ಕಳಕಿಯಲ್ಲಿ ಕರಪೇ ವಸ್ತಿ ಮತ್ತು ರಾವುಜಿ ನಗಗರದಲ್ಲಿ ₹ 27.71 ಲಕ್ಷ, ಹಾಗೂ ದೇಸಾಯಿ ವಸ್ತಿಯಲ್ಲಿ ₹ 14.02 ಲಕ್ಷ ವೆಚ್ಚದ ಕಾಮಗಾರಿಗಳಿಗೆ ಅವರು ಭೂಮಿಪೂಜೆ ನೆರವೇರಿಸಿದರು.ಈ ವೇಳೆ ಅರಕೇರಿ ಗ್ರಾಪಂ ಅಧ್ಯಕ್ಷೆ ಸಂಗೀತಾ ಡೊಂಬಾಳೆ, ಜಿಪಂ ಮಾಜಿ ಅಧ್ಯಕ್ಷ ಅರ್ಜುನ ಹೀರು ರಾಠೋಡ. ತುಕಾರಾಂ ರಾಠೋಡ, ಸುರೇಶ ಭಂಡಾರಿ, ನಿಂಗಪ್ಪ ಬೆಳ್ಳುಬ್ಬಿ, ಕಾಮಭಾಯಿ ಗೋಪಣೆ, ಎಸ್.ಎಚ್.ನಾಡಗೌಡ, ಭೂತಾಳಸಿದ್ದ ಒಡೆಯರ, ರಾಘು ಕುಲಕರ್ಣಿ, ಪಿಂಟು ಮಹಾರಾಜರು, ಎಸ್. ಬಿ. ಪಾಟೀಲ, ಲಕ್ಷ್ಮಣ ಚಲವಾದಿ ಮುಂತಾದವರು ಇದ್ದರು.