-70 ಕೋಟಿ ವೆಚ್ಚದಲ್ಲಿ ಶಾಶ್ವತ ನೀರು ಒದಗಿಸುವ ಕಾಮಗಾರಿ ಪರಿಶೀಲಿಸಿದ ಸಚಿವ ದರ್ಶನಾಪುರ
ಕನ್ನಡಪ್ರಭ ವಾರ್ತೆ ಶಹಾಪುರ
ನಗರದ ಹಾಗೂ ಸನ್ನತಿ ಬ್ರಿಜ್ ಕಮ್ ಬ್ಯಾರೇಜ್ ನಿಂದ ಶಹಾಪುರದ ಮಾರ್ಗ ಮಧ್ಯೆದ ಹಳ್ಳಿಗಳಿಗೆ ಶೀಘ್ರದಲ್ಲೇ ಶಾಶ್ವತ ಕುಡಿವ ನೀರು ಪೂರೈಕೆ ಮಾಡಲಾಗುವುದು. ಜನರ ಬಹುದಿನದ ಬೇಡಿಕೆ ಅತಿ ಶೀಘ್ರದಲ್ಲೇ ನೆರವೇರಲಿದೆ ಎಂದು ಸಣ್ಣ ಕೈಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.ತಾಲೂಕಿನ ಭೀಮಾ ನದಿಯಿಂದ ಸನ್ನತಿ ಬ್ರಿಡ್ಜ್ಕಮ್ ಬ್ಯಾರೇಜ್ ನೀರಿನ ಮೂಲದಿಂದ 70 ಕೋಟಿ ವೆಚ್ಚದಲ್ಲಿ ನಗರಕ್ಕೆ ಶಾಶ್ವತ ನೀರು ಒದಗಿಸುವ ಕಾಮಗಾರಿ ಪರಿಶೀಲನೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜುಲೈ ಕೊನೆಯ ವಾರ ಅಥವಾ ಅಗಸ್ಟ್ ಮೊದಲನೇ ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಂಬಂಧಪಟ್ಟ ಇಲಾಖೆಯ ಸಚಿವರಿಂದ ಲೋಕಾರ್ಪಣೆಯಾಗಲಿದೆ ಎಂದರು.
ಪೂರ್ಣ ಪ್ರಮಾಣದ ಯೋಜನೆಯಿಂದ ನಗರ ವ್ಯಾಪ್ತಿಯಲ್ಲಿ ಬರುವ 31 ವಾರ್ಡ್‌ಗಳು ಹಾಗೂ ಮಾರ್ಗ ಮಧ್ಯೆದ ಇಂಗಳಿಗಿ ಮತ್ತು ಮಡ್ನಾಳ ಗ್ರಾಮಗಳಿಗೂ ಶಾಶ್ವತ ಕುಡಿಯುವ ನೀರು ಒದಗಿಸಿದಂತಾಗುತ್ತದೆ ಎಂದು ತಿಳಿಸಿದರು.ಕೆಬಿಜೆಎನ್‌ಎಲ್ ಮುಖ್ಯ ಅಭಿಯಂತರ ಪ್ರೇಮಸಿಂಗ್, ನರಸಿಂಗರೆಡ್ಡಿ, ಅಶೋಕ ಕುಮಾರ, ರಾಜಕುಮಾರ, ಶಂಕರಗೌಡ, ಕೆಯೂಡಬ್ಲ್ಯೂಜೆ ವಿಜಯಕುಮಾರ, ಮಾಜಿ ಎಪಿಎಂಸಿ ಅಧ್ಯಕ್ಷ ಸೋಮನಗೌಡ ಚಿನ್ನಶೆಟ್ಟಿ, ಹಳ್ಳೆರಾವ ದೇಸಾಯಿ ಇದ್ದರು.
-----22ವೈಡಿಆರ್3: ಶಹಾಪುರ ತಾಲೂಕಿನ ಭೀಮಾ ನದಿಯಿಂದ ಸನ್ನತಿ ಬ್ರಿಡ್ಜ್ ಕಮ್ ಬ್ಯಾರೇಜ್ ನೀರಿನ ಮೂಲದಿಂದ 70 ಕೋಟಿ ವೆಚ್ಚದಲ್ಲಿ ಶಾಶ್ವತ ನೀರು ಒದಗಿಸುವ ಕಾಮಗಾರಿ ಸಚಿವ ದರ್ಶನಾಪುರ ಪರಿಶೀಲಿಸಿದರು.