ಕನ್ನಡಪ್ರಭ ವಾರ್ತೆ ಆಳಂದ
ಸಾರ್ವಜನಿಕರು ಬಿಸಿಲು ದಿನಗಳಲ್ಲಿ ಕೊಡೆ/ಛತ್ರಿ ಬಳಸಿರಿ ಹಾಗೂ ಸಾದ್ಯವಾದಷ್ಟು ತಂಪಾದ ಸ್ಥಳಗಳಲ್ಲಿ ಉಳಿಯಲು ಪ್ರಯತ್ನಸಿ, ತೆಳುವಾದ ಸಡಿಲವಾದ ಹತ್ತಿಯ ಉಡುಪುಗಳನ್ನು ಧರಿಸಿ,ಆದಷ್ಟು ಬಿಳಿ ಬಣ್ಣದ ಬಟ್ಟೆಗಳ ಬಳಕೆ ಒಳ್ಳೆಯದು ಎಂದರು. ಹತ್ತಿಯ ಅಥವಾ ಟರ್ಬನ್ ಟೋಪಿ ಹಾಗೂ ಕೂಲಿಂಗ್ ಗ್ಲಾಸ್ ಧರಿಸಿರಿ, ಹಿರಿಯ ನಾಗರಿಕರಿಗೆ ಮಕ್ಕಳಿಗೆ ಹೆಚ್ಚು ನೀರು ಕುಡಿಯುವುದನ್ನು ರೂಢಿಸಿಕೊಳ್ಳಬೇಕು ಎಂದರು.
ಬೆಳಗ್ಗೆ 11ರಿಂದ ಸಂಜೆ 4ರ ವರೆಗೆ ಹೊರಾಂಗಣ ದೈಹಿಕ ಚಟುವಟಿಕೆಗಳನ್ನು ಕಡಿಮೆ ಮಾಡಲು ಪ್ರಯತ್ನಿಸಿ ಸಾಕಷ್ಟು ನೀರು ಕುಡಿಯಿರಿ ಮಜ್ಜಿಗೆ ಮತ್ತು ಗ್ಲೋಕೋಸ್, ಓ.ಆರ್.ಎಸ್.ನಂತಹ ದ್ರವ ಪದಾರ್ಥಗಳನ್ನು ಹೆಚ್ಚು ಉಪಯೋಗಿಸಿರೆಂದು ಹೇಳಿದ್ದಾರೆ.ಬೇಸಿಗೆ ನೀರಿನ ದಾಹ ತಣ್ಣಿಸಲು ಸಾರ್ವಜನಿಕ ಸ್ಥಳಗಳಲ್ಲಿ ಪುರಸಭೆಯಿಂದ ಕುಡಿಯುವ ನೀರಿನ ವ್ಯವಸ್ಥೆಗೆ ಮುಖ್ಯಾಧಿಖಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ಲೋಕಸಭಾ ಸಹಾಯಕ ಚುನಾವಣಾಧಿಕಾರಿ ಮಹಾಂತೇಶ ಮುಳಗುಂದ, ನಾಡ ತಹಸೀಲ್ದಾರ ಶ್ರೀನಿವಾಸ್ ಕುಲಕರ್ಣಿ, ಗ್ರೇಡ-2 ತಹಸೀಲ್ದಾರ ಬಿ.ಜಿ. ಕುದರಿ, ಚುನಾವಣೆ ಶಿರಸ್ತೆದಾರ ಮಹೇಶ ಸಜ್ಜನ್ ಉಪಸ್ಥಿತರಿದ್ದರು.