ಬಿಸಿಸಿಐ ವಿಜಯ ಮರ್ಚೆಂಟ್ ಟ್ರೋಫಿಗೆ ಚಾಲನೆ

KannadaprabhaNewsNetwork |  
Published : Dec 08, 2024, 01:15 AM IST
ಪೋಟೋ: 7ಎಸ್‌ಎಂಜಿಕೆಪಿ10ಶಿವಮೊಗ್ಗದ ನವುಲೆಯಲ್ಲಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ಮತ್ತು ಜೆಎನ್ ಎನ್ ಸಿಇ ಕಾಲೇಜಿನ ಕ್ರಿಕೆಟ್‌ ಮೈದಾನದಲ್ಲಿ ನಡೆಯುತ್ತಿರುವ ಬಾಲಕರ 16 ವರ್ಷದೊಳಗಿನ ಬಿಸಿಸಿಐ ವಿಜಯ ಮರ್ಚೆಂಟ್ ಟ್ರೋಫಿಯ ಗ್ರೂಪ್ ಸಿ ವಿಭಾಗದ ಕ್ರಿಕೆಟ್ ಪಂದ್ಯಾವಳಿಗಳಿಗೆ ವಿಧಾನ ಪರಿಷತ್‌ ಸದಸ್ಯ ಡಿ.ಎಸ್‌.ಅರುಣ್‌ ಹಾಗೂ ಸೂಡಾ ಅಧ್ಯಕ್ಷ ಎಚ್‌.ಎಸ್‌.ಸುಂದರೇಶ್‌ ಅವರು ಚಾಲನೆ ನೀಡಿದರು. | Kannada Prabha

ಸಾರಾಂಶ

ಶಿವಮೊಗ್ಗ: ಇಲ್ಲಿನ ನವುಲೆಯಲ್ಲಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ಮತ್ತು ಜೆಎನ್‌ಎನ್‌ಸಿಇ ಕಾಲೇಜಿನ ಕ್ರಿಕೆಟ್‌ ಮೈದಾನದಲ್ಲಿ ನಡೆಯುತ್ತಿರುವ ಬಾಲಕರ 16 ವರ್ಷದೊಳಗಿನ ಬಿಸಿಸಿಐ ವಿಜಯ ಮರ್ಚೆಂಟ್ ಟ್ರೋಫಿಯ ಗ್ರೂಪ್ ಸಿ ವಿಭಾಗದ ಕ್ರಿಕೆಟ್ ಪಂದ್ಯಾವಳಿಗಳಿಗೆ ವಿಧಾನ ಪರಿಷತ್‌ ಸದಸ್ಯ ಡಿ.ಎಸ್‌.ಅರುಣ್‌ ಹಾಗೂ ಸೂಡಾ ಅಧ್ಯಕ್ಷ ಎಚ್‌.ಎಸ್‌.ಸುಂದರೇಶ್‌ ಅವರು ಚಾಲನೆ ನೀಡಿದರು.

ಶಿವಮೊಗ್ಗ: ಇಲ್ಲಿನ ನವುಲೆಯಲ್ಲಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ಮತ್ತು ಜೆಎನ್‌ಎನ್‌ಸಿಇ ಕಾಲೇಜಿನ ಕ್ರಿಕೆಟ್‌ ಮೈದಾನದಲ್ಲಿ ನಡೆಯುತ್ತಿರುವ ಬಾಲಕರ 16 ವರ್ಷದೊಳಗಿನ ಬಿಸಿಸಿಐ ವಿಜಯ ಮರ್ಚೆಂಟ್ ಟ್ರೋಫಿಯ ಗ್ರೂಪ್ ಸಿ ವಿಭಾಗದ ಕ್ರಿಕೆಟ್ ಪಂದ್ಯಾವಳಿಗಳಿಗೆ ವಿಧಾನ ಪರಿಷತ್‌ ಸದಸ್ಯ ಡಿ.ಎಸ್‌.ಅರುಣ್‌ ಹಾಗೂ ಸೂಡಾ ಅಧ್ಯಕ್ಷ ಎಚ್‌.ಎಸ್‌.ಸುಂದರೇಶ್‌ ಅವರು ಚಾಲನೆ ನೀಡಿದರು.

ಡಿ.30ವವರೆಗೆ ಪಂದ್ಯಾವಳಿಗಳು ನಡೆಯಲಿದ್ದು, ಮೊದಲ ದಿನವಾದ ಶುಕ್ರವಾರ ಕೆಎಸ್‌ಸಿಎ ಮೈದಾನದಲ್ಲಿ ಚತ್ತೀಸ್‌ಗಢ ಮತ್ತು ಹಿಮಾಚಲ ಪ್ರದೇಶದ ನಡುವೆ ಹಾಗೂ ಕೆಎಸ್‌ಸಿಎ ಮೈದಾನ-2ರಲ್ಲಿ ಪಂಜಾಬ್ ಮತ್ತು ದೆಹಲಿ ತಂಡಗಳು ಸೆಣಸಾಡಿದರೆ, ಜೆಎನ್‌ಎನ್‌ಸಿಎ ಮೈದಾನದಲ್ಲಿ ಚಂಡೀಗಢ ಮತ್ತು ಸೌರಾಷ್ಟ್ರದ ನಡುವೆ ಪಂದ್ಯಾವಳಿ ನಡೆಯಿತು.

ಡಿ.11 ರಂದು ಜೆಎಸ್‌ಸಿಎ ಮೈದಾನಗಳಲ್ಲಿ ಚಂಡೀಗಢ ಮತ್ತು ದೆಹಲಿ ನಡುವೆ, ಡಿ.12 ರಂದು ಚತ್ತೀಸ್‌ಗಢ ಮತ್ತು ಪಂಜಾಬ್ ಮತ್ತು ಹಿಮಾಚಲ ಪ್ರದೇಶ್ ಮತ್ತು ಸೌರಾಷ್ಟ್ರಗಳ ನಡುವೆ ನಡೆಯಲಿದೆ. ಡಿ.17 ರಂದು ಹಿಮಾಚಲ ಪ್ರದೇಶ ಮತ್ತು ದೆಹಲಿ, ಡಿ.18 ರಂದು ಚತ್ತೀಸ್‌ಗಢ ಮತ್ತು ಪಂಜಾಜ್‌, 19 ರಂದು ಚಂಡೀಗಢ ಮತ್ತು ಪಂಜಾಬ್ ನಡುವೆ ಪಂದ್ಯಾವಳಿಗಳು ನಡೆಯಲಿವೆ. ಡಿ.22 ರಂದು ಚತ್ತೀಸ್‌ಗಢ ಮತ್ತು ಚಂಡೀಗಢ, ಡಿ.23 ರಂದು ದೆಹಲಿ ಮತ್ತು ಸೌರಾಷ್ಟ್ರ, ಡಿ.24 ರಂದು ಹಿಮಾಚಲ ಪ್ರದೇಶ ಮತ್ತು ಪಂಜಾಬ್ ನಡುವೆ ಪಂದ್ಯಾವಳಿಗಳು ನಡೆಯಲಿದೆ.

ಡಿ.28 ರಂದು ಪಂಜಾಬ್ ಮತ್ತು ಸೌರಾಷ್ಟ್ರ, ಡಿ.29 ರಂದು ಚಂಡೀಗಡ ಮತ್ತು ಹಿಮಾಚಲ ಪ್ರದೇಶ, ಡಿ.30 ರಂದು ಚತ್ತೀಸ್ ಗಢ ಮತ್ತು ದೆಹಲಿ ನಡುವೆ ಪಂದ್ಯಾವಳಿಗಳು ನಡೆಯಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚೈತ್ರ ‌ನವರಾತ್ರಿ ನಿಮಿತ್ತ ಕನ್ನಡ ಗೀತೆ ಜತೆ ಮೋದಿ ಶುಭಾಶಯ -ದಿನಕ್ಕೊಂದು ಭಾಷೆಯ ಗೀತೆ ಪೋಸ್ಟ್‌
ಸೌದೆ ಒಲೆಗೆ ಖಾನಾವಳಿ ಮೊರೆ-ಒಂದು ಕ್ವಿಂಟಲ್ ಕಟ್ಟಿಗೆಗೆ 900 ರು. ವೆಚ್ಚ